ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಡವರ ಬದುಕಿನ ಮೇಲೆ ಬರೆ ಎಳೆದ ಸರ್ಕಾರ’

ಬೆಲೆ ಏರಿಕೆ ವಿರೋಧಿಸಿ ಕರ್ನಾಟಕ ನವನಿರ್ಮಾಣ ಸೇನೆ ಪ್ರತಿಭಟನೆ
Published 28 ಜೂನ್ 2024, 16:17 IST
Last Updated 28 ಜೂನ್ 2024, 16:17 IST
ಅಕ್ಷರ ಗಾತ್ರ

ಯಾದಗಿರಿ: ‘ಪೆಟ್ರೋಲ್, ಡೀಸೆಲ್ ಹಾಗೂ ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಸರ್ಕಾರ ಬಡ ಜನರ ಬದುಕಿನ ಮೇಲೆ ಬರೆ ಎಳೆಯುತ್ತಿದೆ’ ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಜಯಕುಮಾರ ಮಾಸಾನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆ ವಿರೋಧಿಸಿ ಕರ್ನಾಟಕ ನವನಿರ್ಮಾಣ ಸೇನೆ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ,‘ರಾಜ್ಯದಲ್ಲಿ ಬಹುತೇಕ ಸಾಮಾನ್ಯ ಜನತೆ ಬಡತನ ರೇಖೆಗಿಂತಲೂ ಕೆಳ ಮಟ್ಟದಲ್ಲಿದ್ದಾರೆ. ಆಳರಸರ ಅನುಕೂಲಕ್ಕಾಗಿ ಮನಸೋ ಇಚ್ಛೆ ಬೆಲೆ ಏರಿಕೆ ಮಾಡಿ, ದೈನಂದಿನ ಬದುಕಿನ ಜೊತೆಗೆ ಸರ್ಕಾರ ಆಟವಾಡುತ್ತಿದೆ’ ಎಂದರು.

ಸಾರಿಗೆ ಸಚಿವರು ಮುಂದಿನ ದಿನಗಳಲ್ಲಿ ಬಸ್ ಟಿಕೆಟ್ ಬೆಲೆಯೂ ಹೆಚ್ಚಿಸುವ ಪ್ರಸ್ತಾವ ಮಾಡುವ ಮಾಹಿತಿ ಸಿಕ್ಕಿದೆ. ಕೂಡಲೇ ಸರ್ಕಾರ ಬೆಲೆ ಏರಿಕೆ ನಿಲ್ಲಿಸಬೇಕು. ಈಗಾಗಲೇ ಮಾಡಲಾದ ಏರಿಕೆಯನ್ನೂ ಇಳಿಕೆ ಮಾಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ದೊಡ್ಡಮಟ್ಟದ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಲಿದೆ. ಸಚಿವರ ಎಲ್ಲಾ ಕಾರ್ಯಕ್ರಮಗಳಲ್ಲೂ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಸಿದರು.

ಸೇನೆಯ ವಿಜಯಕುಮಾರ ದಾಸನಕೇರಿ, ಬಸ್ಸುಗೌಡ ಚಟ್ನಳ್ಳಿ, ಮೋಹನಕುಮಾರ ಮ್ಯಾಗೇರಿ, ಹರೀಶಕುಮಾರ ವಾಲಿ, ದೀಪಕ ಒಡೆಯರ್, ಅಜಯಕುಮಾರ ಮೀಸಿ, ಪ್ರಶಾಂತ ಸುಂಗಲ್ಕರ್, ಮಸಲಿಂಗ ನಾಯಕ, ಬಾಬಾ ಖಾನ್, ಮೈಬೂಬ್, ಮೈಲಾರಿ ಕಾವಲಿ, ಮಂಜುನಾಥ ಹಾವರಗಿ, ಹಣಮಂತ ನಾಯಕ, ಶಂಕ್ರಯ್ಯಸ್ವಾಮಿ ಕೊಯಿಲೂರ, ಹಣಮಂತ ಕೊನೇರ, ಶರಣಬಸವ ಹಯ್ಯಾಳಕರ್, ಗೌತಮ ಅರಿಕೇರಿ, ವಿಶ್ವನಾಥ ಮ್ಯಾಗೇರಿ, ತ್ಯಾಗರಾಜ ಸಾಹುಕಾರ, ಗಣೇಶ, ಮಂಜುನಾಥ ಬ್ಯಾಗರ್, ಮಲ್ಲು ಬ್ಯಾಗರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT