ಸೋಮವಾರ, ಅಕ್ಟೋಬರ್ 18, 2021
22 °C

ಯಾದಗಿರಿ: ಭಾರತ ಬಂದ್‌ ಬೆಂಬಲಿಸಿ ಸೌಹಾರ್ದ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಭಾರತ ಬಂದ್ ಬೆಂಬಲಿಸಿ ಸಿಪಿಎಂ, ಎಸ್‌ಯುಸಿಐ, ಸಿಪಿಐ ಪಕ್ಷಗಳಿಂದ ಜಂಟಿಯಾಗಿ ನಗರದ ಸುಭಾಷ್‍ ವೃತ್ತದಲ್ಲಿ ಸೌಹಾರ್ದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಮುಖಂಡರು, ಸೆಪ್ಟೆಂಬರ್ 27ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಮತ್ತು ರೈತ ಹಾಗೂ ಕಾರ್ಮಿಕರ ಮತ್ತು ಎಲ್ಲ ನಾಗರೀಕರ ವಿರುದ್ಧವಾದ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಭಾರತ್‌ ಬಂದ್‌ ನಡೆಸಲಿವೆ ಎಂದರು.

ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ರೈತ ವಿರೋಧಿಯಾದ ಭೂಸುಧಾರಣಾ ತಿದ್ದುಪಡಿ ಕಾಯ್ದೆ-2020 ಹಾಗೂ ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಹಾಗೂ ಹೈನುಗಾರರ ಮತ್ತು ಹೈನೋದ್ಯಮದ ವಿರೋಧಿಯಾದ ಹಾಗೂ ಬಹುಸಂಖ್ಯಾತರ ಆಹಾರದ ಹಕ್ಕನ್ನು ನಿರಾಕರಿಸುವ ಜಾನುವಾರು ಹತ್ಯಾ ನಿಷೇಧ ತಿದ್ದುಪಡಿ ಕಾಯ್ದೆ-2020 ಇವುಗಳನ್ನು ಮತ್ತು ರಾಜ್ಯದ ಶೇ 95ರಷ್ಟು ಜನತೆಯ ವಿರೋಧಿಯಾದ ಲೂಟಿಕೋರ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ-2020 ಜಾರಿಯನ್ನು ಅಧಿವೇಶನದಲ್ಲಿಯೇ ವಾಪಸ್ ಪಡೆಯಬೇಕೆಂದು ಎಡ ಪಕ್ಷಗಳ ಜಿಲ್ಲೆಯ ಸಂಘಟನಾ ಸಮಿತಿಗಳು ಒಕ್ಕೊರಲಿನಿಂದ ಒತ್ತಾಯಿಸುತ್ತವೆ ಎಂದರು.

ಈ ವೇಳೆ ಎಸ್‍ಯುಸಿಐ (ಸಿ) ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್, ಸಿಪಿಐ (ಎಂ) ಜಿಲ್ಲಾ ಕಾರ್ಯದರ್ಶಿ ದಾವಲಸಾಬ್ ನದಾಫ್, ಮುಂಖಡರಾದ ಡಿ.ಉಮಾದೇವಿ, ಜೈಲಾಲ್ ತೋಟದಮನಿ, ರಾಮಲಿಂಗಪ್ಪ ಬಿ.ಎನ್, ಬಸವರಾಜ ದೊರೆ, ಜಮಾಲ್ ಸಾಬ್, ಗಣೇಶ ಅನವಾರ, ದೇವಿಂದ್ರಪ್ಪ, ಬಸವರಾಜ ಚಿಕ್ಕಬಾನರ್, ದೇವಿಂದ್ರ, ರಾಜೇಶ್ವರಿ, ನಾಗರಾಜ, ದೊಡ್ಡಪ್ಪಗೌಡ, ಮಹ್ಮದ್ ಅಶ್ರಫ್, ಯಲ್ಲೇಶ್, ಸಾಬರಡ್ಡಿ, ಯಲ್ಲಾಲಿಂಗ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು