ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನ ಸಾಹಿತ್ಯಕ್ಕೆ ಚಳವಳಿ ರೂಪ ಕೊಟ್ಟ ಬಸವಣ್ಣ’

Published 10 ಮೇ 2024, 16:00 IST
Last Updated 10 ಮೇ 2024, 16:00 IST
ಅಕ್ಷರ ಗಾತ್ರ

ವಡಗೇರಾ: ‘12ನೇ ಶತಮಾನದಲ್ಲಿಯೇ ಜಾತಿ ಬೇಧವಿಲ್ಲದ, ಲಿಂಗ ತಾರತಮ್ಯವಿಲ್ಲದ ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಬಸವಣ್ಣ ಶ್ರಮಿಸಿದ್ದರು’ ಎಂದು ಮುಖಂಡ ಸಿದ್ದಣ್ಣಗೌಡ ಕಾಡಂನೋರ ಹೇಳಿದರು.

ಪಟ್ಟಣದಲ್ಲಿ ವೀರಶೈವ ಸಮುದಾಯದ ವತಿಯಿಂದ ಆಯೋಜಿಸಿದ್ದ ಬಸವಣ್ಣನವರ 891ನೇ ಜಯಂತಿ ಹಾಗೂ ಶಿವ ಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣನವರು ಅನುಭವ ಮಂಟಪದ ಮೂಲಕ ಪ್ರಜಾಪ್ರಭತ್ವದ ಕಲ್ಪನೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದರು. ಅಸ್ಪಶ್ಯತೆ ವಿರುದ್ಧ ಚಳವಳಿ ರೂಪಿಸಿ ದೀನ, ದಲಿತ, ಶೋಷಿತ ಸಮಾಜದ ಧ್ವನಿಯಾದ ಮೊದಲ ವಿಶ್ವಗುರು’ ಎಂದು ಬಣ್ಣಿಸಿದರು.

ಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಿಳಾಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆ. ಭಾರತೀಯ ಅಧ್ಯಾತ್ಮಿಕ ರಂಗವನ್ನು ಶ್ರೀಮಂತಗೊಳಿಸಿದ ಮಹಾನ ಮಾತೆ ಅವರು.  ಅವರಲ್ಲಿನ ಭಕ್ತಿ, ತಾಳ್ಮೆ, ಸಹನೆಯ ಗುಣಗಳೊಂದಿಗೆ ದೇವತಾ ಸ್ವರೂಪಿಯಾಗಿ ಸಕಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

ಮದ್ಯಪಾನ ಸಂಯಮ ಮಂಡಳಿ ಮಾಜಿ ಸದಸ್ಯ ಬಸವರಾಜ ಸೊನ್ನದ ಮಾತನಾಡಿ, ವಚನ ಸಾಹಿತ್ಯಕ್ಕೆ ಚಳವಳಿಗೆ ರೂಪ ಕೊಟ್ಟು ಸಾಮಾಜಿಕ ತಾರತಮ್ಯ, ಜಾತಿ ವ್ಯವಸ್ಥೆ, ಶೋಷಣೆ, ಮೂಢನಂಬಿಕೆ ವಿರುದ್ಧ ಸಮರ ಸಾರಿದ ಶ್ರೇಷ್ಠ ಶಿವಶರಣ ಬಸವಣ್ಣ ಎಂದು ಹೇಳಿದರು.

ಬಸವಣ್ಣನವರ ತತ್ವ ಹಾಗೂ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಾತಿರಹಿತ ಸಮಾಜವನ್ನು ನಿರ್ಮಾಣ ಮಾಡುವದರ ಜೊತೆಗೆ ಆದರ್ಶ ರಾಷ್ಟ್ರವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಡಾ. ಜಗದೀಶ ಹಿರೇಮಠ ಮಾತನಾಡಿದರು. ಡಾ. ಮರಿಯಪ್ಪ ನಾಟೇಕಾರ ವಿಶೇಷ ಉಪನ್ಯಾಸವನ್ನು ನೀಡಿದರು.

ಈ ಸಂದರ್ಭದಲ್ಲಿ ಪಂಪಯ್ಯಸ್ವಾಮಿ, ಶಿವರಾಜ ಪಡಿಶೆಟ್ಟಿ, ಸೂಗರಡ್ಡಿ ಪೊಲೀಸ ಪಾಟೀಲ್, ವೀರೇಶ ಸೊನ್ನದ, ಮಲ್ಲುಗೌಡ ಪೋಪಾ, ಪ್ರವೀಣ ಸಾಹು ಕರಣಗಿ, ಸಂಗು ಮಾಲೀ ಪಾಟೀಲ್, ಮಲ್ಲಣ್ಣಗೌಡ ಕೋನಹಳ್ಳಿ, ಶರಣು ಇಟಗಿ, ಡಾ. ವೀರುಪಯ್ಯ, ಶಂಕರಪ್ಪ ಪಡಿಶೆಟ್ಟಿ, ಮಾಧು ಪಡಿಶೆಟ್ಟಿ, ಶರಣು ಮಾತಪಳ್ಳಿ, ಗ್ರಾಪಂ ಸದಸ್ಯರಾದ ನಾಗಪ್ಪ ಬಸಂತಪೂರ, ಸಿದ್ದಪ್ಪ ತಮ್ಮಣ್ಣನೋರ, ಶರಣುಕುರಿ, ಯಂಕಣ್ಣ ಬಸವಂತಪೂರ, ಸೂಗಪ್ಪ ಅಮಂಗಿ, ಲಿಂಗರಾಜ ಕೊಡಂಗಲ್, ಶಿವರಾಜ ಬಾಗೂರ, ಗಂಗಣ್ಣ ವಿಶ್ವಕರ್ಮ, ಶರಣಯ್ಯ ಸ್ವಾಮಿ ಅಶೋಕ ಮುಸ್ತಾಜೀರ, ವಿದ್ಯಾಧರ ಜಾಕಾ ಬಾಷುಮಿಯಾ ನಾಯ್ಕೋಡಿ, ಹಣಮಂತ್ರಾಯ ಜಡಿ, ಹೊನ್ನಪ್ಪ ಕಡೇಚೂರ, ಮಲ್ಲಣ್ಣ ನೀಲಹಳ್ಳಿ, ಹುಸ್ಮಾನಬಾಷ ತಡಿಬಿಡಿ, ಮಲ್ಲಪ್ಪ ಮಾಗನೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಶಿಕ್ಷಕ ಸುರೇಶ ಕರಣಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT