ಹುಣಸಗಿ: ತಾಲ್ಲೂಕಿನ ರೈತರಿಗೆ ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಬಿತ್ತನೆಬೀಜಗಳನ್ನು ವಿತರಿಸಲಾಯಿತು.

ಬಿತ್ತನೆ ಬೀಜ ವಿತರಿಸಿದ ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ಮಾತನಾಡಿ, ತಾಲ್ಲೂಕಿನ ಮಳೆಯಾಶ್ರಿತ ಪ್ರದೇಶ ಕಡಿಮೆ ಇದ್ದರೂ ರೈತರಿಗೆ ಮುಂಗಾರು ಅವಧಿಗೆ ಬಿತ್ತನೆಗಾಗಿ ಬೀಜಗಳ ದಾಸ್ತಾನು ಮಾಡಿಕೊಳ್ಳಲಾಗಿದ್ದು, ರೈತರು ರಿಯಾಯಿತಿ ದರದಲ್ಲಿ ಬೀಜಗಳನ್ನು ಖರೀದಿಸ ಬಹುದಾಗಿದೆ ಎಂದು ಹೇಳಿದರು.

11 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, 7 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, ಹಾಗೂ 650 ಹೆಕ್ಟೇರ್‌ನಲ್ಲಿ ಸಜ್ಜೆ ಹಾಗೂ 1800 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, ಜೋಳ, ಕುಸುಬೆ ಮತ್ತಿತರ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದ್ದು, ಇದಕ್ಕೆ ತಕ್ಕಂತೆ ಬೀಜಗಳ ಕ್ರಿಮಿನಾಶಕ ಮತ್ತು ಸಾವಯವ ಗೊಬ್ಬರದ ದಾಸ್ತಾನು ಮಾಡಲಾಗಿದೆ ಎಂದು ವಿವರಿಸಿದರು.

ಸದ್ಯ ಹುಣಸಗಿ ರೈತ ಸಂಪರ್ಕ ಕೇಂದ್ರದಲ್ಲಿ ತೊಗರಿ (ಟಿಎಸ್–3ಆರ್) 14 ಕ್ವಿಂಟಲ್, ತೊಗರಿ ಜಿಆರ್‌ಜಿ 811) 12 ಕ್ವಿಂಟಲ್, ಹೆಸರು 4.5 ಕ್ವಿಂಟಲ್, ಜಿಂಕ್ ಸಲ್ಫೆಟ್ 14 ಕ್ವಿಂಟಲ್ ಹಾಗೂ ಸಾವಯುವ ಗೊಬ್ಬರ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಹಾಯಕ ಕೃಷಿ ಅಧಿಕಾರಿ ದೀಪಾ ದೊರೆ ಹಾಗೂ ರೈತರಾದ ಮಹೇಶ ಹುಡೇದ, ಸಂಗಣ್ಣ ಕರಡಿ, ಬಸವರಾಜ ಬಿಂಜಲಬಾವಿ, ಮುತ್ತು ಕೂಡಲಗಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.