ಗುರುವಾರ , ಮೇ 13, 2021
34 °C

ವೈದ್ಯರ ಸಲಹೆ ತಪ್ಪದೆ ಪಾಲಿಸಿ: ಡಾ. ವಿನಯಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ದೃಢಪಟ್ಟ ನಂತರ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದೆ. ವೈದ್ಯರು ಹೇಳಿದ ನಿಯಮಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಿದೆ. 8ನೇ ದಿನಕ್ಕೆ ನೆಗೆಟಿವ್ ವರದಿ ಬಂತು. ಆ ನಂತರ ಕೆಲ ದಿನ ವಿಶ್ರಾಂತಿ ಪಡೆದು ಈಗ ಕರ್ತವ್ಯಕ್ಕೆ ಹಾಜರಾಗಿದ್ದೇನೆ.

ಕ್ವಾರಂಟೈನ್‌ ವೇಳೆ 5 ದಿನ ಮಾತ್ರೆ ಕೊಟ್ಟರು. ಅಷ್ಟು ದಿನ ಮಾತ್ರೆ ಸೇವಿಸಿದೆ. ಜೊತೆಗೆ ಸಿ ವಿಟಿಮಿನ್‌ ಹೆಚ್ಚಾಗಿರುವ ಹಣ್ಣುಗಳ ಸೇವನೆ ಮಾಡಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ನಿಂಬೆ ಹಣ್ಣಿನ ಜ್ಯೂಸ್‌ ನಿಯಮಿತವಾಗಿ ಸೇವನೆ ಮಾಡುತ್ತಾ ಬಂದಿದ್ದೇನೆ. ಈ ಮೂಲಕ ಕೋವಿಡ್‌ನಿಂದ ಗುಣಮುಖನಾಗಿದ್ದೇನೆ.

ಯಾವುದೇ ಆತಂಕವಿಲ್ಲದೆ, ಕೋವಿಡ್‌ ಭಯವಿಲ್ಲದಿದ್ದರೆ ಒಂದೇ ವಾರ ಅಥವಾ ಹತ್ತೇ ದಿನದಲ್ಲೇ ಗುಣಮುಖರಾಗಲು ಸಾಧ್ಯವಿದೆ. ಕೆಲವರು ವಿನಾ ಕಾರಣ ಭಯ, ಆತಂಕ ಪಡುತ್ತಾರೆ. ಇದರಿಂದ ನಷ್ಟವೇ ಹೊರತು ಲಾಭವಿಲ್ಲ. ಹೀಗಾಗಿ ಕೋವಿಡ್‌ ಬಂದರೂ ಎದೆಗುಂದದೆ ಔಷಧಿ ತೆಗೆದುಕೊಳ್ಳಬೇಕು. ಆಗ ರೋಗವೂ ಶೀಘ್ರ ಗುಣಮುಖವಾಗಲು ಸಾಧ್ಯವಿದೆ.

ಕೆಲವರು ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಹೀಗಾಗಿ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರಲಿ. ಅಂತರ ಕಾಪಾಡಿಕೊಳ್ಳುವುದು ಕೂಡ ಅನಿವಾರ್ಯ. ಈ ಮೂಲಕ ಕೊರೊನಾ ಸರಪಳಿ ತುಂಡರಿಸಲು ಸಾಧ್ಯ.

-ಡಾ.ವಿನಯಕುಮಾರ, ಜಿಲ್ಲಾ ಮೈಕ್ರೊಬಯಾಲಜಿಸ್ಟ್, ಜಿಲ್ಲಾ ಸಾರ್ವಜನಿಕ ಪ್ರಯೋಗಾಲಯ ಯಾದಗಿರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು