ಮಂಗಳವಾರ, ಫೆಬ್ರವರಿ 25, 2020
19 °C

ಪೌರತ್ವ ತಿದ್ದುಪಡಿ ವಿರೋಧಿಸಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಕರ್ನಾಟಕ ರಾಬ್ಟಾ ಇ–ಮಿಲ್ಲತ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ದೇಶದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಧರ್ಮಾಧರಿತವಾಗಿ ಪೌರತ್ವ ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದು ಭಾರತದ ಜಾತ್ಯತೀತ ಆತ್ಮವನ್ನು ಕೊಲ್ಲುವ ಪ್ರಯತ್ನದ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಮಸೂದೆ, 2019 ಮಸೂದೆಯು ನೇರವಾಗಿ ಸಂವಿಧಾನದ ಪರಿಚ್ಛೇದ 5-11, 14 ರ ಉಲ್ಲಂಘನೆಯಾಗಿದ್ದು, ಇದು ಜನರನ್ನು ಧರ್ಮಾಧರಿತವಾಗಿ ವಿಭಜಿಸಿ ವೋಟ್ ಬ್ಯಾಂಕ್ ಭದ್ರ ಪಡಿಸುವುದಕ್ಕೆ ಕೇಂದ್ರ ಸರ್ಕಾರ ರೂಪಿಸಿರುವ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.

ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನೆರೆ ರಾಷ್ಟ್ರಗಳಲ್ಲಿ ನಡೆಯುತ್ತಿರುವ ದೌರ್ಜನ್ಯದಿಂದ ರಕ್ಷಣೆ ನೀಡಲು ಈ ಮಸೂದೆ ಮಂಡಿಸಲಾಗಿದೆ ಎಂಬುವುದು ಕೇಂದ್ರ ಸರ್ಕಾರದ ವಾದ. ಆದರೆ, ನಿರಂತರವಾಗಿ ದೌರ್ಜನ್ಯಕ್ಕೀಡಾಗುತ್ತಿರುವ ನೆರೆಯ ಮಯನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಂ, ಶ್ರೀಲಂಕಾ ತಮಿಳು ಹಿಂದುಗಳಿಗೆ, ಚೀನಾದಲ್ಲಿ ಉಲುಘ್ವೇರ್ ಮುಸ್ಲಿಮರನ್ನು ಕಡೆಗಣಿಸಿರುವುದು ಇವರ ಗುಪ್ತ ಕಾರ್ಯಸೂಚಿಯ ಭಾಗ. ಈ ವಿಭಜನಕಾರಿ ಮಸೂದೆಯು ಸಂವಿಧಾನ ಆಶಯದ ವಿರುದ್ಧವಾಗಿದ್ದು ರಾಷ್ಟ್ರಪತಿಗಳು ಇದನ್ನು ಅಂಗೀಕರಿಸಬಾರದೆಂದು ಒತ್ತಾಯಿಸಿದ್ದಾರೆ.

ಖ್ವಾಜಿ ಇಮಿತಿಯಾಜುದ್ದೀನ್, ಸಲೀಂ ತುಮಕೂರಿ, ಮನ್ಸೂರಿ ಅ‌ಘ್ಘಾನಿ, ಗುಲಾಮ ಜೀಲಾನಿ, ಇನಾಯತ್ ಉರ್ ರಹಮನ್, ಅನ್ವರ್‌ ಪಟೇಲ್, ಮಹೆಬೂಬ್ ಅಲಿ, ಕಾಸೀಂ ಸಾಬ್‌, ಅಬ್ದುಲ್ ಹಾದಿ, ಅಬ್ದುಲ್‌ ಕರೀಂ ಸಗ್ರಿ, ಕರೀಂ ಸಗ್ರಿ, ಅಸ್ಲಾಂ ಶಹ್ನಾ, ರೆಹ್ನಾ, ರೆಹನ್‌ ಅಲಿ, ಕರೀಂ ಐನಿ, ಖಾಲಿದ್‌ ಅಹ್ಮದ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)