ಭಾನುವಾರ, ಸೆಪ್ಟೆಂಬರ್ 26, 2021
21 °C

ಯಾದಗಿರಿ ಜಿಲ್ಲೆಗೆ 80 ಬಸ್‌ಗಳಲ್ಲಿ ಬಂದ ವಲಸೆ ಕಾರ್ಮಿಕರಿಗೆ ಕೋವಿಡ್‌ ಟೆಸ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯರಗೋಳ (ಯಾದಗಿರಿ ಜಿಲ್ಲೆ): ಲಾಕ್‌ಡೌನ್‌ ಕಾರಣಕ್ಕಾಗಿ ಬೆಂಗಳೂರು ಮತ್ತಿತರೆಡೆಯಿಂದ ಜಿಲ್ಲೆಗೆ 80 ಬಸ್‌ಗಳಲ್ಲಿ ವಲಸೆ ಕಾರ್ಮಿಕರು ಬಂದಿದ್ದಾರೆ.

ಇವರನ್ನು ಅವರ ಊರಿಗೆ ಕಳಿಸುವ ಮುನ್ನ ಜಿಲ್ಲಾ ಆಡಳಿತ ಅವರಿಂದ ಕೋವಿಡ್‌ ಪರೀಕ್ಷೆಯ ಮಾದರಿ ಸಂಗ್ರಹಿಸುತ್ತಿದೆ.

ಯಾದಗಿರಿ ಜಿಲ್ಲೆಯ ಪ್ರವೇಶದಲ್ಲೇ ಬಸ್‌ಗಳನ್ನು ತಡೆದಿರುವ ಜಿಲ್ಲಾ ಆಡಳಿತ, ಎರಡು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರ ಕೋವಿಡ್‌ ಪರೀಕ್ಷೆ ನಡೆಸುತ್ತಿದೆ.

ಇವರನ್ನು ಹೊತ್ತುತಂದ ಬಸ್‌ಗಳು ಸಾಲಾಗಿ ನಿಂತಿವೆ.

ವಸಲೆ ಕಾರ್ಮಿಕರು ಕಡ್ಡಾಯವಾಗಿ ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳುವಂತೆ ಜಿಲ್ಲಾ ಆಡಳಿತ ಸೂಚನೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು