ಸುರಪುರ: ಪರಿಶಿಷ್ಟ ಜಾತಿಯ ಮಕ್ಕಳ ಶಾಲಾ ಪ್ರವೇಶ ಅರ್ಜಿಯಲ್ಲಿನ ಧರ್ಮ ಕಾಲಂನಲ್ಲಿ ‘ಬೌದ್ಧ‘ ಎಂದು ನಮೂದಿಸಬೇಕು ಎಂದು ಮೂಲನಿವಾಸಿ ಅಂಬೇಡ್ಕರ್ ಸೇನೆಯ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿ ಜಗದೀಶ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಸೇನೆಯ ರಾಜ್ಯ ಸಂಘಟನಾ ಸಂಚಾಲಕ ರಾಹುಲ ಹುಲಿಮನಿ ಮಾತನಾಡಿ, ‘ಪ್ರವೇಶಾತಿ ಸಂದರ್ಭದಲ್ಲಿ ಪೋಷಕರು ಧರ್ಮ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಲು ಹೇಳಿದರೆ ಶಾಲೆಯ ಸಿಬ್ಬಂದಿ ಯಾವುದೇ ಅಡೆತಡೆ ಮಾಡಬಾರದು’ ಎಂದರು.

‘ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಎಲ್ಲ ಶಾಲೆಗಳಿಗೆ ಮುಖ್ಯ ಗುರುಗಳಿಗೆ ಸುತ್ತೋಲೆ ಹೊರಡಿಸಿ ಈ ಬಗ್ಗೆ ಸ್ಪಷ್ಟ ಸೂಚನೆ ಕೊಡಬೇಕು’ ಎಂದು ಆಗ್ರಹಿಸಿದರು.

ವೆಂಕಟೇಶ ಬಡಿಗೇರ, ಹಣಮಂತ ರತ್ತಾಳ, ರಾಜು ಬಡಿಗೇರ, ಶಿವಣ್ಣ ಸಾಸಿಗೇರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.