ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಭಾವಿ | ಆಸ್ಪತ್ರೆಗೆ ಅಗತ್ಯ ಹುದ್ದೆಗಳು ಮಂಜೂರು: ಸಚಿವ ಶರಣಬಸಪ್ಪಗೌಡ

Published 14 ಡಿಸೆಂಬರ್ 2023, 13:50 IST
Last Updated 14 ಡಿಸೆಂಬರ್ 2023, 13:50 IST
ಅಕ್ಷರ ಗಾತ್ರ

ಕೆಂಭಾವಿ: ‘30 ಹಾಸಿಗೆಗಳುಳ್ಳ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಈಗಾಗಲೇ ಮಂಜೂರಾಗಿರುವ 11 ಹುದ್ದೆಗಳ ಜೊತೆ ಅಗತ್ಯವಿರುವ ವಿವಿಧ ವೃಂದದ 22 ಹುದ್ದೆಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ’ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದ್ದಾರೆ.

ಪಟ್ಟಣದ ನಾಗರಿಕರ ಬಹು ದಿನಗಳ ಬೇಡಿಕೆಯಾಗಿದ್ದ ಭರವಸೆಯನ್ನು ಈಡೇರಿಸಲಾಗಿದೆ. 1994-95 ರಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆರಿದ್ದರೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವಷ್ಟೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಅನೇಕ ಬಾರಿ ಸಾರ್ವಜನಿಕರು ಈ ಬಗ್ಗೆ ಗಮನಕ್ಕೆ ತಂದಾಗ ಸರ್ಕಾರಕ್ಕೆ ಮಾಹಿತಿ ನೀಡಿ ಹೆಚ್ಚುವರಿ ಹುದ್ದೆಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ಹೇಳಿದರು. ಸಚಿವರ ಕಾರ್ಯಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ಮಂಜೂರಾದ ಹುದ್ದೆಗಳು : ಹೆಚ್ಚುವರಿಯಾಗಿ ಫಿಜಿಷಿಯನ್ (ಜನರಲ್ ಮೆಡಿಸಿನ್), ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಅರವಳಿಕೆ ತಜ್ಞರು, ದಂತ ಆರೋಗ್ಯಾಧಿಕಾರಿ, ಹಿರಿಯ ಶುಶ್ರೂಷಕರು, ಶುಶ್ರೂಷಕರು 4 ಜನ, ಕಿರಿಯ ಮೆಡಿಕಲ್ ರೇಡಿಯೊ ಟೆಕ್ನಾಲಜಿಸ್ಟ್, ಕಚೇರಿ ಅಧೀಕ್ಷಕರು, ಎಫ್‍ಡಿಸಿ, ಕ್ಷ ಕಿರಣ ಸಹಾಯಕರು, ಪ್ರಯೋಗಶಾಲಾ ಸಹಾಯಕರು, ಗ್ರೂಪ್ ಡಿ 6 ಜನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT