ಯಾದಗಿರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎನ್ನುವ ದಾಖಲೆ ಮಾಡಿದ್ದರಿಂದ ಅವರ ಅಭಿಮಾನಿಗಳು ನಗರದ ಕನಕ ವೃತ್ತದಲ್ಲಿ ಶುಕ್ರವಾರ ಮಟನ್ ಔತಣಕೂಟ ಏರ್ಪಡಿಸಿದರು.

ಕನಕ ವೃತ್ತ ಸಮೀಪದ ಉದ್ಯಾನದಲ್ಲಿ ದೊಡ್ಡ ಪಾತ್ರೆಗಳಲ್ಲಿ 11 ಕುರಿಗಳ ಮಾಂಸದ ಅಡುಗೆ, ಮೂರು ಕ್ವಿಂಟಲ್ ಅನ್ನ ಮಾಡಿದರು. ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಊಟ ಬಡಿಸಿ ಔತಣಕೂಟಕ್ಕೆ ಚಾಲನೆ ನೀಡಿದರು. ಚಾಲನೆ ಸಿಗುತ್ತಿದ್ದಂತೆ ನೂರಾರು ಮಂದಿ ಸರತಿ ಸಾಲಿನಲ್ಲಿ ನಿಂತು ಮಾಂಸದ ಊಟ ಚಪ್ಪರಿಸಿದರು.

ಇದಕ್ಕೂ ಮುನ್ನ ಕನಕ ಮೂರ್ತಿಯ ಮುಂಭಾಗದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದೊಡ್ಡ ಕೇಕ್ ಕತ್ತರಿಸಿ ನೆರೆದಿದ್ದ ಸಿದ್ದರಾಮಯ್ಯ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರಿಗೆ ತಿನಿಸಲಾಯಿತು. ಕನಕ ಮೂರ್ತಿಗೆ ಮಾಲಾರ್ಪಣೆ ಮಾಡಿ, ಸಿದ್ದರಾಮಯ್ಯ ಅವರ ದೊಡ್ಡ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಲಾಯಿತು. ಪಟಾಕಿಯನ್ನೂ ಸಿಡಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ‘ಸಿಎಂ ಸಿದ್ದರಾಮಯ್ಯ ಅವರ ಆಡಳಿತವನ್ನು ಮೆಚ್ಚಿಕೊಂಡು ಪ್ರತಿಯೊಂದು ತಾಲ್ಲೂಕು, ಗ್ರಾಮದಲ್ಲಿ ಅವರ ಅಭಿಮಾನಿಗಳು ಔತಣಕೂಟವನ್ನು ಆಯೋಜಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ದೇವರು ಅವರಿಗೆ ಇನ್ನಷ್ಟು ಶಕ್ತಿಕೊಟ್ಟು, ಅಧಿಕಾರ ಅವಧಿಯನ್ನು ಪೂರ್ಣಗೊಳಿಸುವಂತೆ ಮಾಡಲಿ’ ಎಂದರು.

‘ಈ ನಾಡಿಗೆ ಮಾಜಿ ಸಿಎಂ ದೇವರಾಜ್ ಅರಸು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅವರು ಏನೆಲ್ಲ ಕೊಡಿಗೆ ನೀಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿಯವರ ಸುಳ್ಳುಗಳನ್ನು ನಂಬದೆ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಲ್ಲುತ್ತಾರೆ. ಕಾಂಗ್ರೆಸ್ ಬಡವರ ಪರವಾದ ಸರ್ಕಾರವಾಗಿದ್ದು, ಎಷ್ಟೇ ಅಪಪ್ರಚಾರ ಮಾಡಿದರೂ ಮತದಾರರು ನಮ್ಮ ಕೈಬಿಡುವುದಿಲ್ಲ’ ಎಂದು ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಭೀಮಣ್ಣ ಮೇಟಿ ಮಾತನಾಡಿ, ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುರುಬ ಸಮುದಾಯದವರಿಗೆ ಪ್ರಾತಿನಿಧ್ಯ ಸಿಗುತ್ತಿಲ್ಲ. 41 ವಿಧಾನಸಭಾ ಕ್ಷೇತ್ರಗಳಿದ್ದರು ನಿರೀಕ್ಷತ ಮಟ್ಟದಲ್ಲಿ ಟಿಕೆಟ್ ಸಿಕ್ಕಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲಿ ಕುರುಬ ಸಮುದಾಯದವರು ಪಕ್ಷದ ಅಭ್ಯರ್ಥಿಗಳಿಗೆ ಮತಹಾಕಿದ್ದಾರೆ. ಲೋಕಸಭೆಯ ಐದೂ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿನಲ್ಲಿಯೂ ಕುರುಬರ ಮತಗಳ ಪಾಲಿದೆ’ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, 'ಯುಡಾ' ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಮುಖಂಡರಾದ ಮಲ್ಲಣ್ಣ ಐಕೂರು, ನಿರಂಜನ ರೆಡ್ಡಿ ಪಾಟೀಲ, ಮಲ್ಲಿಕಾರ್ಜುನ ಗೋಸಿ, ಹೊನ್ನಪ್ಪ ಮುಸ್ಟೂರು, ಸಾಬಣ್ಣ ಕೆಂಗೂರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

‘ಸಾವಿರಾರು ಜನರಿಗೆ ಊಟ’

‘11 ಕುರಿಗಳ 2 ಕ್ವಿಂಟಲ್ ಮಟನ್ ಅಡುಗೆ ಮೂರು ಕ್ವಿಂಟಲ್ ಅನ್ನ ಮಾಡಿ ಸಾವಿರಾರು ಜನರಿಗೆ ಮಾಂಸದ ಊಟ ಬಡಿಸಲಾಗಿದೆ’ ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ಮಲ್ಲಿಕಾರ್ಜುನ ಮಲ್ಲಪ್ಪ ಹೇಳಿದರು. ‘ಔತಣಕೂಟದ ಆಯೋಜನೆಗಾಗಿ ಮೂರ್ನಾಲ್ಕು ದಿನಗಳಿಂದ ತಯಾರಿ ಮಾಡಿಕೊಳ್ಳಲಾಗಿತ್ತು. ಅವರಿವರು ಎನ್ನದೆ ಎಲ್ಲ ಸಮುದಾಯದವರಿಗೆ ಸಿದ್ದರಾಮಯ್ಯ ಅವರಿಗೆ ಪ್ರಿಯವಾದ ಮಾಂಸದ ಊಟವನ್ನು ಏರ್ಪಡಿಸಿದ್ದೇವೆ’ ಎಂದರು. ‘ನಾವು ಸಿದ್ದರಾಮಯ್ಯ ಅವರಿಗೆ ಸಹಕಾರ ಬೆಂಬಲ ಕೊಟ್ಟು ಔತಣಕೂಟವನ್ನು ಆಯೋಜಿಸಿದ್ದೇವೆ. ಉತ್ತಮವಾದ ಆಡಳಿತ ನಡೆಸುತ್ತಿದ್ದು ರೈತರ ಬಗ್ಗೆಯೂ ಇನ್ನೂ ಹೆಚ್ಚಿನ ಕಾಳಜಿವಹಿಸಬೇಕು. ಗೊಬ್ಬರ ಕೃಷಿ ಸಲಕರಣೆಗಳ ದರ ಕಡಿಮೆ ಮಾಡಿ ಎಲ್ಲರಿಗೂ ನೆರವಾಗಬೇಕು’ ಎಂದು ಸಿದ್ದಪ್ಪ ಕನಕನಗರ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.