ಭಾನುವಾರ, ಫೆಬ್ರವರಿ 28, 2021
21 °C
7 ವಾಹನಗಳಿಗೆ ಹಸಿರು ನಿಶಾನೆ ತೋರಿಸಿದ ಎಸ್ಪಿ

ತುರ್ತು ಪೊಲೀಸ್ ಸೇವೆಗೆ 112 ಕ್ಕೆ ಕರೆ ಮಾಡಿ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಯಾವುದೇ ರೀತಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪೊಲೀಸ್ ಸಹಾಯವನ್ನು ಶೀಘ್ರವಾಗಿ ಪಡೆಯಬೇಕಾದ್ದಲ್ಲಿ ಟೋಲ್ ಫ್ರೀ ದೂರವಾಣಿ ಸಂಖ್ಯೆ-112ಗೆ ಕರೆಮಾಡಿ ಮಾಹಿತಿ ತಿಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಬಳಿ ಶುಕ್ರವಾರ 112 ತುರ್ತು ಸೇವೆ ಸಹಾಯವಾಣಿಗೆ ನಿಯೋಜನೆಗೊಂಡಿರುವ 7 ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಇಲ್ಲಿಯವರೆಗೆ ಬಳಕೆಯಲ್ಲಿದ್ದ ಪ್ರತ್ಯೇಕ ತುರ್ತು ದೂರವಾಣಿ ಸಂಖ್ಯೆಗಳಾದ 100, 101 ಮುಂತಾದವುಗಳ ಬದಲಾಗಿ ಇನ್ನು ಮುಂದೆ ಸಾರ್ವಜನಿಕರು 112ಗೆ ಕರೆ ಮಾಡುವ ಮೂಲಕ ಶೀಘ್ರವಾಗಿ ಪೊಲೀಸ್, ಅಗ್ನಿಶಾಮಕದಳ, ವಿಪತ್ತು ಇತ್ಯಾದಿ ತುರ್ತು ಸೇವೆಗಳ ನೆರವು ಪಡೆಯಬಹುದಾಗಿರುತ್ತದೆ ಎಂದರು.

ಇದಕ್ಕಾಗಿ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ ಅಡಿಯಲ್ಲಿ ಸಮರ್ಪಕವಾಗಿ ಕರೆಗಳನ್ನು ನಿಭಾಯಿಸಲು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ದೇಶಾದ್ಯಂತ ಚಾಲನೆಯಲ್ಲಿರುತ್ತದೆ ಎಂದರು.

ನೂತನ ತಂತ್ರಜ್ಞಾನದೊಂದಿಗೆ ಕೇಂದ್ರೀಕೃತ, ಸಂಪರ್ಕ ವ್ಯವಸ್ಥೆಯನ್ನು ಇದು ಹೊಂದಿರುತ್ತದೆ. ಧ್ವನಿ, ಎಸ್‌ಎಂಎಸ್, ಇ–ಮೇಲ್, 112 ಪೊರ್ಟಲ್, ಮತ್ತು ಪ್ಯಾನಿಕ್ ಆ್ಯಪ್ ಮೂಲಕ ತುರ್ತು ವಿನಂತಿಯನ್ನು ಸಾರ್ವಜನಿಕರು ಕಳಸಬಹುದಾಗಿರುತ್ತದೆ. ಸೇವಾ ವಿನಂತಿದಾರರ ಸ್ಥಳವನ್ನು ಸ್ಪಯಂಚಾಲಿತವಾಗಿ ಗುರ್ತಿಸುವ ವ್ಯವಸ್ಥೆ ಇದಾಗಿರುವುದರಿಂದ ಬೇಗನೇ ಪೊಲೀಸ್ ಸೇವೆ. ಅವಶ್ಯಕ ಸ್ಥಳದಲ್ಲಿ ಶೀಘ್ರವಾಗಿ ಲಭ್ಯವಾಗುತ್ತದೆ ಎಂದರು.

ವಾಹನಗಳಗೆ ಅತ್ಯಾಧುನಿಕ ಸಲಕರಣೆ ಒದಗಿಸಲಾಗಿದ್ದು, ಸೂಕ್ತ ತಂತ್ರಜ್ಞಾನ ತರಬೇತಿ ಪಡೆದ ಹೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ವಾಹನಗಳಲ್ಲಿ ಕಾರ್ಯನಿರ್ವಹಿಸಲು ನೇಮಿಸಲಾಗಿರುತ್ತದೆ ಎಂದರು.

ಡಿವೈಎಸ್‌ಪಿ ವೆಂಕಟೇಶ, ಸಂತೋಷ ಉಗಿಬಂಡಿ, ಮಹಿಳಾ ಠಾಣೆ ಪೊಲೀಸ್ ಇನ್ಸ್‌ಸ್ಪೆಕ್ಟರ್ ಹೊಸಕೇರಪ್ಪ ಕೆ, ಸೋಮಶೇಖರ ಕೆಂಚನೂರ್, ಪ್ರಕಾಶ ಯಾತನೂರ, ಸುನೀಲ್ ಮೂಲಿಮನಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು