ಶನಿವಾರ, ಆಗಸ್ಟ್ 13, 2022
26 °C

ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಸಮಿತಿ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ಕಿಟ್‌ ಅನ್ನು ವಿತರಿಸಲಾಯಿತು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷೆ ಕಾಮ್ರೇಡ್ ಡಿ.ಉಮಾದೇವಿ ಅವರು ಜಿಲ್ಲೆಯಾದ್ಯಂತ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಕೋವಿಡ್ ನಿರ್ಮೂಲನೆ ಮುಂಚೂಣಿ ಕಾರ್ಯಕರ್ತರಾಗಿ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿರುವ ಕಾರ್ಯಕರ್ತೆಯರಿಗೆ ಅವರ ಆರೋಗ್ಯ ಸುಕ್ಷತೆಯನ್ನು ಖಾತ್ರಿಪಡಿಸಲು ಸರ್ಕಾರವು ಅಗತ್ಯ ಮಾಸ್ಕ್, ಸ್ಯನಿಟೈಜರ್, ಗ್ಲೌಸ್ ಹಾಗೂ ಫೇಸ್ ಶೀಲ್ಡ್ ಸೇರಿದಂತೆ ಅಗತ್ಯ ಆರೋಗ್ಯ ಪರಿಕರಗಳನ್ನು ಸಮರ್ಪಕವಾಗಿ ವಿತರಿಸದೆ, ಯುದ್ಧ ಸಾಮಾಗ್ರಿಗಳನ್ನು ನೀಡದೆ ಯುದ್ಧಕ್ಕೆ ಇಳಿಸಿದಂತೆ ಆಗಿದೆ’ ಎಂದು ಆರೋಪಿಸಿದರು.

ಆಶಾ ಕಾರ್ಯಕರ್ತೆಯರಿಗೆ ಎನ್ 95 ಮಾಸ್ಕ್, ಸ್ಯಾನಿಟೈಜರ್, ಹ್ಯಾಂಡ್ ಗ್ಲೌಜ್, ಫೇಸ್ ಶೀಲ್ಡ್‌ಗಳನ್ನು ಒಳಗೊಂಡ ಸುರಕ್ಷಿತ ಆರೋಗ್ಯ ಪರಿಕರ (ಸೇಫ್ಟಿ ಕಿಟ್) ಗಳನ್ನು ವಿತರಿಸಲಾಯಿತು ಎಂದರು.

ಈ ವೇಳೆ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಸರಸ್ವತಿ, ಶ್ರೀದೇವಿ, ಸುನೀತಾ, ಶಬನಾಬೇಗಂ, ಕವಿತಾ, ಅನುರಾಧ, ಗುರುಲಿಂಗಮ್ಮ, ಕಲ್ಲುಬಾಯಿ, ಸುಶೀಲಾ, ಇಂದ್ರಮ್ಮ, ಶಾರದಾದೇವಿ, ಸಾವಿತ್ರಿ, ರೇಣುಕಾ, ಗಂಗಮ್ಮ, ಸಂಪತ್ ಕುಮಾರಿ, ರುಕ್ಷನಾ ಬೇಗಂ, ಫಾತಿಮಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು