ಬುಧವಾರ, ಜುಲೈ 28, 2021
21 °C
ಸಾರಿಗೆ ಸಂಸ್ಥೆಯಿಂದ ಅಂತರ ರಾಜ್ಯ ಬಸ್ ಓಡಾಟವಿಲ್ಲ

ಯಾದಗಿರಿ | ಅಂತರ ರಾಜ್ಯ ಗಡಿ ಓಪನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಐದನೇಯ ಹಂತದ ಲಾಕ್‌ಡೌನ್‌ ಸಡಿಲಿಕೆಯಾಗಿದ್ದರಿಂದ ಜಿಲ್ಲೆಯಿಂದ ಅಂತರ ರಾಜ್ಯ ಗಡಿ ಓಪನ್‌ ಆಗಿದೆ. ಆದರೆ, ಸಾರಿಗೆ ಸಂಸ್ಥೆಯಿಂದ ಅಂತರ ರಾಜ್ಯ ಬಸ್ ಓಡಾಟ ಇನ್ನೂ ಆರಂಭವಾಗಿಲ್ಲ. ಸರ್ಕಾರದಿಂದ ಮಾರ್ಗಸೂಚಿ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್‌ 8 ರವರೆಗೂ ಸಮಯವಿದೆ. ಗುರುಮಠಕಲ್ ಡಿಪೋದಿಂದ ತೆಲಂಗಾಣಕ್ಕೆ ಬಸ್‌ ಇನ್ನೂ ಓಡಾಟ ಆರಂಭವಾಗಿಲ್ಲ. ಗಡಿ ಭಾಗದಲ್ಲಿ ಪರವಾನಗಿ ಇರುವ ಖಾಸಗಿ ವಾಹನಗಳ ಸಂಚಾರ ಮುಂದುವರೆದಿದೆ. ಚೆಕ್ ಪೋಸ್ಟ್‌ಗಳಲ್ಲಿ ಸಿಬ್ಬಂದಿಯ ಕಡಿತ ಮಾಡಲಾಗಿದೆ.

ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗದ ಕಡೇಚೂರ ಸಮೀಪ ನಿರ್ಮಿಸಿದ ಚೆಕ್ ಪೋಸ್ಟ್ ಮೂಲಕ ಸೋಮವಾರ ಖಾಸಗಿ ವಾಹನಗಳು ಸಂಚರಿಸಿವೆ. ಕಲಬುರ್ಗಿಯಿಂದ ರಾಯಚೂರು 5, ಯಾದಗಿರಿಯಿಂದ ರಾಯಚೂರು 5, ರಾಯಚೂರು, ಸೈದಾಪುರ, ಯಾದಗಿರಿ, ಕಲಬುರ್ಗಿಗೆ 15, ತೆಲಂಗಾಣ ರಾಜ್ಯದ ಸಂಗಾರೆಡ್ಡಿ ತಾಲ್ಲೂಕಿನಿಂದ ಗೋಕಾಕ್ 1 ವಾಹನ ಸಂಚರಿಸಿವೆ.

‘ಸೇವಾ ಸಿಂಧು ಆ್ಯಪ್‌ ಮೂಲಕ ಹೆಸರು ನೋಂದಾಯಿಸಿಕೊಂಡು ಬೇರೆ ರಾಜ್ಯದವರು ಜಿಲ್ಲೆಗೆ ಬರಬಹುದು. ಚೆಕ್‌ಪೋಸ್ಟ್‌ಗಳಲ್ಲಿ ಸ್ಕ್ರಿನೀಂಗ್‌ ಮಾಡಿ ಕಳಿಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***

ಅಂತರ ಜಿಲ್ಲೆಗಳ ಓಡಾಟ ಸಾಮಾನ್ಯವಾಗಿದೆ. ಬೇರೆ ರಾಜ್ಯದಿಂದ ನಮ್ಮ ಮಾರ್ಗವಾಗಿ ಬೇರೆ ಜಿಲ್ಲೆಗೆ ಹೋದರೆ ಯಾವುದೇ ಸಮಸ್ಯೆ ಇಲ್ಲ. ಜಿಲ್ಲೆಗೆ ಬಂದರೆ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗುತ್ತಿದೆ.
–ಋಷಿಕೇಶ ಭಗವಾನ್‌ ಸೋನವಣೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು