ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಕೊಡೇಕಲ್ಲ: ವಸತಿ ಶಾಲೆ ಮಕ್ಕಳಿಗೆ ಲಸಿಕೆ

Last Updated 26 ಜೂನ್ 2022, 5:31 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ಹಾಕಲಾಯಿತು.

ಪ್ರಾಚಾರ್ಯರಾದ ರಾಚಮ್ಮ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯವಂತರಾಗಿರಲು ಹಾಗೂ ಮುಂಬರುವ ದಿನಗಳಲ್ಲೂ ಕೂಡ ಕೊರೊನಾ ತಡೆಯುವಂತಾಗಲು ಲಸಿಕೆಯೊಂದೇ ಅಸ್ತ್ರವಾಗಿದೆ. ಆತಂಕಗೊಳ್ಳದೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಎರಡೂ ಹಂತದ ಲಸಿಕೆ ಪಡೆದುಕೊಳ್ಳಬೇಕುಎಂದು ಕಿವಿಮಾತುಹೇಳಿದರು.

ಕೊಡೇಕಲ್ಲ ಸಮುದಾಯ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಬಸವರಾಜೇಶ್ವರಿ ಅಡ್ಡಿ ಮಾತನಾಡಿ, ವಸತಿ ಶಾಲೆಯಲ್ಲಿ ದಾಖಲಾತಿ ಹೊಂದಿರುವ 12 ರಿಂದ 14 ವರ್ಷದ 6, 7, 8 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾರ್ಬಿವ್ಯಾಕ್ಸ್ ಲಸಿಕೆ ಪಡೆದುಕೊಳ್ಳಬೇಕು ಎಂದು ತಿಳಿವಳಿಕೆ ನೀಡಿದರು.ನಿಲಯ ಪಾಲಕಿ ಸಂಗೀತಾ ಬಡಿಗೇರ, ಈರಮ್ಮ ಕುಂಬಾರ, ಪರ್ವಿನ್ ಬೇಗಂ, ಕೀರ್ತಿ ಜೋಶಿ, ಶಕುಂತಲಾ ಗಡ್ಡದ, ರೇಣುಕಾ.ಪಿ, ಮೈತ್ರಾ ಮಾನೆ, ವಿಜಯಲಕ್ಷ್ಮೀ ಹೊಸಮಠ, ಭಾಗ್ಯಶ್ರೀ ಬಿರಾದಾರ ಆಶಾ ಕಾರ್ಯಕರ್ತೆ ಚಿನ್ನಮ್ಮ ದೊಡಮನಿ ಸೇರಿದಂತೆ ಪಾಲಕರುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT