ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸೋಮವಾರದಿಂದಲೇ ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ಕುಂಬಳಕಾಯಿ, ಬಾಳೆದಿಂಡು, ಕಬ್ಬು, ಚೆಂಡು ಹೂವು, ನಿಂಬೆ ಹಣ್ಣು ಮಾರಾಟಕ್ಕೆ ಭರ್ಜರಿಯಾಗಿ ನಡೆಯಿತು. ಹಬ್ಬದ ಪ್ರಯುಕ್ತ ಬಟ್ಟೆ, ಚಿನ್ನ, ಬೆಳ್ಳಿ, ಖರೀದಿ
ಜೋರಾಗಿತ್ತು.
ಸೋಮವಾರ, ಬುಧವಾರ ಸಂಜೆ ಅಂಗಡಿಯಲ್ಲಿ ಲಕ್ಷ್ಮಿದೇವಿ ಪೂಜೆ ಮಾಡುವ ಮಾಡಿ ಸಿಬ್ಬಂದಿಗೆ ಸಿಹಿತಿನಿಸು ನೀಡಿ ಶುಭ
ಹಾರೈಸಿದರು.
ವಾಹನಗಳಿಗೆ ಪೂಜೆ: ಹೊಸ ವಾಹನ ಖರೀದಿಸಿದ ಗ್ರಾಹಕರು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಿ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದು ಸಂಭ್ರಮ ಪಟ್ಟರು. ಹಬ್ಬದ ಅಂಗವಾಗಿ ವಿವಿಧ ಬೈಕ್ ಶೋ ರೂಂಗಳು ರಿಯಾಯ್ತಿ ದರ ಘೋಷಣೆ ಮಾಡಿದ್ದವು. ವಾಹನಗಳಿಗೆ ಹೂವಿನ ಹಾರ, ನಿಂಬೆ ಹಣ್ಣು, ಮೆಣಸಿನಕಾಯಿ ಕಟ್ಟಿ ಪೂಜೆ ಸಲ್ಲಿಸಲಾಯಿತು.
ವಿರಳ ವಾಹನ ಸಂಚಾರ: ಹಬ್ಬದ ಅಂಗವಾಗಿ ನಗರದಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಪೂಜಾ ಸಾಮಗ್ರಿ ಖರೀದಿ ವೇಳೆ ಮಾತ್ರ ಪ್ರಮುಖ ವೃತ್ತಗಳಲ್ಲಿ ವಾಹನಗಳ ಓಡಾಟ ಇತ್ತು. ಸಂಜೆ ನಂತರ ವಾಹನಗಳ ಸಂಚಾರ ವಿರಳವಾಗಿ ರಸ್ತೆ ಖಾಲಿ
ಖಾಲಿಯಾಗಿತ್ತು.
ಗುರುಮಠಕಲ್ ವರದಿ: ಹಬ್ಬದ ದಿನದಂದೇ ಸೂರ್ಯಗ್ರಹಣ ಕಾರಣ ಗುರುಮಠಕಲ್ ಪಟ್ಟಣದಲ್ಲಿ ಮಂಗಳವಾರದ ಬದಲಿಗೆ ಬುಧವಾರದಂದು ಅಂಗಡಿ, ವಾಹನ, ವ್ಯಾಪಾರಿ ಸ್ಥಳಗಳಲ್ಲಿ ಲಕ್ಷ್ಮಿ ಪೂಜೆ ಮಾಡಲಾಯಿತು. ಬುಧವಾರ ದೀಪಾವಳಿ ಹಬ್ಬದ ಸಂಭ್ರಮ ಕಾಣಿಸಿದ್ದು, ಆ ಮೊದಲು ಹಬ್ಬದ ಕಳೆ ಕಡಿಮೆಯಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.