ಗುರುವಾರ , ಜನವರಿ 23, 2020
27 °C

ಜೀಪ್ ಡಿಕ್ಕಿ: ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸಗಿ: ದ್ವಿಚಕ್ರ ವಾಹನಕ್ಕೆ ಕ್ರೂಜರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳಲ್ಲಿಯೇ ಮಹಿಳೆ ಮೃತಪಟ್ಟ ಘಟನೆ ಗುರುವಾರ ತಾಲ್ಲೂಕಿನ ಕೊಡೇಕಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಜನಕೋಳೂರ ಗ್ರಾಮದ ಬಳಿ ನಡೆದಿದೆ.

ಮೃತ ಮಹಿಳೆ ಗೆದ್ದಲಮರಿ ತಾಂಡಾದ ನೀಲಾಬಾಯಿ ಗುಂಡಪ್ಪ ಜಾಧವ (20) ಎಂದು ಗುರುತಿಸಲಾಗಿದೆ. ಇನ್ನೋರ್ವ ನಂದಪ್ಪ ತಿಪ್ಪಣ್ಣ ಜಾಧವ ಇತನಿಗೆ ಗಾಯಗಳಾಗಿದ್ದು, ಕ್ರೂಜರ್ ಚಾಲಕನ ನಿರ್ಲಕ್ಷದಿಂದಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯ ಎಎಸ್ಐ ಭೀಮಾಶಂಕರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)