ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಸಾಮಾನ್ಯ ಸಭೆ

Last Updated 14 ಡಿಸೆಂಬರ್ 2019, 10:16 IST
ಅಕ್ಷರ ಗಾತ್ರ

ಸುರಪುರ: ‘ಮಾರುಕಟ್ಟೆಯ ವ್ಯಾಪ್ತಿಯ ಹುಣಸಗಿ, ಹಸನಾಪುರ ಸೇರಿದಂತೆ ಉಪ ಮಾರುಕಟ್ಟೆ ವ್ಯಾಪ್ತಿಯಲ್ಲಿ 2018-19ನೇ ಸಾಲಿನ ₹7 ಕೋಟಿ 65 ಲಕ್ಷ ವೆಚ್ಚದ 11 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ’ ಎಂದು ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಹೇಳಿದರು.

ಪಟ್ಟಣದಲ್ಲಿ ಎಪಿಎಂಪಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗುತ್ತೇದಾರರು ಇದುವರೆಗೂ ಕಾಮಗಾರಿ ಆರಂಭಿಸಿಲ್ಲ. ತ್ವರಿತವಾಗಿ ಕಾಮಗಾರಿ ಆರಂಭಿಸಲು ಏಜೆನ್ಸಿ ಯವರಿಗೆ ಸುತ್ತೋಲೆ ಕಳುಹಿಸುವಂತೆ’ ಸಮಿತಿ ಕಾರ್ಯದರ್ಶಿ ಸುರೇಶ ಬಾಬು ಅವರಿಗೆ ಸೂಚಿಸಿದರು.

ಪ್ರಸಕ್ತ ಸಾಲಿನಲ್ಲಿ ಖಾನಾಪುರ ಮಾರುಕಟ್ಟೆಯ ಮುಖ್ಯದ್ವಾರದದಲ್ಲಿ ಕಬ್ಬಿಣದ ಕಮಾನು ಮತ್ತು ಗೇಟ್ ನಿರ್ಮಾಣ, ಅತಿಥಿ ಗೃಹದ ಶೌಚಾಲಯಕ್ಕೆ ಟ್ಯಾಂಕ್, ನೀರಿನ ವ್ಯವಸ್ಥೆಗಾಗಿ ಹೊಸ ಕೊಳವೆಬಾವಿ, ಕಾಂಪೌಂಡ ಗೋಡೆ, ಹುಣಸಗಿ ಉಪ ಮರುಕಟ್ಟೆ ಮುಖ್ಯದ್ವಾರಕ್ಕೆ 2 ಬದಿಯ ಗೇಟ್ ಮತ್ತು ಕಬ್ಬಿಣದ ಕಮಾನು ನಿರ್ಮಾಣ, ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಲಾಯಿತು.

ಉಪಾಧ್ಯಕ್ಷ ರಾಜಶೇಖರ ದೇಸಾಯಿ, ಸದಸ್ಯರಾದ ದೇವಣ್ಣ ಮಲಗಲದಿನ್ನಿ, ದುರ್ಗಪ್ಪ ಗೋಗಿಕರ್, ಅಪ್ಪಾಸಾಹೇಬಗೌಡ ಪಾಟೀಲ, ಸಂಗನಗೌಡ ಪಾಟೀಲ, ಬಸವರಾಜ ಆರ್ಯಶಂಕರ, ಮಲ್ಲಿಕಾರ್ಜುನ, ಶಂಕ್ರಮ್ಮ ಪೂಜಾರಿ, ಮಲ್ಲಣ್ಣ ಸಾಹು, ಅಮರೇಶ ಸಾಹು ಕಟ್ಟಿಮನಿ, ಸಣ್ಣಕ್ಕೆಪ್ಪ ಸಾಹು ಮಾಲಗತ್ತಿ,, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT