ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ಊಟ ಪ್ರಕರಣ: ಸಿಆರ್‌ಪಿ, ಅಕ್ಷರ ದಾಸೋಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕನಗಂಡನಹಳ್ಳಿ ಬಿಸಿ ಊಟ ಪ್ರಕರಣ
Published 1 ಡಿಸೆಂಬರ್ 2023, 6:31 IST
Last Updated 1 ಡಿಸೆಂಬರ್ 2023, 6:31 IST
ಅಕ್ಷರ ಗಾತ್ರ

ಹುಣಸಗಿ: ತಾಲ್ಲೂಕಿನ ಕನಗಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಣಸಗಿ ಸಿಆರ್‌ಪಿ ಹಾಗೂ ಅಕ್ಷರ ದಾಸೋಹದ ಅಧಿಕಾರಿ ವಿರುದ್ಧವೂ ಕ್ರಮಕೈಗೊಳ್ಳುವಂತೆ ಹುಣಸಗಿ ತಾಲ್ಲೂಕು ಮಾದಿಗ ದಂಡೋರ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಬುಧವಾರ ಹುಣಸಗಿ ತಾಲ್ಲೂಕು ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸುರಪುರದ ಕ್ಷೇತ್ ರಶಿಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಆರು ತಿಂಗಳುಗಳಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡದಿರುವುದು ಮತ್ತು ಎಂಟು ದಿನಗಳ ಕಾಲ ಬಿಸಿ ಊಟ ನೀಡಿಲ್ಲ ಎಂಬ ಕಾರಣದಿಂದ ಮುಖ್ಯ ಶಿಕ್ಷಕರನ್ನು ಮಾತ್ರ ಅಮಾತುಗೊಳಿಸಲಾಗಿದೆ.

ಹುಣಸಗಿ ಕ್ಲಸ್ಟರ್‌ನ ಸಿಆರ್‌ಪಿ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳನ್ನು ಅಮಾನತುಗೊಳಿಸದೇ ನೊಟೀಸ್ ನೀಡಿ ಕೈತೊಳೆದುಕೊಂಡಿರುವುದು ಖೇದಕರ ಎಂದು ಸಮಿತಿಯ ತಾಲ್ಲೂಕು ಅಧ್ಯಕ್ಷ ಮಾನಪ್ಪ ಕಟ್ಟಿಮನಿ ಆಕ್ರೋಶ ವ್ಯಕ್ತಪಡಿಸಿದರು.

ಹುಣಸಗಿ ಸಿಆರ್‌ಪಿ ಹಾಗೂ ಅಕ್ಷರ ದಾಸೋಹ ಅಧಿಕಾರಿಗಳನ್ನು ಅಮಾನತುಗೊಳಿಸದಿದ್ದಲ್ಲಿ ಡಿಸೆಂಬರ್‌ 5 ರಂದು ಸುರಪುರದ ಸುರಪುರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಎದುರು ಧರಣಿ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ.

ಪದಾಧಿಕಾರಿಗಳಾದ ಸಿದ್ದಣ್ಣ ಮೇಲಿನಮನಿ, ಮಂಜುನಾಥ ಚನ್ನೂರ, ಸೋಮಶೇಖರ ಆನೇಕಿ, ಮೌನೇಶ, ತಿಪ್ಪಣ್ಣ ಗೋಗಿ, ಭೀಮಣ್ಣ ಚಾನಿ, ತಿಪ್ಪಣ್ಣ ಬೇವಿನಗಿಡ, ಸಿದ್ದಣ್ಣ ಹೊಸಮನಿ, ಪ್ರಭು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT