ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಬೆಳ್ಳುಳ್ಳಿ ದರ ಇಳಿಕೆ, ನುಗ್ಗೆಕಾಯಿ –ನಿಂಬೆಹಣ್ಣಿಗೆ ಡಿಮ್ಯಾಂಡ್‌

Published 28 ಫೆಬ್ರುವರಿ 2024, 6:08 IST
Last Updated 28 ಫೆಬ್ರುವರಿ 2024, 6:08 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ಎರಡು ದಿನಗಳಿಂದ ಏರಿಕೆಯಾಗಿದ್ದ ಟೊಮೆಟೊ ದರ ಈಗ ಇಳಿಕೆಯಾಗಿದ್ದು, ಉಳಿದ ತರಕಾರಿ ದರವೂ ಏರಿಳಿಕೆಯಾಗಿದೆ.

ಹಲವು ದಿನಗಳಿಂದ ಏರಿಕೆಯಾಗಿದ್ದ ಬೆಳ್ಳುಳ್ಳಿ ದರ ₹100ರಷ್ಟು ಇಳಿಕೆಯಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಆವಕ ಬರುತ್ತಿರುವ ಕಾರಣ ಬೆಲೆಯೂ ಕಡಿಮೆಯಾಗಿದೆ. ಅದರಂತೆ ಹಸಿ ಶುಂಠಿ ದರವೂ ಇಳಿಕೆಯಾಗಿದೆ.

ಹಸಿ ಶುಂಠಿ ಕೆಜಿಗೆ ₹140ರಿಂದ ₹150, ಬೆಳ್ಳುಳ್ಳಿ ₹300 ರಿಂದ 320, ನುಗ್ಗೆಕಾಯಿ ₹100ರಿಂದ110 ದರವಿದೆ. ಉಳಿದ ತರಕಾರಿ ಬೆಲೆ ₹70ರಿಂದ 80 ರೊಳಗೆ ಬೆಲೆ ಇದೆ.

ಕಳೆದ ವಾರಕ್ಕಿಂತ ಈ ವಾರ ನುಗ್ಗೆಕಾಯಿ ದರ ₹10 ಏರಿಕೆಯಾಗಿದೆ. ಟೊಮೆಟೊ, ಆಲೂಗಡ್ಡೆ, ಈರುಳ್ಳಿ ಕೆಜೆಗೆ ₹20–25 ದರವಿದೆ.

ಬೀನ್ಸ್, ಹಸಿ ಮೆಣಸಿನಕಾಯಿ, ಬದನೆಕಾಯಿ, ಬೆಂಡೆಕಾಯಿ, ದೊಣ್ಣೆಮೆಣಸಿನಕಾಯಿ, ಎಲೆಕೋಸು, ಹೂಕೋಸು, ಚವಳೆಕಾಯಿ, ಗಜ್ಜರಿ, ಸೌತೆಕಾಯಿ, ಮೂಲಂಗಿ, ಸೋರೆಕಾಯಿ, ಬಿಟ್‌ರೂಟ್, ಹೀರೆಕಾಯಿ, ಹಾಗಲಕಾಯಿ, ಅವರೆಕಾಯಿ, ತೊಂಡೆಕಾಯಿ ₹70ರಿಂದ 80 ದರವಿದೆ. ಕರಿಬೇವು, ಈರುಳ್ಳಿ ಸೊಪ್ಪು ಕೆಜಿ ₹60 ಮಾರಾಟ ಮಾಡಲಾಗುತ್ತಿದೆ.

ಸೊಪ್ಪುಗಳ ದರ: ತರಕಾರಿ ದರದಲ್ಲಿ ಏರಿಳಿಕೆಯಾಗಿದ್ದರೆ, ಸೊಪ್ಪುಗಳ ದರದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಕಳೆದ ವಾರದಂತೆ ಈ ವಾರವೂ ಮೆಂತ್ಯೆ, ಸಬ್ಬಸಗಿ ಸೊಪ್ಪು ದೊಡ್ಡ ಕಟ್ಟು ₹10ಗೆ ಒಂದು ₹20 ಗೆ ಮೂರು ಕಟ್ಟು, ಪಾಲಕ್‌, ಪುಂಡಿಪಲ್ಯೆ, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು, ಪುದಿನಾ, ಕೊತ್ತಂಬರಿ ₹20ಗೆ ಒಂದು ಕಟ್ಟು ಮಾರಾಟ ಮಾಡಲಾಗುತ್ತಿದೆ.

ನಿಂಬೆಹಣ್ಣಿಗೆ ಡಿಮ್ಯಾಂಡ್‌

ಬೇಸಿಗೆ ಶುರುವಾಗಿದ್ದು ನಿಂಬೆಹಣ್ಣು ದರವೂ ಏರಿಕೆಯಾಗಿದೆ. ಸದ್ಯ ನಿಂಬೆಹಣ್ಣು ಒಂದಕ್ಕೆ ₹8ರಿಂದ ₹10 ಬೆಲೆ ಇದೆ. ಒಂದು ಚೀಲದಲ್ಲಿ 1000 ನಿಂಬೆಹಣ್ಣು ಇದ್ದು ₹5500 ₹6000 ದರವಿದೆ. ಇದರಿಂದ ಬೆಲೆ ಏರಿಕೆ ಬಿಸಿ ತಟ್ಟುತ್ತಿದೆ.

ಹಲವು ದಿನಗಳಿಂದ ಏರಿಕೆಯಾಗಿದ್ದ ಶುಂಠಿ ಬೆಳ್ಳುಳ್ಳಿ ದರ ಏರಿಕೆಯಾಗಿರುವುದ ಖರೀದಿಗೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇತ್ತು. ಈಗ ದರ ಇಳಿಕೆಯಾಗಿದ್ದು ಸ್ವಲ್ಪ‍ಮಟ್ಟಿಗೆ ಅನುಕೂಲವಾಗಿದೆ
- ಸರಮಸ್, ಮುದ್ನಾಳ ಗ್ರಾಹಕ
ತರಕಾರಿ ದರದಲ್ಲಿ ಈ ಬಾರಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆದರೆ ಬೆಳ್ಳುಳ್ಳಿ ಆವಕ ಹೆಚ್ಚು ಬಂದಿದ್ದರಿಂದ ದರವೂ ಇಳಿಕೆಯಾಗಿದೆ
-ಮಹಾದೇವಪ್ಪ, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT