ಯಾದಗಿರಿ: ಮಾದರಿ ವಿಜ್ಞಾನ ಪ್ರಯೋಗಾಲದಲ್ಲಿ ಗಣಿತದ ಸಾಮಗ್ರಿ, ಹ್ಯಾಂಡ್ ವಾಷ್, ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಶಾಲೆಯ ಮಕ್ಕಳಿಗೆ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆ ಅನುಕೂಲ ಮಾಡಿದೆ ಎಂದು ಬಿಆರ್ಸಿ ಮಲ್ಲಿಕಾರ್ಜುನ ಪೂಜಾರಿ ಹೇಳಿದರು.

ನಗರದ ಕನ್ಯಾ ಪ್ರೌಢ ಶಾಲೆಯಲ್ಲಿ ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯು ಟೈಟಾನ್ ಕನ್ಯಾ ಸಂಪೂರ್ಣ (2.0) ಕಾರ್ಯಕ್ರಮದಡಿ ನಿರ್ಮಾಣ ಮಾಡಿದ ಮಾದರಿ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಹ್ಯಾಂಡ್ ವಾಷ್ ಘಟಕ ಮತ್ತು ಹೈಟೆಕ್ ಶೌಚಾಲಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಕಲಿಕೆ ಸಂಸ್ಥೆಯು ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದೆ. ಯಾದಗಿರಿ ಮತ್ತು ಗುರುಮಠಕಲ್ ತಾಲ್ಲೂಕಿನ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದೆ ಎಂದರು.

ಕಲಿಕೆ ಟಾಟಾ ಟ್ರಸ್ಟ್ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕ ಮಹೇಶ ಡಿ.ಕೆ., ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ವಿಶೇಷವಾಗಿ 2 ಕನ್ಯಾ ಪ್ರೌಢ ಶಾಲೆಗಳನ್ನು ಮಾದರಿ ಶಾಲೆಗಳಾಗಿ ನಿರ್ಮಾಣ ಮಾಡಿ, ಮೂಲಸೌಕರ್ಯಗಳನ್ನು ಮಕ್ಕಳಿಗೆಗಾಗಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದೇವೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ವೀರಣ್ಣ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಇಸಿಒ ಕಿಶನ್ ಪವಾರ್, ಬಿಆರ್ಪಿ ವಿಜಯಕುಮಾರ, ವಿಷಯ ಪರಿವಿಕ್ಷಕರಾದ ಬಸನ್ನಗೌಡ, ರಾಜೇಂದ್ರ, ಪತ್ರಕರ್ತ ನಿಜಾಮುದ್ದಿನ್, ಕಲಿಕೆ ಸಂಸ್ಥೆಯ ಹಿರಿಯ ಕಾರ್ಯಕ್ರಮ ಸಂಯೋಜಕ ಮರೆಪ್ಪ ನಂದಿಹಳ್ಳಿ, ಸಂಯೋಜಕರಾದ ಅಶ್ವಿನಿರಾಣಿ, ಜಯಶ್ರೀ, ಶಾಲೆಯ ಶಿಕ್ಷಕಿಯರಾದ ರಾಧಾ, ಜ್ಯೋತಿ, ರಾಜೇಶ್ವರಿ, ಬಸವರಾಜೇಶ್ವರಿ, ಮತ್ತು ಮಕ್ಕಳು ಉಪಸ್ಥಿತರಿದ್ದರು. ಶಿಕ್ಷಕಿ ಜ್ಯೋತಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.