ಕೆಂಭಾವಿ: ಕಳೆದ ವಾರ ಸುರಿದ ಮುಂಗಾರು ಪೂರ್ವ ಮಳೆಯನ್ನಾಧರಿಸಿ ಪಟ್ಟಣದ ಹಲವೆಡೆ ರೈತರು ಹತ್ತಿ ಬೀಜ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ಇನ್ನೂ ಕೆಂಭಾವಿ ಮತ್ತು ಯಕ್ತಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಬಿತ್ತನೆಗೆ ಬೇಕಾಗುವಷ್ಟು ಮಳೆ ಬಂದಿದ್ದು, ವಲಯದ ಇನ್ನೂ ಹಲವಾರು ಗ್ರಾಮಗಳಲ್ಲಿ ಮಳೆ ಬೀಳದೆ ರೈತರು ಆಕಾಶದತ್ತ ಮುಖ ಮಾಡುತ್ತಿದ್ದಾರೆ.

ಕೃಷಿ ಇಲಾಖೆಯ ಪ್ರಕಾರ ವಲಯದಲ್ಲಿ ಕೆಂಭಾವಿ ತಾಲ್ಲೂಕು ವ್ಯಾಪ್ತಿಯಲ್ಲಿ 25 ಸಾವಿರ ಹೆಕ್ಟೇರ್ ಕೃಷಿಭೂಮಿಯಿದ್ದು, 13 ಸಾವಿರ ಹೆಕ್ಟೇರ್ ನೀರಾವರಿ, 12 ಸಾವಿರ ಹೆಕ್ಟೇರ್ ಒಣ ಬೇಸಾಯ ಭೂಮಿ ಇದೆ. ಬಿತ್ತನೆಗೆ ಬೇಕಾಗುವಷ್ಟು ಸಮರ್ಪಕವಾಗಿ ಮಳೆಯಾಗಿಲ್ಲ.

ಕೆಲವು ಪ್ರದೇಶಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ಮಳೆಯಾಗಿದ್ದು, ಅದನ್ನೆ ನಂಬಿ ರೈತರು ಹತ್ತಿ ಬಿತ್ತನೆಯಲ್ಲಿ ತೊಡಗಿದ್ದಾರೆ. ಶೇ 80ರಷ್ಟು ಜಮೀನಿನಲ್ಲಿ ಹತ್ತಿ ಬಿತ್ತನೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಹತ್ತಿ ಬಿತ್ತನೆ ಹೆಚ್ಚಾದಂತೆ ಕಾರ್ಮಿಕರ ಬೇಡಿಕೆಯೂ ಹೆಚ್ಚಾಗಿದೆ.

ಪ್ರತಿದಿನಕ್ಕೆ ಬೇಸಿಗೆಯಲ್ಲಿ ₹150 ರಿಂದ ₹200ಗಳವರೆಗೆ ಕೂಲಿ ಈಗ ₹250ರಿಂದ ₹300ಕ್ಕೆ ಏರಿಕೆಯಾಗಿದೆ. ಪಟ್ಟಣದ ಹಲವೆಡೆ ಹತ್ತಿ ಬಿತ್ತನೆ ಕಾರ್ಯ ಜೋರಾಗಿದೆ. ಇನ್ನಷ್ಟು ಉತ್ತಮ ಮಳೆಗೆ ರೈತರು ಕಾಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.