ಯಾದಗಿರಿ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಶೇಂಗಾ ಬೆಳೆಗೆ ಈ ಬಾರಿ ಉತ್ತಮ ಧಾರಣೆ ಬಂದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಿಂಗಳ ಹಿಂದೆ (ಡಿಸೆಂಬರ್ 23) ಒಂದು ಕ್ವಿಂಟಲ್ಗೆ ಮಾದರಿ ದರ ₹ 7,611 ಇದಿತ್ತು. ಈಗ, ಅದು (ಜನವರಿ 22) ₹ 8,965ಕ್ಕೆ ಏರಿಕೆಯಾಗಿದ್ದು, ಪ್ರತಿ ಕ್ವಿಂಟಲ್ ಮೇಲೆ ₹ 1,354 ಹೆಚ್ಚಳವಾಗಿದೆ. ಡಿ.23ರ ವಹಿವಾಟಿನಲ್ಲಿ ಕ್ವಿಂಟಲ್ಗೆ ₹ 7,611ಗೆ ಮಾರಾಟವಾಗಿ, 40 ಕ್ವಿಂಟಲ್ನಷ್ಟು ಶೇಂಗಾ ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಬಂದಿತ್ತು.

ಗುರುವಾರದ ವಹಿನಾಟಿನಲ್ಲಿ ಕ್ವಿಂಟಲ್ಗೆ ಕನಿಷ್ಠ ಧಾರಣೆ ₹ 7,789 ಹಾಗೂ ಗರಿಷ್ಠ ದರ ₹ 9,370ರವರೆಗೆ ಸಿಗುತ್ತಿದೆ. ಒಂದೇ ದಿನ 2,362 ಕ್ವಿಂಟಲ್ ಶೇಂಗಾ ಮೂಟೆಗಳು ಯಾದಗಿರಿ ಎಪಿಎಂಸಿಗೆ ಆವಕವಾಗಿವೆ.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾಕ್ಕೆ (ಸಿಪ್ಪೆ ಸಹಿತ) ಪ್ರತಿ ಕ್ವಿಂಟಲ್ಗೆ ₹7,263 ನಿಗದಿ ಮಾಡಲಾಗಿದೆ. ಬೆಂಬಲ ಬೆಲೆಗಿಂತಲೂ ಹೆಚ್ಚಿನ ಧಾರಣೆ ಸಿಗುತ್ತಿದೆ. ಯಾದಗಿರಿ ತಾಲ್ಲೂಕಿನ ಅಬೆ ತುಮಕೂರು, ಯರಗೋಳ, ಮುದ್ನಾಳ, ಹಳಿಗೇರಾ, ಹತ್ತಿಕುಣಿ, ಹೊನಗೇರಾ, ಮೈಲಾಪುರ, ರಾಮಸಮುದ್ರ ಸೇರಿ ಇತರೆ ಗ್ರಾಮಗಳು ಹಾಗೂ ಗುರುಮಠಕಲ್ನ ಕೆಲ ಗ್ರಾಮಗಳಲ್ಲಿನ ನೀರಾವರಿ ಆಶ್ರಿತ ಪ್ರದೇಶದಲ್ಲಿ ಹೆಚ್ಚಾಗಿ ಶೇಂಗಾ ಬೆಳೆಯಲಾಗುತ್ತಿದೆ. ಉತ್ತಮ ಬೇಡಿಕೆಯೂ ಇದೆ.

ನೆರೆ ಹಾಗೂ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡಿದ್ದ ರೈತರು ಕೊರಗುತ್ತಿದ್ದರು. ಶೇಂಗಾ ಬಿತ್ತನೆ ಮಾಡಿದವರು ಉತ್ತಮ ದರದಿಂದ ಸಂತಸಗೊಂಡಿದ್ದಾರೆ. ನಿತ್ಯ ಸಾವಿರಾರು ಕ್ವಿಂಟಲ್ ಶೇಂಗಾ ಮೂಟೆಗಳು ಎಪಿಎಂಸಿಗೆ ಬರುತ್ತಿವೆ.

ಮುಂಗಾರು ಹಂಗಾಮಿನಲ್ಲಿ ರೈತರು ಮನೆ ಬಳಕೆ, ಹಿಂಗಾರಿನಲ್ಲಿ ಬಿತ್ತನೆ ಬೀಜದಂತಹ ಉದ್ದೇಶಕ್ಕಾಗಿ ಸುಮಾರು 450 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಿದ್ದರು. ಅದೇ ಹಿಂಗಾರು ಹಂಗಾಮಿನಲ್ಲಿ ಸುಮಾರು 35,000 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ಕೃಷಿ ಇಲಾಖೆಯು ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ ನೀಡಿತ್ತು.

‘ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮ ಗುಣಮಟ್ಟದ ಶೇಂಗಾ ಮಾರುಕಟ್ಟೆಗೆ ಬಂದಿದೆ. ಪ್ರಮಾಣವೂ ಕಡಿಮೆಯಾಗಿದ್ದು ರೈತರಿಂದ ಖರೀದಿ ಮಾಡಿದ ತಕ್ಷಣವೇ ಮಧ್ಯವರ್ತಿಗಳಿಂದಲೂ ಮಾರಾಟವಾಗಿ ಹೊರ ಜಿಲ್ಲೆಗಳು, ನೆರೆಯ ರಾಜ್ಯಗಳಿಗೂ ಸಾಗಣೆಯಾಗಿತ್ತಿದೆ’ ಎನ್ನುತ್ತಾರೆ ಎಪಿಎಂಸಿ ವರ್ತಕ ನಾಗಪ್ಪ ಸುಗ್ಗಾ.

‘ಕಳೆದ ವರ್ಷದ ಕ್ವಿಂಟಲ್ ಶೇಂಗಾ ಗರಿಷ್ಠ ₹ 8,500 ಆಸುಪಾಸಿನಲ್ಲಿ ಮಾರಾಟ ಆಗಿತ್ತು. ಈ ಬಾರಿ ರಾಶಿಯಾದ ಒಂದು ತಿಂಗಳಲ್ಲಿಯೇ ಗರಿಷ್ಠ 9,300ಕ್ಕೂ ಅಧಿಕ ದರದಲ್ಲಿ ಖರೀದಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ₹ 10 ಸಾವಿರ ಗಡಿಯೂ ದಾಟಬಹುದು’ ಎಂದರು.

‘ಎಣ್ಣೆಕಾಳುಗಳಿಗೆ ಹೆಚ್ಚಿದ ಬೇಡಿಕೆ’

‘ಮಾರುಕಟ್ಟೆಯಲ್ಲಿ ಶೇಂಗಾಕ್ಕೆ ಉತ್ತಮ ದರ ಸಿಗುತ್ತಿದೆ. ಬೆಲೆ ಏರಿಕೆಗೆ ನಿರ್ದಷ್ಟವಾಗಿ ಇದೇ ಕಾರಣ ಎನ್ನಲು ಆಗುವುದಿಲ್ಲ. ಅಡುಗೆ ಎಣ್ಣೆಯ ದರ ಹೆಚ್ಚಳವಾಗಿರುವುದು ಎಣ್ಣೆಕಾಳು ಬೆಲೆ ಹೆಚ್ಚಳವಾಗಿರಬಹುದು’ ಎಂದು ಯಾದಗಿರಿ ಎಪಿಎಂಸಿ ಕಾರ್ಯದರ್ಶಿ ಶಿವುಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು. ಗಾಣದ ಎಣ್ಣೆಯ ಪ್ರಚಾರ ಬಂದಿದೆ. ಕಳೆದ ವರ್ಷ ಒಂದು ಲೀಟರ್ ಕುಸುಬಿ ಎಣ್ಣೆ ಲೀಟರ್ಗೆ ₹180ರಿಂದ ₹ 200 ನಡುವೆ ಮಾರಾಟ ಆಗಿತ್ತು. ಈ ವರ್ಷ ಅದು ಲೀಟರ್ಗೆ ₹ 400ರಿಂದ ₹450ಯಂತೆ ಮಾರಾಟ ಆಗುತ್ತಿದೆ. ಸಹಜವಾಗಿ ಶೇಂಗಾಕ್ಕೂ ಬೇಡಿಕೆ ಬಂದಿದೆ. ಯಾದಗಿರಿಯಲ್ಲಿ ಬೆಳೆದ ಶೇಂಗಾ ದಕ್ಷಿಣ ಭಾರತದ ರಾಜ್ಯಗಳಿಗೆ ಹೋಗುತ್ತದೆ’ ಎಂದರು.