ಸುರಪುರ: ಕಳೆದ ಕೆಲ ದಿನಗಳಲ್ಲಿ ನಗರ ಮತ್ತು ಸುತ್ತಮುತ್ತಲೂ ಉಷ್ಣಾಂಶ ದಿನೇ ದಿನೇ ಏರುತ್ತಿದೆ. ಕಳೆದ ಒಂದು ವಾರದಿಂದ ಮಧ್ಯಾಹ್ನ 12 ಗಂಟೆ ವೇಳೆಗೆ 38ರಿಂದ 41 ಡಿಗ್ರಿ ಸೆಲ್ಸಿಯಸ್ವರೆಗೂ ತಾಪಮಾನ ದಾಖಲಾಗಿದೆ.

ತಾಪಮಾನ ಹೆಚ್ಚುತ್ತಿದ್ದಂತೆ ಧಗೆಯೂ ಹೆಚ್ಚಾಗುತ್ತಿದ್ದು ಮಕ್ಕಳು, ವೃದ್ಧರನ್ನು ಹಿಂಡಿ ಹಿಪ್ಪೆ ಮಾಡಿದೆ. ಮನೆಯ ಛಾವಣಿಯೂ ಕಾಯುತ್ತಿದ್ದು ಮನೆಯೊಳಗೂ ಜನರು ಝಳಕ್ಕೆ ಪರಿತಪಿಸುವಂತಾಗಿದೆ. ಬೆಳಿಗ್ಗೆ 6 ಗಂಟೆಗೆ 35 ಡಿಗ್ರಿ ಸೆಲ್ಸಿಯಸ್ನಿಂದ ಆರಂಭವಾಗುವ ತಾಪಮಾನ ಪ್ರತಿ ಗಂಟೆಗೆ ಏರುತ್ತಲೆ ಇರುತ್ತದೆ. ಮಧ್ಯಾಹ್ನ 2 ಗಂಟೆಗೆ 41 ಡಿಗ್ರಿ ಸೆಲ್ಸಿಯಸ್ ಮುಟ್ಟಿ 4 ಗಂಟೆಯ ನಂತರ ಕ್ರಮೇಣ ಕಡಿಮೆಯಾಗಿ ಸಂಜೆ 7ರ ಹೊತ್ತಿಗೆ 34ಕ್ಕೆ ತಲುಪುತ್ತಿದೆ.

ನಗರ ಏಳು ಸುತ್ತು ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿದೆ. ಬಿಸಿಲಿನಿಂದ ಕಾಯುವ ಬೆಟ್ಟಗಳು ಸಂಜೆಯ ನಂತರ ಬಿಸಿ ಗಾಳಿ ಹೊರ ಸೂಸುತ್ತವೆ. ಇದು ಜನರನ್ನು ಬೆಂಕಿಯಿಂದ ಬಾಣೆಲೆಗೆ ಎಂಬ ಸ್ಥಿತಿಗೆ ತಂದೊಡ್ಡಿದೆ. ಫ್ಯಾನ್ಗಳು ಬಿಸಿ ಗಾಳಿಯನ್ನೇ ಬಿಡುತ್ತಿವೆ. ಜನರು ರಾತ್ರಿ ಮನೆಯ ಮಾಳಿಗೆ ಮೇಲೆ ಮಲಗುತ್ತಿದ್ದಾರೆ. ರಾತ್ರಿ ಬಿಸಿ ಗಾಳಿ ಬೀಸಿ, ಕ್ರಮೇಣ 3 ಗಂಟೆಯ ನಂತರ ಆಹ್ಲಾದಕರ ಗಾಳಿ ಬೀಸುತ್ತದೆ. ದಿನಕ್ಕೆ ಒಂದೆರೆಡು ತಾಸು ನಿದ್ದೆ ಆದರೆ ಹೆಚ್ಚು. ಮನೆಯಲ್ಲಿನ ಬಾಂಡೆ ಸಾಮಾನುಗಳು ಕಾಯುತ್ತಿವೆ. ಮಕ್ಕಳು, ವೃದ್ಧರು ಧಗೆಗೆ ಒದ್ದಾಡುವಂತಾಗಿದೆ.

ಜನರು ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಕಲ್ಲಂಗಡಿ, ಎಳನೀರು, ಐಸ್ಕ್ರೀಮ್ ಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿ ವಿವಿಧ ಜ್ಯೂಸ್ ಮಾಡಿಕೊಂಡು ಕುಡಿಯುತ್ತಿದ್ದಾರೆ. ಮಾರುಕಟ್ಟೆ ತುಂಬೆಲ್ಲ ಕಲ್ಲಂಗಡಿ, ಏಳನೀರು ಮಾರಾಟ ಭರ್ಜರಿಯಾಗಿದೆ.

ಬೆಳಿಗ್ಗೆ ಸಮಯದಲ್ಲಿ ದೇವರಬಾವಿ ಸೇರಿದಂತೆ ವಿವಿಧ ಬಾವಿಗಳಲ್ಲಿ ಮಕ್ಕಳು, ದೊಡ್ಡವರು ಬಿಸಿಲಿನ ತಾಪ ತಪ್ಪಿಸಿಕೊಳ್ಳಲು ಗಂಟೆಗಟ್ಟಲೆ ಈಜಾಡುತ್ತಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಜನ ಸಂಚಾರ ವಿರಳವಾಗಿದೆ. ಮದುವೆ ಸೀಸನ್ ಇರುವುದರಿಂದ ಗ್ರಾಮೀಣ ಪ್ರದೇಶದ ಜನರು ಖರೀದಿಗೆ ನಗರಕ್ಕೆ ಬರುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಉಸ್ಸಪ್ಪಾ ಎನ್ನುವುದು ಸಾಮಾನ್ಯವಾಗಿದೆ. ಹವಾ ನಿಯಂತ್ರಿತ (ಎಸಿ) ಇರುವ ಅಂಗಡಿಯಲ್ಲಿ ಸಾಮಗ್ರಿ ಖರೀದಿಗೆ ಹೋಗುವ ಗ್ರಾಹಕರು ಬಿಸಿಲು ತಗ್ಗುವವರೆಗೂ ಅಂಗಡಿ ಬಿಟ್ಟು ಕದಲುವುದಿಲ್ಲ.

ಎ.ಸಿ ಹೋಟೆಲ್ಗಳಲ್ಲಿ ಚಹ ಸೇವಿಸಿ ಹರಟೆ ಹೊಡೆಯುವ ಗ್ರಾಹಕರನ್ನು ಹೊರಗೆ ಕಳಿಸುವುದು ಹೋಟೆಲ್ ಮಾಲೀಕರಿಗೆ ಸವಾಲಿನ ಕೆಲಸವಾಗಿದೆ. ಸಾರಿಗೆ ಬಸ್ಗಳು ಕಾಯುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಹಮಾಲರು, ಕಾರ್ಮಿಕರ ಸ್ಥಿತಿ ಕೇಳುವವರಿಲ್ಲ. ಬೇಸಿಗೆ ಯಾವಾಗ ಮುಗಿಯುತ್ತಪ್ಪಾ ಎಂದು ಜನರು ಏದುಸಿರು ಬಿಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.