ಯಾದಗಿರಿ: ನಗರದ ಚಂದ್ರಶೇಖರ ವಿದ್ಯಾಸಂಸ್ಥೆಯ ನ್ಯೂ ಕನ್ನಡ ಪ್ರೌಢಶಾಲೆಯ 1991-92 ನೇ ಬ್ಯಾಚ್ನ ವಿದ್ಯಾರ್ಥಿಗಳಿಂದ ಈಚೆಗೆ ಗುರುವಂದನಾ ಕಾರ್ಯಕ್ರಮ ನಗರ ಹೊರವಲಯದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮಪ್ಪ ಪಾಟೀಲ ಚೇಗುಂಟಾ ಮಾತನಾಡಿ, ಸಂಸ್ಥೆಗೆ ಕೀರ್ತಿ ತಂಡ ಶಿಷ್ಯವೃಂದಕ್ಕೆ ಶ್ಲಾಘಿಸಿ, ಇಂತಹ ಕಾರ್ಯಕ್ರಮಗಳು ಅವಿಸ್ಮರಣೀಯ ಎಂದರು.

ನಿವೃತ್ತ ಶಿಕ್ಷಕರಾದ ಎಚ್. ಎಸ್. ಬಿರಾದರ್ ಮಾತನಾಡಿ, ಮೂರು ದಶಕಗಳ ಹಿಂದಿನ ಘಟನೆಗಳ ಮೆಲುಕು ಹಾಕಿದರು.

ಬರೋಬ್ಬರಿ ಮೂರು ದಶಕಗಳ ಹಿಂದೆ, ಪ್ರೌಢಶಾಲೆಯಲ್ಲಿ ಅಕ್ಷರ ಕಲಿಸಿದ ಗುರುಗಳು ಹಾಗೂ ಕಲಿತ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸಮ್ಮಿಲನ ಸಂಭ್ರಮಕ್ಕೆ, ಹಳೆಯ ನೆನಪುಗಳ ಮರುಕಳಿಸುವಿಕೆಗೆ ಕಾರಣವಾಗಿತ್ತು. ಅಂದಿನ ಶಿಕ್ಷಕರ ವೃಂದದ ಬಹುತೇಕ ಗುರುಗಳು ಹಾಗೂ ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ರಾಜ್ಯ ಹಾಗೂ ದೇಶದ ವಿವಿಧೆಡೆ ವಾಸಿಸುತ್ತಿರುವ ಹಳೆಯ ವಿದ್ಯಾರ್ಥಿಗಳು ಅಲ್ಲಿ ಸೇರಿದ್ದರು.

ನಿವೃತ್ತ ಶಿಕ್ಷಕರಾದ ಚಂದ್ರಕಾಂತ ಲೇವಡಿ, ಮಹಾದೇವಪ್ಪ ಮುನಗಲ್, ನಾಗನಗೌಡ ಪಾಟೀಲ, ಸುರೇಂದ್ರನಾಥ್ ಕಡೇಚೂರು, ಶಿವಶಂಕರ ಪಾಟೀಲ, ಸದಾನಂದ ಪಾಟೀಲ, ವಿಜಯರಾವ್ ಕುಲಕರ್ಣಿ, ಮಲ್ಲಪ್ಪ ಮುಂಡ್ರಿಕೇರಿ, ಪರಿಮಳಾ ಜೋಶಿ, ಶೋಭಾ ಟಪಾಲ, ಅಕ್ಕನಾಗಮ್ಮ, ಜುಬೇದಾ ಬೇಗಂ, ರೋಹಿತ್ ಮಾತನಾಡಿದರು. ಕಾರ್ಯದರ್ಶಿ ಸೇರಿದಂತೆ ಅಂದಿನ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ಮಹಾದೇವ ಅವರನ್ನು ಸನ್ಮಾನಿಸಲಾಯಿತು.

ನರಸಿಂಗರಾವ್ ಕುಲಕರ್ಣಿ ಹಾಗೂ ಪರಿಮಳಾ ನಿರೂಪಿಸಿದರು. ಶಿವಶರಣಪ್ಪ ಬಿ. ನಾಯಕ ಸ್ವಾಗತಿಸಿ, ಮಲ್ಲಪ್ಪ ಮ್ಯಾಗೇರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.