ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ: ದಲಿತ ಸಂಘಟನೆಯಿಂದ ಅಮರಣಾಂತ ಉಪವಾಸ

Published 27 ಆಗಸ್ಟ್ 2024, 15:25 IST
Last Updated 27 ಆಗಸ್ಟ್ 2024, 15:25 IST
ಅಕ್ಷರ ಗಾತ್ರ

ಸುರಪುರ: ಜಮೀನು ಖರೀದಿದಾರರಿಗೆ ರಕ್ಷಣೆ ಕೊಡುವಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್ ಆನಂದ ವಾಗ್ಮೋಡೆ ವಿಫಲರಾಗಿದ್ದು ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಕ್ರಾಂತಿಕಾರಿ ಬಣ) ಮುಖಂಡರು ನಗರದ ಪೊಲೀಸ್ ಠಾಣೆ ಎದುರು ಮಂಗಳವಾರ ಅಮರಣಾಂತ ಉಪವಾಸ ಆರಂಭಿಸಿದರು.

ರಾಜ್ಯ ಸಮಿತಿಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ತಾಲ್ಲೂಕಿನ ಬೊಮ್ಮನಳ್ಳಿ ಕೆ. ಗ್ರಾಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ 2003 ಮತ್ತು 2004 ರಲ್ಲಿ ಜಮೀನು ಖರೀದಿ ಮಾಡಿದ್ದಾರೆ. ಕೆಲ ಪ್ರಭಾವಿಗಳ ಮಾತು ಕೇಳಿಕೊಂಡು ಖರೀದಿದಾರ ಮತ್ತು ಸಾಗುವಳಿದಾರನಿಗೆ ಇನ್‍ಸ್ಪೆಕ್ಟರ್ ಕಿರುಕುಳ ಕೊಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಈ ಕುರಿತು ಡಿವೈಎಸ್‍ಪಿ ಅವರ ಗಮನಕ್ಕೆ ತರಲಾಗಿದೆ. ಅವರು ಖರೀದಿದಾರರ ಮತ್ತು ಸಾಗುವಳಿದಾರನಿಗೆ ರಕ್ಷಣೆ ಕೊಡುವಂತೆ ಇನ್‍ಸ್ಪೆಕ್ಟರ್ ಅವರಿಗೆ ಮೌಖಿಕವಾಗಿ ಆದೇಶಿಸಿದ್ದಾರೆ. ಆದರೂ ಅವರು ಕ್ರಮ ಜರುಗಿಸುತ್ತಿಲ್ಲ’ ಎಂದು ತಿಳಿಸಿದರು.

‘ಖರೀದಿದಾರರ ಮತ್ತು ಸಾಗುವಳಿದಾರನಿಗೆ ಸೂಕ್ತ ರಕ್ಷಣೆ ಕೊಟ್ಟು ಸಾಗುವಳಿಗೆ ಅನುಕೂಲ ಮಾಡಿಕೊಡಬೇಕು. ಅನಗತ್ಯವಾಗಿ ಕಿರುಕುಳ ಕೊಡುತ್ತಿರುವ ಪಿಐ ಆನಂದ ವಾಗ್ಮೋಡೆಯವರನ್ನು ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದರು.

ಡಿವೈಎಸ್‍ಪಿ ಜಾವೇದ್ ಇನಾಮದಾರ ಪ್ರತಿಭಟನಕಾರರೊಂದಿಗೆ ಮಾತುಕತೆ ನಡೆಸಿದರು. ನ್ಯಾಯ ಸಿಗುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ತಾಲ್ಲೂಕು ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ, ಪ್ರಮುಖರಾದ ಅಜೀಜಸಾಬ ಐಕೂರ, ಬುದ್ದಿವಂತ ನಾಗರಾಳ, ಮೂರ್ತಿ ಬೊಮ್ಮನಳ್ಳಿ, ಮಹಾದೇವಪ್ಪ ಬಿಜಾಸ್ಪೂರ, ಮಲ್ಲಿಕಾರ್ಜುನ ಕುರುಕುಂದಿ, ಮಲ್ಲಿಕಾರ್ಜುನ ತಳಳ್ಳಿ, ಜಟ್ಟೆಪ್ಪ ನಾಗರಾಳ, ಮಲ್ಲಿಕಾರ್ಜುನ ಲಕ್ಷ್ಮೀಪುರ, ಮರೆಪ್ಪ ಕಾಂಗ್ರೆಸ್, ಮಲ್ಲಿಕಾರ್ಜುನ ಬಡಿಗೇರ, ಹಣಮಂತ ಕುಂಬಾರಪೇಟ, ಹಣಮಂತ ದೊರೆ, ಭೀಮಣ್ಣ ಮಾಲಗತ್ತಿ, ನಿಂಗಪ್ಪ ಹಂಪಿನ್, ಭೀಮಣ್ಣ ಖ್ಯಾತನಾಳ, ಮಲ್ಲಿಕಾರ್ಜುನ ಗುಡ್ಡೇರ, ಭೀಮಣ್ಣಗೌಡ ಸೂಗುರು, ರೇವಣಸಿದ್ದಪ್ಪ ಮಾಲಗತ್ತಿ, ಶರಣಪ್ಪ ನಗನೂರ, ಖಾಜಾಹುಸೇನ್ ಗುಡುಗುಂಟಿ, ಮಹೇಶ ಯಾದಗಿರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT