ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ಸೌಹಾರ್ದಕ್ಕೆ ಸಾಕ್ಷಿಯಾದ ಇಫ್ತಾರ್ ಕೂಟ

Last Updated 1 ಮೇ 2022, 5:20 IST
ಅಕ್ಷರ ಗಾತ್ರ

ಶಹಾಪುರ: ಸಗರನಾಡು ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿದೆ. ಅನ್ಯ ಧರ್ಮದವರ ಜೊತೆ ನಾವೆಲ್ಲರೂ ಕೂಡಿಬಾಳುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಧರ್ಮದ ನಂಜಿನ ಸೊಂಕು ಬರಬಾರದು. ಪವಿತ್ರ ರಂಜಾನ್ ಹಬ್ಬದಲ್ಲಿ ಮುಸ್ಲಿಂ ಸಮುದಾಯದವರು ಹಮ್ಮಿಕೊಳ್ಳುವ ಉಪವಾಸ ವ್ರತ ಕೈಕೊಂಡವರಿಗೆ ಹಣ್ಣು ಹಂಪಲು ಹಾಗೂ ರುಚಿಯಾದ ಊಟವನ್ನು ಉಣಬಡಿಸುವುದು ನೆಮ್ಮದಿಯ ಸಂಕೇತವಾಗಿದೆ ಎಂದು ಉದ್ಯಮಿ ಶಿವಯೋಗಿ ಹಿರೇಮಠ ತಿಳಿಸಿದರು.

ನಗರದ ಶಾದಿಖಾನದಲ್ಲಿ ಶುಕ್ರವಾರ ರಂಜಾನ್ ಹಬ್ಬದಲ್ಲಿ ಉಪವಾಸ ವ್ರತ ಕೈಕೊಂಡ ಮುಸ್ಲಿಂ ಸಮುದಾಯದವರಿಗೆ ಹಿರೇಮಠ ಅಟೊಮೊಬೈಲ್ಸ್‌ನಿಂದ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದಲ್ಲಿ ಅವರು ಮಾತನಾಡಿದರು.

ಉಪವಾಸ ಕೈಗೊಳ್ಳುವುದರಿಂದ ಮತ್ತೊಬ್ಬರ ಹಸಿವಿನ ಅರಿವು ಆಗುತ್ತದೆ. ಮಾನಸಿಕವಾಗಿ ನೆಮ್ಮದಿಯೂ ಮೂಡುತ್ತದೆ. ಇದನ್ನು ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರೂ ಆಚರಿಸಬಹುದು. ನಮ್ಮ ಮನವಿ ಹಾಗೂ ಆಹ್ವಾನಕ್ಕೆ ಆಗಮಿಸಿದ ಮುಸ್ಲಿಂ ಸಮುದಾಯದ ಮುಖಂಡರು ಕೂಟದಲ್ಲಿ ಭಾಗವಹಿಸಿದ್ದು ಸಂತೋಷ ಉಂಟು ಮಾಡಿದೆ ಎಂದರು.

ಮುಖಂಡರಾದ ಚಾಂದ ಪಟೇಲ್, ಕೋಲಿ ಸಮಾಜದ ಅಧ್ಯಕ್ಷ ಅಯ್ಯಣ್ಣ ಕನ್ಯಾಕೊಳ್ಳೂರ, ಸತ್ಯನಾರಾಯಣ ದೊರೆ, ಶಶಿ ಅನೇಗುಂದಿ, ಕೆಂಚಪ್ಪ ನಗನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT