ಯಾದಗಿರಿ: ಇಲ್ಲಿನ ಗಂಜ್ ವೃತ್ತದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಕಟ್ಟೆ ನಿರ್ಮಾಣದ ಭೂಮಿಪೂಜೆಯನ್ನು ಕೋಲಿ, ಕಬ್ಬಲಿಗ ಸಮಾಜದ ಮುಖಂಡರು ಭಾನುವಾರ ನೆರವೇರಿಸಿದರು.

ಈ ವೇಳೆ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ‘ಸಮಾಜದ ಬಹುದಿನಗಳ ಬೇಡಿಕೆಯಾಗಿದ್ದ ಮೂರ್ತಿ ಪ್ರತಿಷ್ಠಾಪನೆಯ ಕಾಲ ಕೂಡಿಬಂದಿದೆ. ಮೂರ್ತಿ ಸ್ಥಾಪಿಸುವುದರ ಜತೆಗೆ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು’ ಎಂದರು.

ಸಮಾಜದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಮಾತನಾಡಿ, ‘ಕಟ್ಟೆ ಪೂಜೆ ನೆರವೇರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯ ಕೋಲಿ, ಕಬ್ಬಲಿಗ ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಆರ್ಟಿಒ ಕಚೇರಿ ಸಮೀಪದ ಕಟ್ಟಡದಲ್ಲಿ ವಿದ್ಯಾರ್ಥಿ ವಸತಿ ನಿಲಯ ತೆರೆಯಲಾಗುವುದು. ಜನವರಿ 21ರಂದು ನಿಜಶರಣ ಅಂಬಿಗರ ಚೌಡಯ್ಯ ಅವರು ಜಯಂತಿ ಇದ್ದು, ಅದೇ ದಿನ ವಿದ್ಯಾರ್ಥಿನಿಲಯವನ್ನು ಆರಂಭಿಸಲಾಗುವುದು. ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದರು.

ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಅನಪುರ ಮಾತನಾಡಿ, ‘12ನೇ ಶತಮಾನದ ಬಸವಾದಿ ಶರಣರಲ್ಲಿ ನಮ್ಮ ಸಮಾಜದ ಗುರುವಾದ ನಿಜಶರಣ ಅಂಬಿಗರ ಚೌಡಯ್ಯ ಅವರು ದೊಡ್ಡ ಕ್ರಾಂತಿಕಾರಿ ವಚನಕಾರರಾಗಿದ್ದರು’ ಎಂದರು.

ಈ ವೇಳೆ ಮುಖಂಡರಾದ ಮಹೇಶ ಅನಪುರ,ನಿಂಗಪ್ಪ ಜಾಲಗಾರ, ಮಲ್ಲು ಪೂಜಾರಿ, ರಾಜಪ್ಪ ಸೈದಾಪುರ್, ಮುದುಕಪ್ಪ ಚಾಮನಹಳ್ಳಿ, ಮಹೇಶ್ ಬಾಡ್ಯಾಳ್, ಅಯ್ಯಪ್ಪ ನಾಯಕೋಡಿ, ಬಸವರಾಜ್ ಕೊಲ್ಕರ್, ಮಲ್ಲಿಕಾರ್ಜುನ್ ಗಿರ್ಮಿಸಿ, ದುರ್ಗಪ್ಪ ಹನುಮನಗರ, ಮರೆಪ್ಪ ಗೋಸಿ, ಸಿ.ಎಂ. ಪಟ್ಟೆದಾರ, ಸಣ್ಣ ಹಣಮಂತಪ್ಪ ಬಳಿಚಕ್ರ, ಶಂಕರ್ ಗೋಸಿ, ಮಹಾದೆವಪ್ಪ ಗಣಪೂರ, ಶರಣಪ್ಪ ಮೋಟ್ನಳ್ಳಿ, ಭೀಮರೆಡ್ಡಿ ಎಸ್.ಯರಗೋಳ ಸೇರಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.