ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದೇಶ ಸೇವೆಯ ಅವಕಾಶ ಕಲ್ಪಿಸುವ ಭೂಸೇನೆ'

ಅಗ್ನಿಪಥ ಯೋಜನೆ ಬಗ್ಗೆ ಮಾಹಿತಿ ನೀಡಿದ ಕರ್ನಲ್ ರಾಹುಲ್ ಆರ್ಯ
Last Updated 30 ಜೂನ್ 2022, 16:35 IST
ಅಕ್ಷರ ಗಾತ್ರ

ಯಾದಗಿರಿ: ಕೇಂದ್ರ ಸರ್ಕಾರವು ಯುವ ಸಮುದಾಯದ ಹಿತದೃಷ್ಟಿಯಿಂದ ಹಾಗೂ ಮುಂದಾಲೋಚನೆಯೊಂದಿಗೆ ಭಾರತೀಯ ಭೂ ಸೇನಾ ಪಡೆಯಲ್ಲಿ ನೇಮಕಾತಿಗಾಗಿ ‘ಅಗ್ನಿಪಥ ಯೋಜನೆ’ ಜಾರಿಗೊಳಿಸಿದೆ. ಯುವ ಸಮುದಾಯ ಇದರ ಸದುಪಯೋಗ ಪಡೆಯಬೇಕು ಎಂದು ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿಯ ನಿರ್ದೇಶಕರೂ ಆದ ಕರ್ನಲ್ ರಾಹುಲ್ ಆರ್ಯ ಹೇಳಿದರು.

ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತೀಯ ಸೇನಾ ಪಡೆಯಲ್ಲಿ ನೇಮಕಗೊಳ್ಳುವ ಕುರಿತಂತೆ ವಿದ್ಯಾರ್ಥಿಗಳಿಗೆ ಪ್ರೇರಕ ಮಾತುಗಳ ಮೂಲಕ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರವು ಯಾವುದೇ ಯೋಜನೆ ಜಾರಿಗೊಳಿಸುವ ಮುನ್ನ ಮುಂದಾಲೋಚನೆ ಮತ್ತು ಯೋಜನೆಯೊಂದಿಗೆ ಜಾರಿಗೊಳಿಸುತ್ತಿದ್ದು, ‘ಅಗ್ನಿಪಥ ಯೋಜನೆ’ಯು ಇದರ ಭಾಗವಾಗಿದೆ ಎಂದು ಹೇಳಿದರು.

ಈ ಯೋಜನೆಯಿಂದ ಹದಿನೇಳು ವರ್ಷ ವಯೋಮಾನದ ಕಿರಿಯ ವಯಸ್ಸಿನಲ್ಲಿಯೇ ಯುವ ಸಮುದಾಯಕ್ಕೆ ಉದ್ಯೋಗವಕಾಶ ದೊರೆಯುವ ಜೊತೆಗೆ ಕೌಶಲ ವೃದ್ಧಿಗೆ ನೆರವಾಗಲಿದೆ ಎಂದು ಹೇಳಿದರು.

ಆರ್ಥಿಕ ನೆರವು ಜೊತೆಗೆ ಭವಿಷ್ಯದಲ್ಲಿ ಶಿಸ್ತು ಬದ್ಧ ಗೌರವ ಜೀವನಕ್ಕಾಗಿ ಸಹಕಾರಿಯಾಗಲಿದೆ. ಈ ಯೋಜನೆ ಅಡಿ ಆಯ್ಕೆಯಾಗುವ ಪ್ರತಿಶತ 25ರಷ್ಟು ಮೆರಿಟ್ ಆಧಾರದ ಮೇಲಿನ ಅಭ್ಯರ್ಥಿಗಳಿಗೆ ಭಾರತೀಯ ಭೂಸೇನೆಯಲ್ಲಿಯೂ ಮುಂದಿನ ಹುದ್ದೆ ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಭಾರತೀಯ ಭೂ ಸೇನಾ ಪಡೆಯ ನೇಮಕಾತಿಗಾಗಿ ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿ ವತಿಯಿಂದ ಬರುವ ಡಿಸೆಂಬರ್‌ 5 ರಂದು ಬೀದರ್‌ದಲ್ಲಿ ಯುವತಿಯರಿಗಾಗಿ ನೇಮಕಾತಿ ರ‍್ಯಾಲಿ ನಡೆಯಲಿದೆ. ನವೆಂಬರ್ ತಿಂಗಳಲ್ಲಿಯೂ ನೇಮಕಾತಿ ರ‍್ಯಾಲಿ ನಡೆಯಲಿದೆ. ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಲಿಖಿತ ಪರೀಕ್ಷೆಗೂ ಸನ್ನದ್ಧರಾಗಿರುವಂತೆ ತಿಳಿಸಿದ ಅವರು, ಭೂಸೇನೆ ನೇಮಕಾತಿಯಿಂದ ಶಿಸ್ತು, ವಿಶ್ವಾಸ, ಆತ್ಮ ಸ್ಥೈರ್ಯ, ದೇಶಕ್ಕಾಗಿ ಸೇವೆ ಸಲ್ಲಿಸುವ ಅವಕಾಶ ದೊರೆಯುವುದರಿಂದ ಸದುಪಯೋಗ ಪಡೆಯಬೇಕು ಎಂದರು.

ನೇಮಕಾತಿ ರ‍್ಯಾಲಿಯಲ್ಲಿ ಅಗ್ನಿವೀರ್ ಹುದ್ದೆಗಳಿಗೆ ವಿವಿಧ ವಿದ್ಯಾರ್ಥಿಗಳಿಗೆ ವಿದ್ಯಾರ್ಹತೆ ಆಧಾರದ ಮೇಲೆ ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ನರ್ಸಿಂಗ್, ಅಸಿಸ್ಟಂಟ್, ಸಾಮಾನ್ಯ ಟೆಕ್ ಡ್ರೆಸ್ಸರ್, ಅಗ್ನಿವೀರ ಟ್ರೇಡ್ಸ್‌ಮನ್ ಹುದ್ದೆಗಳಲ್ಲಿ ನೇಮಕಾತಿ ನಡೆಯಲಿದೆ. ಅದರಂತೆ ಹವಾಲ್ದಾರ್ ವರ್ಗದ ನರ್ಸಿಂಗ್ ಹವಾಲ್ದಾರ್ ಆರ್ಮಿ ಶಿಕ್ಷಣ ಕಾರ್ಪ್ಸ ಹಾಗೂ ಜೂನಿಯರ್ ಕಮಿಷ್ನನರ್‌ ಆಫೀಸರ್, (ಜೆಸಿಒ ರೆಲಿಜಿಯಸ್ ಟೀಚರ್) ಜೆಸಿಒ ಕ್ಯಾಟರಿಂಗ್ ಹುದ್ದೆಗಳಿಗೂ ವಿದ್ಯಾರ್ಹತೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಹೆಚ್ಚು ಜಿಲ್ಲೆಯ ಯುವಕ, ಯುವತಿಯರು ಸದುಪಯೋಗ ಪಡೆಯಬೇಕು. ಮಾಹಿತಿಗಾಗಿ ಭೂಸೇನೆಯ ವೆಬ್‌ಸೈಟ್ www.indianarmy.nic.in ವನ್ನು ಗಮನಿಸಬಹುದಾಗಿದೆ ಎಂದು ಹೇಳಿದರು.

ಸುಬೇದರ್ ಮೇಜರ್ ರಾಜೇಂದ್ರ ಸಿಂಗ್, ಹವಾಲ್ದಾರ್ ಸಂಜೀವ ಕುಮಾರ್, ಡಿಡಿಪಿಯು ಚನ್ನಬಸಪ್ಪ ಕುಳಗೇರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

***

ಯುವಕ, ಯುವತಿಯರಿಗೆ ಈ ಯೋಜನೆ ಜಾರಿಗೊಳಿಸಿದ್ದು, ಕೌಶಲ ವೃದ್ಧಿಯಿಂದ ಪ್ಯಾರಾ ಮಿಲಿಟರಿ, ರಾಜ್ಯ ಪೊಲೀಸ್ ಪಡೆ ಮತ್ತು ಭೂಸೇನೆ ಪಡೆಯ ಅಗ್ನಿವೀರ್ ಕೋಟಾದಡಿ ಉದ್ಯೋಗ ಪಡೆಯಲು ಸಹ ನೆರವಾಗಲಿದೆ.
-ಕರ್ನಲ್ ರಾಹುಲ್ ಆರ್ಯ,ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಕಚೇರಿಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT