ಸೋಮವಾರ, ಆಗಸ್ಟ್ 8, 2022
23 °C
ತರಕಾರಿ ದರ ಏರಿಳಿಕೆ, ಗಜ್ಜರಿ, ಬೀನ್ಸ್ ಬೆಲೆ ಏರಿಕೆ

ಯಾದಗಿರಿ: ತರಕಾರಿ, ಸೇಬು, ಟೊಮೆಟೊ ದರ ಇಳಿಕೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ತರಕಾರಿ ಸೇಬು ಟೊಮೆಟೊ ದರ ಇಳಿಕೆಯಾಗಿದೆ. ಕಳೆದ ವಾರಕ್ಕಿಂತ ₹20 ಇಳಿಕೆಯಾಗಿದ್ದು, ಕೇಜಿಗೆ ₹40 ಇದೆ. ಇನ್ನೇನು ಎಲ್ಲ ಕಡೆ ಟೊಮೆಟೊ ಅಭಾವವಾಗಿ ದರ ಏರಿಕೆಯಾಗುತ್ತದೆ ಎಂದು ಎಣಿಸಿದ್ದ ಗ್ರಾಹಕರಿಗೆ ಬೆಲೆ ಇಳಿಕೆ ಸಮಾಧಾನ ಮೂಡಿಸಿದೆ.

ದರ‌ ಏರಿಕೆಯಾಗಿದ್ದರಿಂದ ರೈತರು, ವ್ಯಾಪಾರಸ್ಥರು ಖುಷ್‌ ಆಗಿದ್ದರು. ಆದರೆ, ಒಂದೇ ವಾರದಲ್ಲಿ ದರ ಸಮರ ನಡೆದು ಇಳಿಕೆಯಾಗಿರುವುದು ರೈತರಿಗೆ ನಿರಾಶೆ ಉಂಟು ಮಾಡಿದೆ. 

ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಅತ್ಯಧಿಕ ಮಳೆ ಬಂದು ತರಕಾರಿ ಬೆಳೆ ನಾಶವಾಗಿತ್ತು. ಆದರಲ್ಲಿ ಟೊಮೆಟೊ ಬೆಳೆಯೂ ಸೇರಿತ್ತು. ಗುರುಮಠಕಲ್‌, ಶಹಾಪುರ ತಾಲ್ಲೂಕಿನಲ್ಲಿ ತರಕಾರಿ ಬೆಳೆಗಳು ಹಾನಿಯಾಗಿತ್ತು. ಆಭಾವ ಸೃಷ್ಟಿಯಾಗುತ್ತದೆ ಎನ್ನುವಾಗಲೇ ದರ ಇಳಿಕೆಯಾಗಿದೆ. 

ಇನ್ನುಳಿದಂತೆ ಗಜ್ಜರಿ, ಬೀನ್ಸ್‌ ಬೆಲೆ ₹40 ರಷ್ಟು ಏರಿಕೆಯಾಗಿ ಅತಿ ದರ ತರಕಾರಿ ಎನಿಸಿಕೊಂಡಿದೆ. ಬೀನ್ಸ್ ಕಳೆದ ವಾರ ₹80 ಇದ್ದಿದ್ದು, ಈ ವಾರ ₹120 ಕೇಜಿಗೆ ಮಾರಾಟವಾಗುತ್ತಿದೆ. ಗಜ್ಜರಿ ₹80 ಇತ್ತು. ಈ ವಾರ ₹120ಕ್ಕೆ ಜಿಗಿತ ಕಂಡಿದೆ. ಕಳೆದ ವಾರಕ್ಕಿಂತ ಹೀರೆಕಾಯಿಯೂ ಹಿರಿಹಿರಿ ಹಿಗ್ಗಿದೆ. ₹80 ರಿಂದ ₹120ಕ್ಕೆ ಏರಿಕೆಯಾಗಿದೆ. 

ಹೂಕೋಸು ಕಳೆದ ವಾರಕ್ಕಿಂತ ₹20 ಜಾಸ್ತಿಯಾಗಿ ₹80ಗೆ ಕೇಜಿ ದರ ಇದೆ. ಬಿಟ್ ರೂಟ್ ₹60 ಇದ್ದಿದ್ದು, ₹80 ಆಗಿದೆ. ಆದರೆ, ಬೆಂಡೆಕಾಯಿ ದರ ಕಳೆದ ವಾರಕ್ಕಿಂತ ₹20 ಇಳಿಕೆಯಾಗಿದೆ. ಕಳೆದ ವಾರ ₹60 ಇತ್ತು. ಈ ವಾರ ₹40 ಕೇಜಿ ಇದೆ. ಮೆಣಸಿನಕಾಯಿ ದರವೂ ಇಳಿಕೆ ಕಂಡು ಕೇಜಿ ₹60 ಆಗಿದೆ. ಶ್ರಾವಣ ಮಾಸದಲ್ಲಿ ತರಕಾರಿ ರಾಜ ಬದನೆಕಾಯಿ ಬೆಲೆ ಗಗನಕ್ಕೇರಿತ್ತು. ಕಳೆದ ವಾರ ಇರುವಷ್ಟೇ ಈ ವಾರವೂ ಸ್ಥಿರವಾಗಿದೆ. ಇನ್ನುಳಿದಂತೆ ಇತರ ತರಕಾರಿ ದರ ಯಥಾಸ್ಥಿತಿ ಇದೆ. 

ಕಳೆದ ವಾರ ನುಗ್ಗೆಕಾಯಿ ದರ ₹160ಗೆ ಕೇಜಿ ಇತ್ತು. ಈ ಬಾರಿ ಆವಕ ಹೆಚ್ಚಾಗಿದ್ದರಿಂದ ₹80 ದರ ಇದೆ. ಆದರೆ, ಸೌತೆಕಾಯಿ ದರ ಹೆಚ್ಚಳವಾಗಿದೆ. 

ಸೊಪ್ಪುಗಳ ದರ

ಪಾಲಕ್ ಸೊಪ್ಪು ಕಳೆದ ವಾರದಂತೆ ಈ ವಾರವೂ ₹20ಗೆ 3 ಕಟ್ಟು ಮಾರಾಟವಾಗುತ್ತಿದೆ. ಸಬ್ಬಸಿಗೆ ₹10ಗೆ ಒಂದು ಕಟ್ಟು, ಮೆಂತೆ ₹20ಗೆ ಒಂದು ಕಟ್ಟು, ರಾಜಗಿರಿ ₹20ಗೆ ಮೂರು ಕಟ್ಟು, ಪುಂಡಿ ಪಲ್ಯೆ ₹20ಗೆ ನಾಲ್ಕು ಕಟ್ಟು ಮಾರಾಟವಾಗಿದೆ. ಕೋತಂಬರಿ ₹30ಗೆ ಒಂದು ಕಟ್ಟು, ಪುದೀನಾ ₹30ಗೆ ಒಂದು ದರ ಇದೆ. 

ಕಳೆದ ವಾರ ₹120 ಕೇಜಿ ಈರುಳ್ಳಿ ಸೊಪ್ಪು ಇತ್ತು. ಈ ವಾರ ₹40 ಇಳಿಕೆಯಾಗಿ ₹80 ಕೆಜಿ ಮಾರಾಟವಾಗುತ್ತಿದೆ. ಬೆಳ್ಳೊಳ್ಳಿ ₹120 ಕೇಜಿ, ಶುಂಠಿ ₹80 ಕೇಜಿ ಇದೆ. 

***

ರಾಯಚೂರು, ಕಲಬುರ್ಗಿಯಿಂದ ತರಕಾರಿ ತರಿಸುತ್ತೇವೆ. ಮಳೆಯಿಂದ ಬೆಳೆ ನಾಶವಾಗಿದೆ. ಹೀಗಾಗಿ ಕೆಲ ತರಕಾರಿ ಬೆಲೆ ಏರಿಕೆಯಾಗಿದೆ
ಮಹಮ್ಮದ್ ಇಮ್ರಾನ್, ತರಕಾರಿ ವ್ಯಾಪಾರಿ

***

ಕಳೆದ ವಾರಕ್ಕಿಂತ ತರಕಾರಿ ತುಟ್ಟಿಯಾಗಿದೆ‌. ಲಾಕ್‌ಡೌನ್ ಪ್ರಭಾವ ತರಕಾರಿ ಮೇಲೆ ಬಿದ್ದಿದೆ. ರೈತರಿಗೆ ಉತ್ತಮ ಬೆಲೆ ಸಿಕ್ಕರೆ ಅವರಿಗೆ ಅನುಕೂಲ
ಶಂಕರ ಪವಾರ್, ಗ್ರಾಹಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು