ಭಾನುವಾರ, ಮಾರ್ಚ್ 26, 2023
23 °C

ಸುರಪುರ: ಸಮುದಾಯ ಭವನ ನಿರ್ಮಾಣಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಪುರ: ತಿಂಥಣಿ – ದಾದಲಾಪುರ ಗ್ರಾಮದ ನಡುವೆ ಮಾದಿಗ ಸಮಾಜಕ್ಕಾಗಿಯೇ ಸಮುದಾಯ ಭವನ ನಿರ್ಮಿಸಿಕೊಡಬೇಕು ಎಂದು ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಮುಖಂಡರು ಬುಧವಾರ ಶಾಸಕ ರಾಜೂಗೌಡ ಅವರಿಗೆ ಮನವಿ ಸಲ್ಲಿಸಿದರು.

ತಿಂಥಣಿ ಗ್ರಾಮ ಘಟಕದ ಅಧ್ಯಕ್ಷ ಮೌನೇಶ ಹಳ್ಳೆಪ್ಪ ಮಾತನಾಡಿ, 'ಎರಡು ಅವಳಿ ಗ್ರಾಮಗಳಲ್ಲಿ ಮಾದಿಗ ಸಮಾಜದ ಬಹಳಷ್ಟು ಕುಟುಂಬಗಳು ವಾಸಿಸುತ್ತಿವೆ. ಸಮುದಾಯದ ಜನರ ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ ಇತರ ಸಮಾರಂಭಗಳನ್ನು ಮಾಡಲು ಸಮುದಾಯ ಭವನವಿಲ್ಲ. ಜನರ ಅನುಕೂಲಕ್ಕಾಗಿ ಸಮುದಾಯ ಭವನ ಕಟ್ಟಿಸಿಕೊಡಬೇಕು' ಎಂದು ಮನವಿ ಮಾಡಿದರು.

ಸಮಿತಿಯ ಪದಾಧಿಕಾರಿಗಳಾದ ನಿಂಗಪ್ಪ ಯಮನೂರ, ಯಮನಪ್ಪ ಹುಲಗಪ್ಪ, ಪರಶುರಾಮ, ಶಿವು ಪ್ರಕಾಶ, ಮಲ್ಲೇಶ, ಬಾಲರಾಜ, ಮೌನೇಶ ರಾಮಪ್ಪ, ಆನಂದ, ಗ್ರಾಮಸ್ಥರಾದ ಏಸುಮಿತ್ರ, ಮಲ್ಲಪ್ಪ, ಚಂದಪ್ಪ, ರತ್ನಪ್ಪ ಇತರರು ಇದ್ದರು.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು