ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗತ್ತಿನೆಲ್ಲೆಡೆ ಬಸವ ತತ್ವ ಪಸರಿಸುತ್ತಿದೆ: ಮುರುಘರಾಜೇಂದ್ರ ಶ್ರೀ

ದುಬೈ ತೆರಳಲಿರುವ ಶ್ರೀಗಳಿಗೆ ಭಕ್ತರ ಸನ್ಮಾನ ಕಾರ್ಯಕ್ರಮ
Published 16 ಮೇ 2024, 14:24 IST
Last Updated 16 ಮೇ 2024, 14:24 IST
ಅಕ್ಷರ ಗಾತ್ರ

ಗುರುಮಠಕಲ್: ಜಗತ್ತಿನ 100ಕ್ಕೂ ಅಧಿಕ ದೇಶಗಳಲ್ಲಿ ಈಗ ಬಸವಣ್ಣನವರ ಆದರ್ಶ, ತತ್ವ-ಸಿದ್ಧಾಂತಗಳಿಗೆ ಮನ್ನಣೆ ಸಿಗುತ್ತಿದೆ. ಜತೆಗೆ ಬಸವ ಜಯಂತಿಯ ಆಚರಣೆ ಕೂಡ ಮಾಡುತ್ತಿದ್ದು, ಬಸವ ಭಕ್ತರಿಗಿದು ಸಂತಸದ ವಿಷಯ’ ಎಂದು ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಶ್ರೀಗಳು ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಖಾಸಾಮಠದಲ್ಲಿ ಗುರುವಾರ ಆಯೋಜಿಸಿದ್ದ ‘ಯುಎಇ (ದುಬೈ)ನಲ್ಲಿ ಭಾನುವಾರ (ಮೇ 19)ರಂದು ಜರುಗಲಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿರುವ ಖಾಸಾಮಠದ ಶ್ರೀಗಳಿಗೆ ಸನ್ಮಾನ ಮತ್ತು ವಿದೇಶ ಪ್ರವಾಸಕ್ಕೆ ಶುಭ ಹಾರೈಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುಎಇ ಬಸವ ಸಮಿತಿ ವತಿಯಿಂದ ಮೇ 19ರಂದು ಜೆಎಸ್ಎಸ್ ಪ್ರೈವೇಟ್ ಸ್ಕೂಲ್ ಆಫ್ ದುಬೈನಲ್ಲಿ ಆಯೋಜಿಸಿರುವ 17ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಅತಿಥಿಯಾಗಿ ಭಾಗವಹಿಸುವಂತೆ ಕಳೆದ ನಾಲ್ಕೈದು ವರ್ಷಗಳಿಂದ ಆಹ್ವಾನವಿತ್ತು. ಈ ವರ್ಷ ಅಲ್ಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.

‘ಸುತ್ತೂರು ಮಠದ ಶಿವರಾತ್ರೀಶ್ವರ ದೇಶೀಕೇಂದ್ರ ಶ್ರೀಗಳು ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾರೆ. ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಬಸವ ಭೂಷಣ ಪ್ರಶಸ್ತಿ ಪ್ರದಾನ ನಡೆಯಲಿದೆ’ ಎಂದು ತಿಳಿಸಿದರು.

‘ಬಸವಾದಿ ಶರಣರ ಸರ್ವಕಾಲಿಕ ಚಿಂತನೆಗಳು ಜನ ಜೀವನದಲ್ಲಿ ಪ್ರಭಾವ ಬೀರುತ್ತಿದ್ದು, 100ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಬಸವಾದಿ ಪ್ರಮಥರ ಸಿದ್ಧಾಂತಗಳು ಪಸರಿಸಿವೆ. ಜತೆಗೆ ಭಾರತದ 42 ಭಾಷೆಗಳಲ್ಲಿ ವಚನ ಸಾಹಿತ್ಯ ಅನುವಾದದ ಮೂಲಕ ಜನರ ಕೈಗೆಟಕುತ್ತಿರುವುದು ಸಂತಸದ ವಿಷಯ’ ಎಂದರು.

ಯಾನಾಗುಂದಿ ಮುರುಗಯ್ಯಸ್ವಾಮಿ ವಸ್ತ್ರ ಮತ್ತು ನಾಗಮ್ಮ ಮುರುಗಯ್ಯ ವಸ್ತ್ರದ ಅವರು ಶ್ರೀಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ದಂಪತಿಯನ್ನು ಸನ್ಮಾನಿಸಲಾಯಿತು. ಮುಖಂಡ ಸಂಜೀವಕುಮಾರ ಚಂದಾಪುರ ಮಾತನಾಡಿದರು.

ಬಿ.ಬಿ. ಸ್ವಾಮಿ, ನರಸರೆಡ್ಡಿ ಪಾಟೀಲ ಗಡ್ಡೆಸೂಗೂರ, ನಾಗಭೂಷಣ ಅವಂಟಿ, ವೀರಣ್ಣ ಬೇಲಿ, ರವೀಂದ್ರರೆಡ್ಡಿ ಮಾಲಿ ಪಾಟೀಲ, ಚಂದುಲಾಲ ಚೌಧರಿ, ಆನಂದ ಯದ್ಲಾಪುರ, ರಘುನಾಥರೆಡ್ಡಿ ನಜರಾಪುರ, ಮಲ್ಲೇಶಯ್ಯ ಸ್ವಾಮಿ, ಸುದರ್ಶನ ಗೌಡ, ಸುಧೀರ ಘಾಟೆ, ನಾಗರಾಜ ಕಲಾಲ, ಬಸವರಾಜ ಪಸಾರ, ನರಸರೆಡ್ಡಿ ಇಟಕಲ, ಜಿ.ತಮ್ಮಣ್ಣ, ಶಿವಕುಮಾರ ಜಾಡರ, ಅನಂತಪ್ಪ ಬೋಯಿನ್, ಗಿರಿಧರರೆಡ್ಡಿ, ಸತೀಶ ತಿವಾರಿ, ಲಾಲಪ್ಪ ತಲಾರಿ, ವೆಂಕಟಪ್ಪ ಅವಂಗಾಪುರ, ಮಲ್ಲಿಕಾರ್ಜುನ ಪೂಜಾರಿ, ನರಸೀಮುಲು, ವೀರೇಶ ನರ್ವ, ಭೀಮು ತಲಾರಿ ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT