ಕೆಂಭಾವಿ: ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ಕೆಂಭಾವಿಯಲ್ಲಿ ಬೆಂಬಲ ವ್ಯಕ್ತಪಡಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ಗೆ ನಡೆಸಲಾಯಿತು.

ರೈತ ಸಂಘಟನೆಗಳ ಸಮನ್ವಯ ಸಮಿತಿ ಯಾದಗಿರಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಹೋಬಳಿ ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಘೋಷಣೆ ಕೂಗಿದರು.

ಆರ್ಕೆಎಸ್ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ, ಆಳುವ ಸರ್ಕಾರಗಳ ನಿರಂತರ ರೈತ ವಿರೋಧಿ ನೀತಿಗಳಿಂದ ಉಂಟಾಗಿರುವ ಕೃಷಿ ಬಿಕ್ಕಟ್ಟಿನ ಫಲವಾಗಿ ರೈತರ ಮತ್ತು ಕೃಷಿ ಕೂಲಿಕಾರರ ಆತ್ಮಹತ್ಯೆಗಳನ್ನು ತಡೆಯಲು ಸರ್ಕಾರಗಳು ಮುಂದಾಗಬೇಕು. ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆನ್ನು ಜಾರಿಗೊಳಿಸಬೇಕು. ರೈತರ ಮತ್ತು ಕೃಷಿ ಕೂಲಿಕಾರರ ಸಾಲವನ್ನು ಸಂಪೂರ್ಣವಾಗಿ ಮಾಡಬೇಕು. ಋಣಮುಕ್ತ ಕಾಯ್ದೆಗಳನ್ನು ಜಾರಿಗೊಳಿಸಬೇಕು ಎಂದರು.

ಪ್ರವಾಹದಿಂದ ಬೀದಿ ಪಾಲಾಗಿರುವ ಜನರಿಗೆ ಕೂಡಲೇ ಪರಿಹಾರ ನೀಡಬೇಕು. ಬಡ ರೈತರು, ಕೃಷಿ ಕೂಲಿಕಾರರು 30-40 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಭೂಮಿಗಳ ಸಕ್ರಮಕ್ಕಾಗಿ ಕೇಂದ್ರದ ಭೂಸ್ವಾಧೀನ ಕಾಯ್ದೆಗೆ ಹಿಂದಿನ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಕೈಬಿಡಬೇಕು. ಬೆಂಬಲ ಬೆಲೆ, ಸಾಲಮನ್ನಾ, ಪ್ರವಾಹ ಪೀಡಿತರ ಪರಿಹಾರ, ರೈತ ವಿರೋಧಿ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ, ಉದ್ಯೋಗ ಖಾತರಿಯ ಕೂಲಿ ಹೆಚ್ಚಿಸಿ ಕೆಲಸದ ದಿನಗಳನ್ನು 200 ಕ್ಕೆ ಏರಿಸಬೇಕು. ತೊಗರಿಗೆ ₹10 ಸಾವಿರ ಸೇರಿದಂತೆ ಕೆಂಭಾವಿ, ಹುಣಸಗಿ, ಕಕ್ಕೇರಿ, ಸಗರ, ಗೋಗಿ, ದೋರನಹಳ್ಳಿ, ವಡಗೇರಿ, ಗುರಮಿಠಕಲ್ಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.

ಉಪತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಕೆಂಭಾವಿ ಪೊಲೀಸ್ ಠಾಣೆಯ ಪಿಎಸ್ಐ ಸುದರ್ಶನರೆಡ್ಡಿ ಅವರ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.

ರಾಮಯ್ಯ ಭೋವಿ, ಗುರಪ್ಪಗೌಡ ಹೊಸಗೌಡರ್, ರಾಮಣ್ಣಗೌಡ ಆಲಾಳ, ಸಿದ್ಧು ನಾಯ್ಕೊಡಿ, ಶಿವಶಂಕರ ಹೊಸಮನಿ, ಚನ್ನಯ್ಯಸ್ವಾಮಿ, ಶಾಂತಯ್ಯ ಹಿರೇಮಠ, ರಾಮು ಪಡಸಾಲಗಿ, ಶಿವರಾಜ ನಗನೂರ, ದೇವಿಂದ್ರಪ್ಪ ಹಿರೇಗೌಡ, ಮಲ್ಲಯ್ಯ ಮಡ್ಡಿ, ಮಲ್ಲಿಕಾರ್ಜುನ ಗಂಟಿ, ಅರ್ಜುನ ಆಲಗೂರ, ವೆಂಕಟೇಶ, ಶರಣಗೌಡ, ರಾಮನಗೌಡ ಗೂಗಲ್, ಶಿವಶಂಕರ ಯಕ್ತಾಪುರ, ಸಿದ್ಧು ಯಕ್ತಾಪುರ, ರಾಮಣ್ಣ ಪಡಸಾಲಗಿ, ಹಣಮಂತ್ರಾಯ ಬಿಂಗೇರಿ, ಪ್ರಭುಗೌಡ ಗೂಗಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.