ಗುರುವಾರ , ಜನವರಿ 27, 2022
21 °C

ಕಕ್ಕೇರಾ: ಪುರಸಭೆ ಸದಸ್ಯರಿಗೆ ಪ್ರಮಾಣಪತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕ್ಕೇರಾ: ಈಚಗೆ ನಡೆದ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಚುನಾವಣಾಕಾರಿಗಳಾದ ಅಮಿತ್ ಕುಲಕರ್ಣಿ ಹಾಗೂ ನರಸಿಂಹಸ್ವಾಮಿ ಪ್ರಮಾಣಪತ್ರ ವಿತರಿಸಿ, ಹೂಗುಚ್ಛ ನೀಡಿ ಶುಭ ಕೋರಿದರು.

ನಂತರ ಮಾತನಾಡಿ, ಪುರಸಭೆಯ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಸುಗಮ ಹಾಗೂ ಶಾಂತಿಯುತ ಚುನಾವಣೆಗೆ ಎಲ್ಲರೂ ಸಹಕರಿಸಿದ್ದೀರಿ. ಜನರ ಆಶೋತ್ತರಗಳಿಗೆ ಸ್ಪಂದಿಸಿ ಎಂದರು.

ಸದಸ್ಯರಾದ ವೆಂಕಟೇಶನಾಯಕ ಪಾಟೀಲ, ಪರಮಣ್ಣ ಕಮತಗಿ, ದೇವಿಂದ್ರ ದೇಸಾಯಿ, ಜಯಮ್ಮ ಸೊಲಾಪುರ, ನಂದಮ್ಮ ದೇಸಾಯಿ, ನಂದಮ್ಮ ಜುಮ್ಮಾರ, ನಿಂಗಪ್ಪನಾಯ್ಕ್, ಶಿಲ್ಪಾ ರಾಠೋಡ್, ಅಮರೇಶ ದೊರೆ, ಶ್ರೀದೇವಿ ಕುರೇರ, ಪರಶುರಾಮ ಗೋವಿಂದರ್, ಜೆಟ್ಟೆಪ್ಪ ದಳಾ, ಪರಮವ್ವ ಮಲಮುತ್ತೇರ, ಸಣ್ಣಅಯ್ಯಾಳಪ್ಪ ಬಡಿಗೇರ, ಲಕ್ಷ್ಮಿಬಾಯಿ ಕಟ್ಟಿಮನಿ, ಸದ್ದಾಂಹುಸೇನ್, ದುರಗಮ್ಮ ಜುಮ್ಮಾರ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳಾದ ರೇವಪ್ಪ ತೆಗ್ಗಿನಮನಿ, ಜಗದೀಶ, ಚುನಾವಣಾ ಲೆಕ್ಕಪತ್ರಾಧಿಕಾರಿಗಳು ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.