ಬುಧವಾರ, ನವೆಂಬರ್ 25, 2020
25 °C

ಮಾಜಿ ಸೈನಿಕ ಕ್ಯಾಪ್ಟನ್ ಟಿ.ಆನಂದಪ್ಪ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯರಗೋಳ: ಇಲ್ಲಿಗೆ ಸಮೀಪದ ಯಡ್ಡಳ್ಳಿ ಗ್ರಾಮದಲ್ಲಿ ಮಾಜಿ ಸೈನಿಕ ಕ್ಯಾಪ್ಟನ್ ಟಿ.ಆನಂದಪ್ಪ ಶನಿವಾರ  ನಿಧನರಾಗಿದ್ದಾರೆ.

1941 ಮಾರ್ಚ್ 16 ರಂದು ಜನಿಸಿದ ಆನಂದಪ್ಪ 1963ರಲ್ಲಿ ಹವಾಲ್ದಾರ್ ಆಗಿ ಭಾರತೀಯ ಸೇವೆಗೆ ಸೇರಿದ್ದರು. ಸುದೀರ್ಘ 28 ವರ್ಷ ಪಂಜಾಬ್, ಪಠಾಣ ಕೋಟ, ಮುಂತಾದ ಕಡೆ ಸೇವೆ ಸಲ್ಲಿಸಿದ್ದಾರೆ.

1971ರಲ್ಲಿ ನಡೆದ ಚೀನಾ ವಿರುದ್ಧದ ಯುದ್ಧದಲ್ಲಿ ಭಾಗವಹಿಸಿ ವೀರತ್ವ ಮೆರೆದಿದ್ದಾರೆ. 15ನೇ ಅಗಸ್ಟ್ 1988ರಲ್ಲಿ ಅಂದಿನ ರಾಷ್ಟ್ರಪತಿ ಆರ್.ವೆಂಕಟರಮನ್ ಅವರಿಂದ ಕ್ಯಾಪ್ಟನ್‌ ಪದವಿ ಪ್ರಶಸ್ತಿ ಪಡೆದು ನಿವೃತ್ತಿ ಹೊಂದಿದ್ದರು.

ಇವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಇದ್ದಾರೆ.

ಅಂತ್ಯಕ್ರಿಯೆ ಭಾನುವಾರ(ನ.15) ಸ್ವಗ್ರಾಮ ಯಡ್ಡಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು