ಬುಧವಾರ, ಆಗಸ್ಟ್ 4, 2021
22 °C

ಯಾದಗಿರಿ: ಗುರುಮಠಕಲ್ ಪೊಲೀಸ್ ಠಾಣೆ ಸೀಲ್ ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುರುಮಠಕಲ್: ಇಲ್ಲಿನ ಪೊಲೀಸ್ ಠಾಣೆಯನ್ನು ಸೋಮವಾರ ಬೆಳಿಗ್ಗೆ ಸೀಲ್ ಡೌನ್ ಮಾಡಲಾಗಿದ್ದು, ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ.

ಜುಲೈ 4ರಂದು ಇಲ್ಲಿನ ಪೊಲೀಸ್ ಠಾಣೆಯ 40 ಜನರ ಗಂಟಲ ದ್ರವ ಮಾದರಿಯನ್ನು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಭಾನುವಾರ ಬಂದ ವರದಿಯಲ್ಲಿ ಪಿಎಸ್‌ಐ, ಇಬ್ಬರು ಎಎಸ್‌ಐ ಸೇರಿದಂತೆ ಒಟ್ಟು 16 ಜನ ಪೊಲೀಸರಿಗೆ ಸೋಂಕು ದೃಢಪಟ್ಟಿದೆ.

ಹೀಗಾಗಿ ಪೊಲೀಸ್‌ ಠಾಣೆ, ಪಿಎಸ್‌ಐ ಹಾಗೂ ಹೈವೇ ಪೆಟ್ರೋಲಿಂಗ್ ವಾಹನಗಳನ್ನು ಸೋಮವಾರ ಬೆಳಿಗ್ಗೆ ಸ್ಯಾನಿಟೈಸ್ ಮಾಡಲಾಯಿತು. ಸೋಂಕು ದೃಢಪಟ್ಟ ಸಿಬ್ಬಂದಿಯಿಂದ ಸೋಮವಾರ ಮತ್ತೆ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ.

ಗುರುಮಠಕಲ್ ಠಾಣೆಯ 16 ಜನ ಸಿಬ್ಬಂದಿಯನ್ನು ಶಹಾಪುರ ತಾಲ್ಲೂಕಿನ ಭೀಮರಾಯನಗುಡಿಯಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು