ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆಯಲ್ಲಿ ತೇಲಿ ಬಂದ ಕಾಡುಕೋಣ!

Last Updated 8 ಫೆಬ್ರುವರಿ 2023, 16:15 IST
ಅಕ್ಷರ ಗಾತ್ರ

ಶಹಾಪುರ: ಶಹಾಪುರ ಶಾಖಾ ಕಾಲುವೆಯಲ್ಲಿ ಕಾಡುಕೋಣ ತೇಲಿ ಬಂದಿದ್ದ ಕಾಡು ಕೋಣವನ್ನು ರಕ್ಷಿಸಿ ಚಿಕಿತ್ಸೆಗೆ ತೆಗೆದುಕೊಂಡು ಹೋಗುವಾಗ ಹೃದಯಾಘಾತದಿಂದ ಮೃತಪಟ್ಟಿದೆ.

‘ಕಾಡುಕೋಣ ಕಾಲುವೆಯಲ್ಲಿ ತೇಲಿ ಬರುವುದನ್ನು ಕಂಡ ಜನರು ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡದ ಸಹಾಯದಿಂದ ಹಗ್ಗದಿಂದ ಮೇಲೆತ್ತಿ ಚಿಕಿತ್ಸೆಗೆಂದು ಪಶು ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯ ಹೃದಯಾಘಾತದಿಂದ ಸಾವನ್ನಪ್ಪಿದೆ’ ಎಂದು ಉಪ ಅರಣ್ಯ ವಲಯಧಿಕಾರಿ ಕಾಶಪ್ಪ ತಿಳಿಸಿದ್ದಾರೆ.

‘ಕಾಡುಕೋಣ ಈ ಭಾಗದಲ್ಲಿ ಕಂಡು ಬರುವದಿಲ್ಲ. ದಟ್ಟ ಅರಣ್ಯ ಇಲ್ಲಿ ಇಲ್ಲ. ಬೇರೆ ಕಡೆಯಿಂದ ಕಾಲುವೆಯಲ್ಲಿ ಬಿದ್ದಿದೆ. ಕಾಲುವೆಯಿಂದ ಮೇಲಕ್ಕೆ ಹತ್ತಲು ಸುಮಾರು ದೂರದಿಂದ ಹರಿದುಕೊಂಡು ಈಜುತ್ತಾ ಬಂದಿದೆ. ಬಹಳ ಸೂಕ್ಷ್ಮ ಪ್ರಾಣಿ ಇದಾಗಿದ್ದರಿಂದ ಜನರ ಗದ್ದಲಕ್ಕೆ ಗಾಬರಿಗೊಂಡಿದೆ. ಹೃದಯಾಘಾತವಾಗಿ ಮೃತಪಟ್ಟಿದೆ. ಮೃತ ಪ್ರಾಣಿ ದೇಹವನ್ನು ಅರಣ್ಯ ಇಲಾಖೆ ನಿಯಮದಂತೆ ಸುಡಲಾಗುತ್ತದೆ’ ಎಂದು ಅವರು ಪ್ರಜಾವಾಣಿಗೆ ಮಾಹಿತಿ ನೀಡಿದರು.

ತಾಲ್ಲೂಕಿನ ವನದುರ್ಗದಿಂದ ಹೊಸಕೇರಾ ಮಧ್ಯದ ಎಸ್ಬಿಸಿ ಕಾಲುವೆಯಲ್ಲಿ ಕಾಡುಕೋಣ ತೇಲುತ್ತಿರುವುದು ಕಂಡು ಗಾಬರಿಗೊಂಡ ಗ್ರಾಮದ ಶಿವರಾಜ ವನದುರ್ಗ ಇನ್ನಿತರ ಕೆಲ ಜನತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಎಚ್ಚೆತ್ತುಕೊಂಡ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಸುರಪುರ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಮೌಲಾಲಿಸಾಬ ನೇತೃತ್ವದ ತಂಡ ಗ್ರಾಮಸ್ಥರೊಂದಿಗೆ ಹರಸಾಹಸ ಪಟ್ಟು ಕಾಡುಕೋಣವನ್ನು ಸೆರೆ ಹಿಡಿದು ಚಿಕಿತ್ಸೆಗೆ ತೆಗೆದುಕೊಂಡು ಸಾಗುವಾಗುವಾಗ ಮೃತಪಟ್ಟಿತು.

ಗಸ್ತು ಪಾಲಕ ಸಿದ್ದಣ್ಣ ಹಾಗೂ ಅರಣ್ಯ ವೀಕ್ಷಕರಾದ ದುರ್ಗಣ್ಣ, ಭೀಮರಡ್ಡಿ ಹಾಗೂ ಗ್ರಾಮಸ್ಥರು ಇದ್ದರು.

ಕಾಡುಕೋಣ ಜನರ ಗದ್ದಲದಿಂದ ನಡುವೆ ಗಾಬರಿಗೊಂಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು ಗೊತ್ತಾಗಿದೆ. ನೀರು ಕುಡಿದು ಮೇಲೆ ಬರಲಾಗದೆ ಪರದಾಡುತ್ತಾ, ಆಹಾರವಿಲ್ಲದೆ ತೇಲಿ ಬಂದಿರಬಹುದು. ದುರಾದೃಷ್ಟವಶಾತ್ ಕಾಡುಕೋಣ ಮೃತಪಟ್ಟಿದೆ.

-ಡಾ.ರಾಜೂ ರಾಠೋಡ, ವೈದ್ಯಾಧಿಕಾರಿ, ಪಶು ಆಸ್ಪತ್ರೆ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT