ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮತ್ತೆ 18 ಜನರಿಗೆ ಕೊರೊನಾ ಪಾಸಿಟಿವ್, ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆ

Last Updated 30 ಮೇ 2020, 15:31 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮೇ 30ರಂದು ಶನಿವಾರ 5 ವರ್ಷದೊಳಗಿನ 3 ಮಕ್ಕಳು ಸೇರಿದಂತೆ ಒಟ್ಟು 18 ಜನರಿಗೆ ಕೋವಿಡ್‌–19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 241ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 241 ಪ್ರಕರಣಗಳ ಪೈಕಿ 11 ಜನ ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ಪುಟಪಾಕ್ ಗ್ರಾಮದ 29 ವರ್ಷದ ಪುರುಷ (ಪಿ-2797), ಪುಟಪಾಕ್ ಗ್ರಾಮದ 20 ವರ್ಷದ ಮಹಿಳೆ (ಪಿ-2798), ಗುರುಮಠಕಲ್‍ನ 45 ವರ್ಷದ ಪುರುಷ (ಪಿ-2799), ಗುರುಮಠಕಲ್‍ನ 40 ವರ್ಷದ ಮಹಿಳೆ (ಪಿ-2800), ಗುರುಮಠಕಲ್ ತಾಲ್ಲೂಕಿನ ಕೇಶ್ವಾರ್ ಗ್ರಾಮದ 43 ವರ್ಷದ ಪುರುಷ (ಪಿ-2801), ಕೇಶ್ವಾರ್ ಗ್ರಾಮದ 19 ವರ್ಷದ ಯುವಕ (ಪಿ-2802), ಕೇಶ್ವಾರ್ ಗ್ರಾಮದ 11 ವರ್ಷದ ಬಾಲಕ (ಪಿ-2803), ಪದ್ದೇಪಲ್ಲಿ ಗ್ರಾಮದ 39 ವರ್ಷದ ಪುರುಷ (ಪಿ-2804), ಮದ್ದೇಪಲ್ಲಿ ಗ್ರಾಮದ 32 ವರ್ಷದ ಪುರುಷ (ಪಿ-2805) ಸೋಂಕಿತರಾಗಿದ್ದಾರೆ.

ಯಾದಗಿರಿ ತಾಲ್ಲೂಕಿನ ಅರಕೇರಾ ಬಿ. ಗ್ರಾಮದ 66 ವರ್ಷದ ಪುರುಷ (ಪಿ-2809), ಗುರುಮಠಕಲ್ ತಾಲ್ಲೂಕಿನ ಚಿನ್ನಾಕಾರ ಗ್ರಾಮದ 17 ವರ್ಷದ ಯುವತಿ (ಪಿ-2810), ಯಾದಗಿರಿ ತಾಲ್ಲೂಕಿನ ಅರಕೇರಾ ತಾಂಡಾದ 30 ವರ್ಷದ ಪುರುಷ (ಪಿ-2811), ಅರಕೇರಾ ತಾಂಡಾದ 7 ವರ್ಷದ ಹೆಣ್ಣುಮಗು (ಪಿ-2812), ಅರಕೇರಾ ತಾಂಡಾದ 3 ವರ್ಷದ ಹೆಣ್ಣುಮಗು (ಪಿ-2813), ಅರಕೇರಾ ತಾಂಡಾದ 2 ವರ್ಷದ ಬಾಲಕ(ಪಿ-2814), ಅರಕೇರಾ ತಾಂಡಾದ 1 ವರ್ಷದಬಾಲಕಿ(ಪಿ-2815), ಕೊಲಮಪಲ್ಲಿ ಗ್ರಾಮದ 19 ವರ್ಷದ ಯುವಕ (ಪಿ-2816), ಕೊಲಮಪಲ್ಲಿ ಗ್ರಾಮದ 16 ವರ್ಷದ ಯುವತಿ (ಪಿ-2817) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದವರು. ಈ 18 ಜನರನ್ನು ಗುರುಮಠಕಲ್‍ನ ಎಸ್‌ಟಿ ಹಾಸ್ಟೆಲ್, ಗುರುಮಠಕಲ್‍ನ ಎಸ್‌ಎಲ್‌ಟಿ, ಯಾದಗಿರಿಯ ಡಾನ್ ಬಾಸ್ಕೋ ಶಾಲೆ, ಮಾತರ್ ತೆಲಂಗಾಣ ಹಾಗೂ ಲಿಂಗೇರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT