‘ಹೊಸ ಕಾಯ್ದೆ ಜಾರಿ: ಎಚ್ಚರಿಕೆ ಅಗತ್ಯ’
ಜನನ ಮತ್ತು ಮರಣ ನೋಂದಣಿ ಅಧಿನಿಯಮ ತಿದ್ದುಪಡಿ ಪ್ರಕಾರ ಮಗು ಜನಿಸಿದ 21 ದಿನದಲ್ಲಿ ಆಯಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದರೆ ಜನನ ಪ್ರಮಾಣ ಪತ್ರ ನೀಡುತ್ತಾರೆ. 21 ದಿನದ ನಂತರ ಪಡೆಯದೇ ಹೋದರೆ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದರೆ ಜನನ ಪ್ರಮಾಣ ಪತ್ರವನ್ನು ಒದಗಿಸಲಾಗುತ್ತದೆ. ಒಂದು ವರ್ಷ ಮೇಲ್ಪಟ್ಟು ಹೋದರೆ ನ್ಯಾಯಾಲಯಕ್ಕೆ ತೆರಳಿ ಪಡೆಯಲು ಅವಕಾಶ ಇದೆ’ ಎಂದು ತಹಶೀಲ್ದಾರ್ ಉಮಾಕಾಂತ ಹಳ್ಳೆ ತಿಳಿಸಿದ್ದಾರೆ.