ಗುರುವಾರ , ಅಕ್ಟೋಬರ್ 1, 2020
27 °C

ಚೌಡಯ್ಯ ಫಲಕ ತೆರವು ಗೊಳಿಸಲು ಡಿಎಸ್‌ಎಸ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಪಕ್ಕದಲ್ಲಿ ಒಂದು ವಾರದ ಹಿಂದೆ ರಾತ್ರೋ ರಾತ್ರಿ ನಿಜಶರಣ ಅಂಬಿಗರ ಚೌಡಯ್ಯ ನಾಮಫಲಕವನ್ನು ತಾಲ್ಲೂಕಿನ ಅರಿಕೇರಾ (ಕೆ) ಗ್ರಾಮದ ವೃತ್ತದಲ್ಲಿ ಹಾಕಿದ್ದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ಯಾದಗಿರಿ-ಹೈದರಾಬಾದ್ ಮುಖ್ಯ ರಸ್ತೆ ತಡೆದು ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

‘ಸುಮಾರು ಹತ್ತು ವರ್ಷಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಹಾಕಲಾಗಿದ್ದು, ಈಗ ಅದರ ಪಕ್ಕದಲ್ಲಿಯೇ ನಾಮಫಲಕ ಅಳವಡಿಸಿ ಶಾಂತಿ ಭಂಗವನ್ನು ಉಂಟು ಮಾಡಿದ್ದು, ಕೂಡಲೇ ತೆರವು ಮಾಡಬೇಕೆಂದು’ ದಸಂಸ ಕಾರ್ಯಕರ್ತರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ‘ಒಂದು ವಾರದ ಒಳಗೆ ನಿಜಶರಣ ಅಂಬಿಗರ ಚೌಡಯ್ಯ ಭಾವಚಿತ್ರದ ನಾಮಫಲಕವನ್ನು ತೆರವುಗೊಳಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  ಒಂದು ವಾರದ ಒಳಗೆ ಕ್ರಮ ಕೈಗೊಳ್ಳದಿದ್ದರೆ ಮತ್ತೆ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದೆಂದು’ ಮುಖಂಡರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಡಾ.ಮಲ್ಲಿಕಾರ್ಜನ ಆಶನಾಳ, ಕೆ. ಬಸವರಾಜ ಗೋನಾಲ ವಡಿಗೇರಿ, ಮಲ್ಲಿಕಾರ್ಜುನ್ ಶಾಖನವರ ವಡಿಗೇರಾ, ಭೀಮಣ್ಣ ಕ್ಯಾತನಾಳ ವಡಿಗೇರಾ, ಮಲ್ಲಿಕಾರ್ಜುನ್ ಕುರಕುಂದಿ, ಮಲ್ಲಪ್ಪ ಬಿ .ಉರುಸುಲ್ ಯಾದರಿರಿ, ದೇವಿಂದ್ರಪ್ಪ ಮೈಲಾಪುರ, ಗೌತಮ ಕ್ರಾಂತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು