ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಡಗೇರಾ: ಮನ ಸೂರೆಗೊಂಡ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

Published : 15 ಆಗಸ್ಟ್ 2024, 15:40 IST
Last Updated : 15 ಆಗಸ್ಟ್ 2024, 15:40 IST
ಫಾಲೋ ಮಾಡಿ
Comments

ವಡಗೇರಾ: ತಾಲ್ಲೂಕು ಆಡಳಿತ ವತಿಯಿಂದ 78 ಸ್ವಾತಂತ್ರೋತ್ಸವದ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ವಿವಿಧ ಶಾಲೆಗಳ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಂಠಿ ತಾಂಡಾ, ಉರ್ದು ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರ ಡಿಡಿಯು ಶಾಲೆ ಕಸ್ತೂರಬಾ ಬಾ ಶಾಲೆ, ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಮಾದಿರಯ ಪ್ರಾಥಮಿಕ ಶಾಲೆ, ಶ್ರೀ ಗುರು ಪ್ರಸನ್ನ ಶಾಲೆ, ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ, ಸರ್ವೋದಯ ಶಾಲೆಗಳು ಭಾಗವಹಿಸಿದ್ದವು.

ಇದರಲ್ಲಿ ಪ್ರಥಮ ಡಿ.ಡಿ.ಯು ಶಾಲೆ, ದ್ವಿತೀಯ ಜಂಟಿಯಾಗಿ ಶ್ರೀ ಗುರು ಪ್ರಸನ್ನ ಹಾಗೂ ಸ್ವಾಮೀ ವಿವೇಕಾನಂದ ಶಾಲೆ, ತೃತೀಯ ಸ್ಥಾನವನ್ನು ಸರ್ಕಾರಿ ಉರ್ದು ಶಾಲೆ ಪಡೆದುಕೊಂಡಿತು.

ವಡಗೇರಾ ತಾಲ್ಲೂಕಾ ಕೇಂದ್ರವಾಗಿ 7 ವರ್ಷ ಕಳೆಯುತ್ತಾ ಬಂದರೂ ಇಲ್ಲಿಯವರೆಗೂ ತಾಲ್ಲೂಕು ಆಡಳಿತ ವತಿಯಿಂದ ಶಾಲಾ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರವನ್ನು ಹಮ್ಮಿಕೊಂಡಿರಲಿಲ್ಲ. ಈ ಬಗ್ಗೆ  ಪೂರ್ವಬಾವಿ ಸಭೆಯಲ್ಲಿ ಸಾರ್ವಜನಿಕರು ವಿವಿಧ ಶಾಲಾ ಮಕ್ಕಳಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮನವಿ ಮಾಡಿದ್ದರು.  ತಹಶೀಲ್ದಾರ್‌ ಶ್ರೀನಿವಾಸ ಚಾಪೆಲ್ ಸ್ಪಂದಿಸಿ ಕಾರ್ಯಕ್ರಮ ಆಯೋಜಿಸಿದ್ದು, ಪ್ರಶಂಸೆಗೆ ಪಾತ್ರವಾಯಿತು.

ಕೈಕೊಟ್ಟ ವಿದ್ಯುತ್‌:

ತಾಲ್ಲೂಕು ಆಡಳಿತ ವತಿಯಿಂದ ಮಕ್ಕಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ಸಾಂಸ್ಕೃತಿಕ ಹಾಗೂ ಮನರಂಜನೆಯ ಕಾರ್ಯಕ್ರಮ ಪ್ರದರ್ಶನದ ವೇಳೆ ವಿದ್ಯುತ್ ಆಗಾಗ ಕೈಕೊಡುತ್ತಿರುವುದು ಎಲ್ಲರಿಗೂ ಬೇಸರ ತರಿಸಿತು.

ತಾಲ್ಲೂಕಾ ಆಡಳಿತ ವತಿಯಿಂದ ಕಾರ್ಯಕ್ರಮಕ್ಕೆ ವಿದ್ಯುತ್ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಟ್ಟಣದ ಜೆಸ್ಕಾಂ ಅಧಿಕಾರಿಗಳಿಗೆ  ಸೂಚಿಸಲಾಗಿತ್ತು. ಆದರೂ ಸಹ ವಿದ್ಯುತ್ ಕೈಕೊಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT