ಬುಧವಾರ, ಡಿಸೆಂಬರ್ 7, 2022
22 °C

ಮಕ್ಕಳೇ ರಚಿಸಿದ ‘ಶಾಂತ ಹೂಬನ’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ‘ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ, ಉನ್ನತ ಶಿಕ್ಷಣ ಕೊಡಿಸಿದರೆ ಅವರೇ ನಿಮ್ಮ ಮುಂದಿನ ಆಸ್ತಿಯಾಗುತ್ತಾರೆ’ ಎಂದು ಕೆಂಬಾವಿ ಪಿಎಸ್‌ಐ ಹಣಮಂತ ಹೇಳಿದರು.

ಸಮೀಪದ ಶಾಂತಪುರ ಸರ್ಕಾರಿ ಶಾಲೆಯಲ್ಲಿ ಮಕ್ಕಳೇ ರಚಿಸಿದ ‘ಶಾಂತ ಹೂಬನ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಿಸಿ, ಮಕ್ಕಳನ್ನು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತನ್ನಾಗಿ ಮಾಡಬೇಡಿ, ಉತ್ತಮ ಶಿಕ್ಷಕರ ತಂಡ ಶ್ರಮ ಮಕ್ಕಳ ಸಂಕಲನದಲ್ಲಿ ಕಾಣುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ವಿವಿಧ ಸೌಲಭ್ಯ ಬಳಿಸಿಕೊಂಡು ಉನ್ನತ ಮಾದರಿ ವ್ಯಕ್ತಿಗಳಾಗಬೇಕೆಂದು ಸಲಹೆ ನೀಡಿದರು.

ನಂತರ ಮುಖ್ಯಶಿಕ್ಷಕ ಕಾಳಪ್ಪ ಬಡಿಗೇರ ಮಾತನಾಡಿ, ಇಲ್ಲಿಯವರಿಗೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ತೃಪ್ತಿಯಿದೆ, ನಮ್ಮ ಶಿಕ್ಷಕರ ಶ್ರಮವೇ ಇಂದು ನಮ್ಮ ಮಕ್ಕಳು ಶಾಂತ ಹೂಬನ ಕವನ ಸಂಕಲನ ಬರೆಯುವುದರಲ್ಲಿ ಸಾಮಾನ್ಯ ಮಾತಲ್ಲ ಎಂದು ಹೇಳಿದರು.

ತಾಲ್ಲೂಕು ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ಹೊನ್ನಪ್ಪ ಹಾದಿಮನಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಚಿದಾನಂದ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷೆ ದೇವಕ್ಕೆಮ್ಮ ದಳಪತಿ, ಮಲಕಪ್ಪ ಲಿಂಗದಳ್ಳಿ, ಶರಣಪ್ಪ ಬಾದ್ಯಾಪುರ, ಮನೋಹರ, ಯಲ್ಲಪ್ಪ, ಮಾಳಪ್ಪ, ಜಯಂತಿ, ನಾಗರತ್ನ,  ಬಾಲರಾಜ, ಪದ್ಮಾವತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.