ಜೈನ ಧರ್ಮ ಸನ್ಯಾಸ ದೀಕ್ಷೆ ಸ್ವೀಕರಿಸಿದ 20ರ ಯುವತಿ

ಯಾದಗಿರಿ: ಮಹಾರಾಷ್ಟ್ರದ ರತ್ನಗಿರಿ ಮೂಲದ 20 ವರ್ಷದ ಯುವತಿ ಯಶಿತಾ ಶುಕ್ರವಾರ ನಗರದಲ್ಲಿ ಜೈನ ಧರ್ಮದ ‘ವಿಧೇಯ ದೀಕ್ಷೆ’ ಪಡೆದರು.
ನಗರದ ಜೈನ ಸಮಾಜದ ಮುಖಂಡ ವಿನಯ ಗಾಂಧಿ ಅವರ ಪತ್ನಿಯ ತಂಗಿ ಮೀನಾಕುಮಾರಿ ಹಾಗೂ ದೀಪಕ್ ಕುಮಾರ ದಂಪತಿಯ ಏಕೈಕ ಪುತ್ರಿ ಯಶಿತಾ ಬಿ.ಕಾಂ ಪದವಿ ಪಡೆದಿದ್ದಾರೆ.
ನಗರದ ಹೊಸಳ್ಳಿ ಕ್ರಾಸ್‌ನಿಂದ ಶುಭಂ ಪೆಟ್ರೋಲ್ ಬಂಕ್ ಸಮೀಪದ ಜೈನ ಮಂದಿರದ ವರೆಗೆ ಮೆರವಣಿಗೆ ನಡೆಸಲಾಯಿತು. ಜೈನ ಮಂದಿರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.
‘ಸನ್ಯಾಸತ್ವದ ಪೂರ್ಣ ಪ್ರಮಾಣದ ದೀಕ್ಷೆ 2021 ಮಾರ್ಚ್ 21 ರಂದು ಪುಣೆಯಲ್ಲಿ ನಡೆಯಲಿದೆ’ ಎಂದು ಜೈನ ಸಮಾಜದ ಮುಖಂಡ ವಿನಯ ಗಾಂಧಿ ಹೇಳಿದರು.
ಈ ವೇಳೆ ಸಮುದಾಯದ ಮುಖಂಡರಾದ ಅನಿಲಕುಮಾರ ಕುಂದನ್‌ಮಲ್ ಗಾಂಧಿ, ದೇವೀಂದ್ರ ಕುಮಾರ, ಅರವಿಂದ ಕುಮಾರ ಗಾಂಧಿ, ಪರಸ್‌ಮಾಲ್ ಬಂಢಾರಿ, ರಮೇಶ ಕಾಂಗಟಾನಿ, ವಿನೋದ ಬಂಢಾರಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.