ವಿಜಾಪುರ: ಇಲ್ಲಿಯ ಐತಿಹಾಸಿಕ ಗಗನ ಮಹಲ್ ಪಕ್ಕದ ಉದ್ಯಾನ `ಹಂದಿ ಗಾರ್ಡನ್' ಎಂದೇ ಪ್ರಸಿದ್ಧಿ. ಇಲ್ಲಿ ಮಂದಿಗಿಂತ ಹಂದಿಗಳೇ ಹೆಚ್ಚಾಗಿರುವುದು ಮತ್ತು ಈ ಉದ್ಯಾನವನ ಹಂದಿಗಳಿಗೇ ಮೀಸಲಾಗಿರುವುದು ಈ ಹೆಸರು ಬರಲು ಕಾರಣ!

ಜನ ನಿಬಿಡ ಬಸವೇಶ್ವರ ಚೌಕ್ ಮತ್ತು ಅಂಬೇಡ್ಕರ ಚೌಕ್ ರಸ್ತೆಯ ಪಕ್ಕದಲ್ಲಿ, ಅದರಲ್ಲೂ ವಿಶೇಷವಾಗಿ ಜಿಲ್ಲಾಧಿಕಾರಿಗಳ ನಿವಾಸದ ಎದುರೇ ಈ ಉದ್ಯಾನವಿದೆ. ಇಲ್ಲೊಂದು ಪ್ರಸಿದ್ಧ ಪುರಾತನ ನರಸಿಂಹ ಮಂದಿರ ವಿದೆ. ಸುತ್ತಲೂ ಐತಿಹಾಸಿಕ ಸ್ಮಾರಕಗಳು, ವಿಶಿಷ್ಟವಾದ ಗೋಡೆ ಇದೆ.

ಈ ಕಂದಕದಲ್ಲಿಯ ನೀರು ಬತ್ತುವು ದಿಲ್ಲ. ಅದರಲ್ಲಿ ಈಗ ಚರಂಡಿ ನೀರು ಸೇರಿ ಞಕೊಳ್ಳುತ್ತಿದ್ದು, ಜನ ಕಸವನ್ನು ಅದರಲ್ಲಿಯೇ ಎಸೆಯುವುದರಿಂದ ಅದು ಕೊಳಚೆಯಾಗಿ ಮಾರ್ಪಟ್ಟಿದೆ. ಜನ ಮಲ-ಮೂತ್ರ ವಿಸರ್ಜನೆ ಮಾಡು ತ್ತಿರುವುದರಿಂದ ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿರುತ್ತದೆ.

`ಈ ಉದ್ಯಾನ ವನ ಅಭಿವೃದ್ಧಿ ಪಡಿಸಬೇಕು. ಕಂದಕ ಶುಚಿಗೊಳಿಸಿ ಬೋಟಿಂಗ್ ವ್ಯವಸ್ಥೆ ಮಾಡಿ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು' ಎಂಬ ದಶಕಗಳ ಬೇಡಿಕೆಗೆ ಯಾವುದೇ ಸ್ಪಂದನೆ ದೊರೆತಿಲ್ಲ.

`ಹೃದಯ ಭಾಗದಲ್ಲಿರುವ ಈ ಉದ್ಯಾನ ಸುಂದರವಾಗಿ ಅಭಿವೃದ್ಧಿ ಪಡಿಸಿದರೆ ನಗರದ ಸೌಂದರ್ಯ ಮತ್ತಷ್ಟು ಹೆಚ್ಚಲಿದೆ. ಇಲ್ಲಿ `ಸ್ಟ್ಯಾಚು ಪಾರ್ಕ್' ನಿರ್ಮಿಸಲಾಗುವುದು. ನಗರದಲ್ಲಿರುವ ಎಲ್ಲ ಮಹಾತ್ಮರ ಪುತ್ಥಳಿಗಳನ್ನು ಈ ಉದ್ಯಾನ ವನಕ್ಕೆ ಸ್ಥಳಾಂತರಿಸುವುದು. ದಿನದ 24 ಗಂಟೆಗಳ ಕಾಲವೂ ಆ ಪುತ್ಥಳಿಗಳಿಗೆ ವಿದ್ಯುತ್ ಪೂರೈಕೆ ಮತ್ತು ಭದ್ರತೆ ಒದಗಿಸಲಾಗುವುದು' ಎಂದು ಹಿಂದಿನ ಜಿಲ್ಲಾಧಿಕಾರಿ ಶಾಂತರಾಜು ಹೇಳಿದ್ದರು ಎಂದು ಜನ ಸ್ಮರಿಸುತ್ತಿದ್ದಾರೆ.
ಆದರೆ, ಜಿಲ್ಲಾಧಿಕಾರಿಗಳ ಈ ಪ್ರಸ್ತಾವ ಅವರ ವರ್ಗಾವಣೆಯೊಂದಿಗೆ ಮರೆಯಾಗಿ ಬಿಟ್ಟಿದೆ ಎಂಬ ಮಾತೂ ಕೇಳಿ ಬರುತ್ತಿವೆ.

`ವಿಜಾಪುರ ನಗರದ ಜನಸಂಖ್ಯೆ 3.25 ಲಕ್ಷ ಮಿಕ್ಕಿದೆ. ಸದ್ಯವೇ ಇದು ಮಹಾನಗರ ಪಾಲಿಕೆಯ ಸ್ಥಾನಮಾನ ಪಡೆಯಲಿದೆ. ಇಡೀ ನಗರದಲ್ಲಿ ಹುಡುಕಿದರೂ ನಗರಸಭೆಯ ಒಂದೇ ಒಂದು ಸುಸಜ್ಜಿತ ಉದ್ಯಾನ ಇಲ್ಲ' ಎಂಬುದು ಜನತೆಯ ಬೇಸರ.

`ಗಗನ ಮಹಲ್ ಉದ್ಯಾನಕ್ಕೆ ಹೊಂದಿಕೊಂಡಿರುವ ಕಂದಕ ಪಾಳು ಬಿದ್ದಿದೆ. ಈ ಪ್ರದೇಶ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಕೋಟೆ ಹೊರಗಿನ ಕಂದಕವನ್ನು ಅಲ್ಲಿಯ ಮಹಾನಗರ ಪಾಲಿಕೆ ಅಭಿವೃದ್ಧಿ ಪಡಿಸಿದೆ. ಅದಕ್ಕೆ ಪ್ರವೇಶ ಶುಲ್ಕವನ್ನು ವಿಧಿಸುತ್ತಿದೆ.

ಅದೇ ಮಾದರಿಯಲ್ಲಿ ಪುರಾತತ್ವ ಇಲಾಖೆ, ಜಿಲ್ಲಾ ಆಡಳಿತ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರಗಳು ಈ ಹಂದಿ ಗಾರ್ಡನ್ನ್ನು ಅಭಿವೃದ್ಧಿ ಪಡಿಸಬೇಕು' ಎನ್ನುತ್ತಾರೆ ಇಲ್ಲಿಯ ಕೆ.ಬೇಪಾರಿ. ಈ ಉದ್ಯಾನ ಅಭಿವೃದ್ಧಿ ಪಡಿಸಿ, ಬೋಟಿಂಗ್ ಸೌಲಭ್ಯ ಕಲ್ಪಿಸಿದರೆ ಅದು ಹೇಗೆ ಕಂಗೊಳಿಸಲಿದೆ ಎಂಬ ಕಾಲ್ಪನಿಕ ಚಿತ್ರವನ್ನೂ ಅವರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.