ಶುಕ್ರವಾರ, ಫೆಬ್ರವರಿ 26, 2021
32 °C
ಅನಂತಪ್ಪ ಅವರಿಗೆ ಬಾಗಲಕೋಟೆ ವಿಶ್ವವಿದ್ಯಾಲಯದ ‘ಶ್ರೇಷ್ಠ ತೋಟಗಾರಿಕಾ ರೈತ’ ಪ್ರಶಸ್ತಿ ಗರಿ

ರೈತನ ಕೈ ಹಿಡಿದ ಗೋಡಂಬಿ ಬೇಸಾಯ

ಮಲ್ಲಿಕಾರ್ಜುನ ಬಿ.ಅರಿಕೇರಕರ್ Updated:

ಅಕ್ಷರ ಗಾತ್ರ : | |

Prajavani

ಸೈದಾಪುರ: ಸಮೀಪದ ಗೌಡಗೇರಾ ಗ್ರಾಮದ ಅನಂತಪ್ಪ ಮಂಗ್ಯಾನಾಯಕ ರಾಥೋಡ್ ತಮ್ಮ ಮಳೆಯಾಶ್ರಿತ ಜಮೀನಿನಲ್ಲಿ ಗೋಡಂಬಿ ಬೇಸಾಯ ಮಾಡಿ ಕೈ ತುಂಬ ಸಂಪಾದನೆ ಮಾಡುವ ಜತೆಗೆ ಸುತ್ತಮುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.

39 ವರ್ಷದ ಅನಂತಪ್ಪ ಐಟಿಐ ಮುಗಿಸಿದ್ದಾರೆ. ತಮ್ಮ 20 ಎಕರೆ ಜಮೀನಿನಲ್ಲಿ ಸುಮಾರು 13 ಎಕರೆಯಲ್ಲಿ ಗೇರು ಕೃಷಿ ಮಾಡಿದ್ದು, ಅಲ್ಲಿ ಉಲ್ಲಾಳ–1 ಮತ್ತು 3, ವೆಂಗುರ್ಲಾ– 4 ಮತ್ತು 7 ತಳಿಯ ಸುಮಾರು 1,500 ಸಸಿಗಳನ್ನು ಬೆಳೆದಿದ್ದಾರೆ. ಅದರ ಜತೆಗೆ 3 ಎಕರೆ ಜಮೀನಿನಲ್ಲಿ 1,200 ಪೇರಲ ಮರಗಳನ್ನು ಬೆಳೆದಿದ್ದಾರೆ. ಉಳಿದ ಜಮೀನಿನಲ್ಲಿ ಅಂತರ ಬೆಳೆಗಳಾಗಿ ರಕ್ತ ಚಂದನ, ಟೊಮೆಟೊ, ಹೆಸರು, ಶೇಂಗಾ ಸೇರಿಂದತೆ ತರಹೇವಾರಿ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ.

ತೋಟಗಾರಿಕೆ ಇಲಾಖೆ ಸಹಾಯದಿಂದ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಮಳೆ ನೀರು ಕೊಯ್ಲು ಪದ್ದತಿಯಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಂಡು ತಮ್ಮ ಜಮೀನಿನಲ್ಲಿ 3 ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ.

ಕಳೆದ ವರ್ಷ ಸುಮಾರು 9 ಕ್ವಿಂಟಲ್ ಗೋಡಂಬಿ ಬಳೆದಿದ್ದು, ಅದರಿಂದಲೇ ₹85 ಸಾವಿರ ಆದಾಯ ಗಳಿಸಿದ್ದಾರೆ.

ಟ್ರ್ಯಾಕ್ಟರ್, ಬೀಜ ಮತ್ತು ಗೊಬ್ಬೆ ಬಿತ್ತುವ ಯಂತ್ರ, ಕಳೆ ತೆಗೆಯುವ ಯಂತ್ರ ಹೊಂದಿದ್ದು, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ.

ಅವರ ಬಳಿ 1 ಹಸು, 2 ಎತ್ತು, 10 ಕುರಿ ಮತ್ತು 20 ಕೋಳಿಗಳಿವೆ. ಗೋಡಂಬಿ, ಪೇರಲ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ತರಕಾರಿ ಮಾರಾಟದಿಂದ ಪ್ರತಿ ವರ್ಷ ₹4 ಲಕ್ಷ ಆದಾಯ ಗಳಿಸುವ ಮೂಲಕ ರೈತರಿಗೆ ಸ್ಫೂರ್ತಿಯಾಗಿದ್ದಾರೆ.

ಅವರ ತೋಟಗಾರಿಕೆ ಕೃಷಿಯಲ್ಲಿನ ಸಾಧನೆ ಗಮನಿಸಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯವು 2020– 21ರಲ್ಲಿ ‘ಶ್ರೇಷ್ಠ ತೋಟಗಾರಿಕೆ ರೈತ’ ಪ್ರಶಸ್ತಿ ನೀಡಿ ಗೌರವಿಸಿದೆ. ಮಾಹಿತಿಗೆ ಮೊ: 8150852123 ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು