ಶನಿವಾರ, ಆಗಸ್ಟ್ 20, 2022
21 °C
ಶೇ50 ರಷ್ಟು ಗ್ರಾಹಕರಿಗೆ ಮಾತ್ರ ಬಾರ್ ಒಳಗೆ ಪ್ರವೇಶಿಸಲು ಅವಕಾಶ

ಬಾರ್‌, ರೆಸ್ಟೊರೆಂಟ್‌: ಶೇ 60ರಷ್ಟು ವಹಿವಾಟು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರಾಜ್ಯ ಸರ್ಕಾರ ಬಾರ್‌, ರೆಸ್ಟೊರೆಂಟ್‌ನಲ್ಲಿ ಕುಳಿತು ಮದ್ಯ ಸೇವಿಸಲು ಅನುಮತಿ ನೀಡಿ ವಾರ ಕಳೆಯಿತು. ಆದರೂ ಶೇ 60ರಷ್ಟು ವಾಹಿವಾಟು ಆಗುತ್ತಿದೆ ಎನ್ನುವುದು ಮಾಲಿಕರ ಮಾತಾಗಿದೆ. ಸೆಪ್ಟೆಂಬರ್ 1ರಂದು ನಿಯಮಗಳನ್ನು ಸಡಿಲಿಕೆ ಮಾಡಿ ಬಾರ್‌, ರೆಸ್ಟೊರೆಂಟ್‌ಗಳಿಗೆ ಅನುಮತಿ ನೀಡಲಾಗಿದೆ. 

‘ಸರ್ಕಾರವೇನೊ ಅನುಮತಿ ನೀಡಿದೆ. ಆದರೆ, ಬಹುತೇಕ ಗ್ರಾಹಕರು ಬರುತ್ತಿಲ್ಲ. ಇದಕ್ಕೆ ಆರ್ಥಿಕ ಸಮಸ್ಯೆಯೂ ಕಾರಣವಾಗಿರಬಹುದು. ಮೇಜು ಕುರ್ಚಿಗಳನ್ನು ಅಂತರ ಕಾಯ್ದುಕೊಂಡು ಹಾಕಲಾಗಿದೆ. ಮಾಸ್ಕ್‌, ಸ್ಯಾನಿಟೈಸ್ ಕಡ್ಡಾಯಗೊಳಿಸಲಾಗಿದೆ’ ಎನ್ನುತ್ತಾರೆ ಬಾರ್‌, ರೆಸ್ಟೊರೆಂಟ್ ಮಾಲಿಕ ಮಹೇಶ ಪಾಟೀಲ.

‘ಶೇ 60ರಷ್ಟು ವ್ಯಾಪಾರ ಆಗುತ್ತಿದೆ. ಆದರೆ, ಹಿಂದಿನಂತೆ ಗ್ರಾಹಕರು ಬರುತ್ತಿಲ್ಲ. ಕೊರೊನಾ ಜಾಗೃತಿಯ ಎಲ್ಲ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಅವರು. 

‘ಕಳೆದ ಮೂರು ವರ್ಷಗಳಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದೇನೆ. ಎರಡು ವರ್ಷ ಚೆನ್ನಾಗಿತ್ತು. ಕೊರೊನಾ ಕಾರಣದಿಂದ ಈ ವರ್ಷ ಸಮಸ್ಯೆ ಜಟಿಲವಾಗಿದೆ. ಒಡಿಸ್ಸಿಯಿಂದ ಕಾರ್ಮಿಕರನ್ನು ಇನ್ನು ಕರೆ ತರಲು ಆಗಿಲ್ಲ’ ಎನ್ನುತ್ತಾರೆ ಅನಮೋಲ್‌ ಗ್ರ್ಯಾಂಡ್‌ ಮಾಲೀಕ ತುಕಾರಾಮ್‌ ಪೂಜಾರಿ. ‌

ಬಾರ್‌, ರೆಸ್ಟೊರೆಂಟ್‌, ವೈನ್‌ ಶಾಪ್‌ ವಿವರ

ಜಿಲ್ಲೆಯಲ್ಲಿ 49 ಸಿಎಲ್‌–2 ವೈನ್‌ ಶಾಪ್‌, 20 ಸಿಎಲ್‌ 7 ಬೋರ್ಡಿಂಗ್‌ ಲಾಡ್ಜಿಂಗ್‌, 19 ಸಿಎಲ್‌–9 ಬಾರ್‌–ರೆಸ್ಟೊರೆಂಟ್‌‌, 16 ಸಿಎಲ್‌–11ಸಿ ಎಂಎಸ್‌ಐಎಲ್‌ ಎಂಆರ್‌ಪಿ ದರ ಮಳಿಗೆಗಳಿವೆ. 

‘ಜಿಲ್ಲೆಯಲ್ಲಿ ಎಲ್ಲ ವಿವಿಧ 105 ವೈನ್‌ ಶಾಪ್‌ಗಳಿವೆ. ಇವುಗಳಲ್ಲಿ 104 ಲೈಸನ್ಸ್‌ ನವೀಕರಣ ಮಾಡಲಾಗಿದೆ. ಒಂದು ಮಾತ್ರ ಆನ್‌ಲೈನ್‌ ಮೂಲಕ ಮಾಡಿಕೊಂಡಿಲ್ಲ’ ಎನ್ನುತ್ತಾರೆ ಅಬಕಾರಿ ಉಪ ಅಯುಕ್ತೆ ಶಶಿಕಲಾ ಒಡೆಯರ್.

***

ಈಗೀಗ ಚೇತರಿಕೆ ಕಾಣುತ್ತಿದೆ. ಆದರೂ ಮೊದಲಿನಷ್ಟು ವ್ಯಾಪಾರ ಇಲ್ಲದಂತಾಗಿದೆ. ಡಾಬಾಗಳ ಹಾವಳಿಯಿಂದ ನಮಗೆ ಸಂಕಷ್ಟ ಒದಗಿದೆ 

ರಾಘವೇಂದ್ರ ವಡಗೇರಾ, ಅಧ್ಯಕ್ಷ ಲಿಕ್ಕರ್‌ ಅಸೋಯಿಸೇಷನ್‌ ಸಂಘ

***

ಗ್ರಾಹಕರು ಮಾಸ್ಕ್‌ ಧರಿಸುವುದು ಕಡ್ಡಾಯ. ಮಾಸ್ಕ್‌ ಧರಿಸದಿದ್ದರೆ ಮದ್ಯ ಸಿಗುವುದಿಲ್ಲ. ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್‌ ಹಾಕಲಾಗಿದೆ

ಮಹೇಶ ಪಾಟೀಲ, ಮಾಲಿಕ, ನಕ್ಷತ್ರ ಬಾರ್‌, ರೆಸ್ಟೊರೆಂಟ್

***

ಕೊರೊನಾ ಕಾರಣದಿಂದ ಈ ವರ್ಷ ಬಹುತೇಕ ನಷ್ಟವಾಗಿದೆ. ಮುಂದೆ ಇದೇ ರೀತಿಯಾದರೆ ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ 

ತುಕಾರಾಮ್‌ ಪೂಜಾರಿ, ಮಾಲೀಕ, ಅನಮೋಲ್‌ ಗ್ರ್ಯಾಂಡ್‌ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು