ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ‘ಪಾಠ’

ಜಿಲ್ಲೆಯ ಆಯ್ದ 20 ಶಾಲೆಗಳಲ್ಲಿ ಪೊಲೀಸ್‌ ಇಲಾಖೆಯಿಂದ ತರಬೇತಿ
Last Updated 25 ನವೆಂಬರ್ 2022, 4:00 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ 20 ಸರ್ಕಾರಿ ಪ್ರೌಢಶಾಲೆಗಳಲ್ಲಿ ಪೊಲೀಸ್‌ ಇಲಾಖೆಯಿಂದ ವಿದ್ಯಾರ್ಥಿನಿಯರಿಗಾಗಿ ಆತ್ಮರಕ್ಷಣೆ ತರಬೇತಿ ನೀಡಲಾಗುತ್ತಿದೆ.

ಆಯ್ದ 20 ಪ್ರೌಢಶಾಲೆಗಳಲ್ಲಿ ಸ್ಟುಡೆಂಟ್‌ ಪೊಲೀಸ್‌ ಕೆಡಿಟ್‌ (ಎಸ್‌ಪಿಸಿ) ಸಭೆ ಮಾಡುವ ಮೂಲಕ ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ವಿದ್ಯಾರ್ಥಿನಿಯರ ಮೇಲೆ ನಡೆಯು ದೌರ್ಜನ್ಯದಿಂದ ಪಾರಾಗುವುದು ಹೇಗೆ ಎನ್ನವುದರ ಬಗ್ಗೆ ತರಬೇತಿ ನೀಡಲಾಗುತ್ತಿದೆ.

2,000 ವಿದ್ಯಾರ್ಥಿನಿಯರಿಗೆ ತರಬೇತಿ: ಜಿಲ್ಲೆಯಲ್ಲಿ 13 ಪೊಲೀಸ್‌ ಠಾಣೆಗಳಿಂದ ಆಯಾ ಠಾಣೆಯ ಪಿಎಸ್‌ಐ ಸೇರಿದಂತೆ ಸಿಬ್ಬಂದಿ ಮೂಲಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

‘ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಎರಡು ಸಾವಿರ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲು ಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗುವುದು’ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ.

ಏನೇನು ತರಬೇತಿ: ಜಿಲ್ಲೆಯ ಆರು ತಾಲ್ಲೂಕುಗಳಿಂದ ಪ್ರೌಢಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪೊಲೀಸ್‌ ಇಲಾಖೆ ಸಿಬ್ಬಂದಿಯಿಂದ ತರಬೇತಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ, ಕರಾಟೆ, ಪೊಲೀಸ್‌ ಪರೇಡ್‌ ತರಬೇತಿ, ಸ್ವಯಂ ರಕ್ಷಣೆಗಾಗಿ ತರಬೇತಿ, ಕರಾಟೆ ಮಾಸ್ಟರ್‌ಗಳಿಂದ ತರಬೇತಿ ನೀಡಲಾಗುತ್ತಿದೆ.

ಮುಖ್ಯಶಿಕ್ಷಕರ ಮೇಲ್ವಿಚಾರಣೆ: ಪೊಲೀಸ್‌ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ತರಬೇತಿ ಹಮ್ಮಿಕೊಳ್ಳಲಾಗುತ್ತಿದ್ದು,ಡಿಡಿಪಿಐ, ಬಿಇಒ, ಶಾಲಾ ಮುಖ್ಯ ಶಿಕ್ಷಕರ ಮೇಲ್ವಿಚಾರಣೆ ನಡೆಸುತ್ತಾರೆ.

ಲಾಠಿ ಹಿಡಿವ ಕೈಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವೇದಮೂರ್ತಿ ಶಾಲೆಯಲ್ಲಿ ಚಾಕ್‌ಪಿಸ್‌ ಹಿಡಿದು ಪಾಠ ಬೋಧನೆ ಮಾಡುತ್ತಿದ್ದಾರೆ. ಗಣಿತ, ವಿಜ್ಞಾನ, ಸಾಮಾನ್ಯ ಜ್ಞಾನ, ಕಾನೂನು ತಿಳಿವಳಿಕೆ ನೀಡುತ್ತಿದ್ದಾರೆ.

ಯಾವ್ಯಾವ ಶಾಲೆಗಳು ಆಯ್ಕೆ?: ಯಾದಗಿರಿ ನಗರ ಠಾಣೆ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ಯಾ ಪ್ರೌಢಶಾಲೆ,ಸ್ಟೇಷನ್ ಬಜಾರ್ ಶಾಲೆ,ಯಾದಗಿರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ರಾಮಸಮುದ್ರ, ಹತ್ತಿಕುಣಿ ಪ್ರೌಢಶಾಲೆ,ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ವಡಗೇರಾ ಕಸ್ತೂರಿಬಾಯಿ ಪ್ರೌಢಶಾಲೆ, ನಾಯ್ಕಲ್ ಸರ್ಕಾರಿ ಪ್ರೌಢಶಾಲೆ, ಸೈದಾಪುರ ಠಾಣೆ ವ್ಯಾಪ್ತಿಯ ಸೈದಾಪುರ ಪಟ್ಟಣದ ವಿವಿಎಚ್ಎಸ್ ಪ್ರೌಢಶಾಲೆ ಆಯ್ಕೆ ಮಾಡಲಾಗಿದೆ.

ಸರ್ಕಾರಿ ಪ್ರೌಢಶಾಲೆ ಗ್ರಾಮ ಸೈದಾಪುರ, ಗುರುಮಠಕಲ್‌ ಠಾಣೆ ವ್ಯಾಪ್ತಿಯ ಅರಕೇರಾ (ಕೆ) ಪ್ರೌಢಶಾಲೆ, ಗುರುಮಠಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ಯಾ ಪ್ರೌಢಶಾಲೆ, ಶಹಾಪುರ ಠಾಣೆ ವ್ಯಾಪ್ತಿಯ ಚರಬಸವೇಶ್ವರ ಪ್ರೌಢಶಾಲೆ, ಸರ್ಕಾರಿ ಕನ್ಯಾ ಪ್ರೌಢಶಾಲೆ ಸಿಪಿಎಸ್ ಗ್ರೌಂಡ್, ಗೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮನಾಳ ಸರ್ಕಾರಿ ಪ್ರೌಢಶಾಲೆ,ಗೋಗಿ ಸರ್ಕಾರಿ ಕನ್ಯಾ ಪ್ರೌಢಶಾಲೆ ಗೋಗಿ (ಕೆ), ಭೀಮರಾಯನಗುಡಿ ರಾಣೆ ವ್ಯಾಪ್ತಿಯ ಶಿರವಾಳ ಸರ್ಕಾರಿ ಪ್ರೌಢಶಾಲೆ ಆಯ್ಕೆ ಮಾಡಲಾಗಿದೆ.

ಸುರಪುರ ಠಾಣೆ ವ್ಯಾಪ್ತಿಯ ಸರ್ಕಾರಿ ಕನ್ನಡ ಪ್ರೌಢಶಾಲೆ ದರ್ಬಾರ್ ಶಾಲೆ ಕೆಂಭಾವಿ ತಾಳೆ ವ್ಯಾಪ್ತಿಯ ಸರ್ಕಾರಿ ಬಾಲಕಿಯರ ಕನ್ಯಾ ಪ್ರೌಢಶಾಲೆ (ದರ್ಬಾರ್‌ ಶಾಲೆ), ಕೊಡೇಕಲ್ ಠಾಣ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಡೇಕಲ್ ಪ್ರೌಢಶಾಲೆ, ಕಕ್ಕೇರಾ ಸರ್ಕಾರಿ ಪ್ರೌಢಶಾಲೆ, ನಾರಾಯಣಪುರ ಠಾಣೆಯ ನಾರಾಯಣಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣೆಯ ಪಾಠ ಹೇಳಿಕೊಡಲಾಗುತ್ತದೆ.

***

ಯಾದಗಿರಿ ಜಿಲ್ಲೆಯ 2,000ಕ್ಕಿಂತಲೂ ಹೆಚ್ಚು ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗಾಗಿ ತರಬೇತಿ ನೀಡಲಾಗುತ್ತಿದ್ದು, 40ಕ್ಕಿಂತ ಹೆಚ್ಚು ತರಗತಿ ತೆಗೆದುಕೊಳ್ಳಲಾಗುತ್ತಿದೆ

ಡಾ.ಸಿ.ಬಿ.ವೇದಮೂರ್ತಿ,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT