ಯಾದಗಿರಿಯ ಬಿಜೆಪಿ ಕಚೇರಿಯಲ್ಲಿ ಬುಧವಾರ ಡಿ. ದೇವರಾಜ ಅರಸು ಜಯಂತಿ ಆಚರಿಸಲಾಯಿತು
ಬಡವರು ಶೋಷಿತರು ಹಿಂದುಳಿದ ವರ್ಗಗಳ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ಹೊಸ ಕಾನೂನು ಮತ್ತು ಕಾಯ್ದೆಗಳನ್ನು ಜಾರಿ ಮಾಡುವಲ್ಲಿ ದಿಟ್ಟ ಹೆಜ್ಜೆ ಇರಿಸಿ ಹೊಸ ಬದುಕಿಗೆ ದಾರಿದೀಪವಾಗಿದ್ದರು
ಹರ್ಷಲ್ ಭೋಯರ್ ಜಿಲ್ಲಾಧಿಕಾರಿ
‘ಅರಸು ಕೊಡುಗೆ ಅಪಾರ’
ಯಾದಗಿರಿ: ‘ಪರಿವರ್ತನೆಯ ಹರಿಕಾರರಾದ ದೇವರಾಜ ಅರಸು ಅವರ ಆಡಳಿತದಲ್ಲಿ ಹಲವು ಸುಧಾರಣೆ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಸುವರ್ಣ ಯುಗವಾಗಿತ್ತು. ರಾಜ್ಯಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ’ ಎಂದು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಕಟ್ಟಿಮನಿ ಹೇಳಿದರು. ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಅವರು ಮಾತನಾಡಿದರು. ‘ಉಳುವವನೇ ಭೂಮಿಯ ಒಡೆಯ ಜೀತ ಪದ್ಧತಿ ನಿರ್ಮೂಲನೆ ಮಾಡಿ ಸರ್ವರಿಗೂ ಸಮಪಾಲು ನೀಡುವ ಚಿಂತನೆ ಮಾಡಿ ಅದನ್ನು ದಿಟ್ಟತನದಿಂದ ಜಾರಿಗೆಯೂ ತಂದಿದ್ದರು.ಅವರಿಂದಾಗಿ ಹಿಂದುಳಿದ ವರ್ಗದವರು ರಾಜಕೀಯವಾಗಿ ಮೇಲೆ ಬರುವಂತೆ ಆಗಿದೆ’ ಎಂದರು. ನಗರ ಬಿಜೆಪಿ ಉಪಾಧ್ಯಕ್ಷ ಕಾಶಿರಾವ್ ಶಿರಸಾಗರ್ ರೈತ ಮೋರ್ಚಾ ಅಧ್ಯಕ್ಷ ಶಿವಣ್ಣ ವಿಶ್ವಕರ್ಮ ಪ್ರಮುಖರಾದ ಸಾಬಣ್ಣ ವೆಂಕಟೇಶ್ ಹಣಮಂತ ಉಪಸ್ಥಿತರಿದ್ದರು.