ಯಾದಗಿರಿ: ಶ್ರಾವಣ ಮಾಸ ಒಂದು ಕಡೆ, ಮಳೆಯಿಂದ ಹಾನಿಯಾಗಿರುವ ತರಕಾರಿ ಬೆಳೆ ಇನ್ನೊಂದೆಡೆ. ಇದರಿಂದ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಕಳೆದ ವಾರಕ್ಕಿಂತ ₹20ರಿಂದ ₹30 ಬೆಲೆ ಹೆಚ್ಚಳವಾಗಿದೆ. ಹಳ್ಳಿಗಳಿಂದ ಮಾರುಕಟ್ಟೆಗೆ ತರಕಾರಿಬಾರದಿರುವುದು ಸಮಸ್ಯೆ ತಂದೊಡ್ಡಿದೆ.

ಗಗನಕ್ಕೇರಿದ ಬದನೆಕಾಯಿ ಬೆಲೆ: ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಬದನೆಕಾಯಿಗೆ ಹುಳು ಬಾಧೆ ಕಾಣಿಸಿಕೊಂಡಿದೆ. ಇದರಿಂದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಬದನೆಕಾಯಿ ಕಳೆದ ವಾರ ₹60ಕೇಜಿ ಇತ್ತು. ಈ ವಾರ ₹120ಕ್ಕೆ ಏರಿಕೆಯಾಗಿದೆ. ಬಿಳಿ ಬದನೆಕಾಯಿಯಲ್ಲಿ ಹೆಚ್ಚಿನ ಹುಳು ಬಾಧೆ ಕಾಣಿಸಿಕೊಂಡಿದೆ. ಕಂದು ಬಣ್ಣದ ಬದನೆಕಾಯಿಯಲ್ಲಿ ಅಷ್ಟೊಂದು ಇಲ್ಲ. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿವೆ. ಸಿಹಿ ಅಡುಗೆ ಮಾಡಿದರೆ ನೆಂಚಿಕೊಳ್ಳಲು ಬದನೆಕಾಯಿ ಬೇಕಾಗುತ್ತದೆ. ದರ ಹೆಚ್ಚಾದರೂ ಖರೀದಿಸುತ್ತೇವೆ ಎಂದು ಗ್ರಾಹಕ ವೀರಭದ್ರಯ್ಯ ಸ್ವಾಮಿ ಹೇಳುತ್ತಾರೆ.

ಮಾರುಕಟ್ಟೆಗೆ ಬಾರದ ಸೊಪ್ಪುಗಳು: ಹಳ್ಳಿಗಳಿಂದ ಪಾಲಕ್, ಮೆಂತ್ಯೆ, ರಾಜಗಿರಿ, ಸಬ್ಬಸಿಗಿ, ಪುಂಡಿಪಲ್ಯ ಸೊಪ್ಪುಗಳು ಮಾರುಕಟ್ಟೆಗೆ ಬರುತ್ತಿಲ್ಲ. ಮೆಂತ್ಯೆ ಮುಖ್ಯ ಮಾರುಕಟ್ಟೆಯಲ್ಲೂ ಸಿಗುತ್ತಿಲ್ಲ. ಇದರಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಸೊಪ್ಪುಗಳಿಗೆಬೇಡಿಕೆ ಹೆಚ್ಚಾಗಿದೆ.

ಕಳೆದ ವಾರ ಪಾಲಕ್₹20ಗೆ 3 ಕಟ್ಟು,ಮೆಂತ್ಯೆ ₹20ಗೆ1 ಕಟ್ಟು,ಪುಂಡಿಪಲ್ಯೆ₹20ಗೆ ಆರು ಕಟ್ಟು,ರಾಜಗಿರಿ₹20ಕ್ಕೆ ನಾಲ್ಕು,ಸಬ್ಬಸಿಗಿ ಒಂದು ಕಟ್ಟು ₹10,ಕೋತಂಬರಿ ಒಂದು ಕಟ್ಟು ₹30,ಈರುಳ್ಳಿ ಸೊಪ್ಪು ಕೇಜಿಗೆ ₹80 ಇತ್ತು.

‘ಮುಖ್ಯ ಮಾರುಕಟ್ಟೆಯಿಂದಸೊಪ್ಪುಗಳು ತಂದು ಮಾರಾಟ ಮಾಡಿದರೆ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ₹5ರಿಂದ 10 ಲಾಭ ಸಿಗುವುದಿಲ್ಲ. ಹೆಚ್ಚಿನ ಬೆಲೆ ಹೇಳಿದರೆ ಗ್ರಾಹಕರು ಖರೀದಿಸುವುದಿಲ್ಲ. ಇದರಿಂದ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸೊಪ್ಪು ದರ ಹೆಚ್ಚಳವಾಗಿದ್ದರಿಂದ ತರುತ್ತಿಲ್ಲ’ ಎಂದುತರಕಾರಿ ವ್ಯಾಪಾರಿರಾಜು ಯಮನಪ್ಪ ತಿಳಿಸುತ್ತಾರೆ.

ನುಗ್ಗೆಕಾಯಿ ದರ ಇಳಿಕೆ: ಕಳೆದ ವಾರ ನುಗ್ಗೆಕಾಯಿ ₹160 ಕೇಜಿ ಇತ್ತು. ಈ ವಾರ ಬೇಡಿಕೆ ಕುಸಿತಗೊಂಡು ₹80ಗೆ ಇಳಿಕೆ ಕಂಡಿದೆ. ಮದುವೆ ಸೀಸನ್ ಕೂಡ ಮುಕ್ತಾಯವಾಗಿದ್ದು, ನುಗ್ಗೆಕಾಯಿ ಬೇಡಿಕೆ ಕುಸಿಯಲು ಕಾರಣವಾಗಿದೆ.

ಹಣ್ಣಿನ ದರ: ₹20 ಗೆ ಒಂದು ಸೇಬು, ಮೋಸಂಬಿ ₹50ಕ್ಕೆ 3, ₹50ಕ್ಕೆ 3 ದಾಳಿಂಬೆ, ದ್ರಾಕ್ಷಿ ₹80 ಕೇಜಿ, ಬಾಳೆಹಣ್ಣು ₹40 ಡಜನ್ ಇದೆ.

ಬದನೆಕಾಯಿ ಒಂದು ಕ್ಯಾನ್‌ಗೆ ₹800ರಿಂದ ₹1100 ಇದೆ. ಹೆಚ್ಚಿನ ಮಳೆಯಿಂದ ಬದನೆಕಾಯಿಗೆಹುಳುಬಿದ್ದಿದೆ. ಇದರಿಂದ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದೆ.
-ರಾಜು ಯಮನಪ್ಪ, ತರಕಾರಿ ವ್ಯಾಪಾರಿ

ತರಕಾರಿ ಬೆಲೆಯಲ್ಲಿ ದರ ಹೆಚ್ಚಳವಾಗುತ್ತಿದೆ. ಕಳೆದ ವಾರದಲ್ಲಿ ಇದ್ದಂತ ಬೆಲೆ ಈಗಿಲ್ಲ. ಮಳೆಯಿಂದ ಆನಾಹುತವಾಗಿರುವುದು ಬೆಳೆಗಾರರಿಗೆ ನಷ್ಟವಾಗಿದೆ. ಜೊತೆಗೆ ಗ್ರಾಹಕರಿಗೆ ಹೊರೆಯಾಗಿದೆ.
-ಹನುಮಯ್ಯ ಕಲಾಲ್, ಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.