ಕಡೇಚೂರು (ಸೈದಾಪುರ): ‘ಈ ಪ್ರದೇಶದಲ್ಲಿ ದೊಡ್ಡ-ದೊಡ್ಡ ಕೈಗಾರಿಕೆಗಳು ಬರುತ್ತವೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಉದ್ಯೋಗ ದೊರುಕುತ್ತದೆ ಎಂದು ನಾವು ಭೂಮಿ ನಿಡಿದ್ದೇವು. ಆದರೆ ಇಂದು ಭೂಮಿಯೂ ಇಲ್ಲ, ಇತ್ತ ಉದ್ಯೋಗವು ಇಲ್ಲದಂತಾಗಿದೆ. ಹೀಗಾಗಿ ಉದ್ಯೋಗ ನೀಡಿ ಇಲ್ಲವೇ ನಮ್ಮ ನಮಗೆ ನೀಡಿ’ ಎಂದು ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದ ಕಡೇಚೂರು-ಬಾಡಿಯಾಳ ಕೈಗಾರಿಕೆಗಳಿಗೆ ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಕೈಗಾರಿಕಾ ಪ್ರದೇಶದಲ್ಲಿರುವ ರೈಲು ಬೋಗಿ ಕಾರ್ಖಾನೆ ಎದುರು ರೈತರು ಪ್ರತಿಭಟನೆ ನಡೆಸಿದರು.

‘ಈ ಪ್ರದೇಶದಲ್ಲಿ ರೈಲು ಬೋಗಿ ಕಾರ್ಖಾನೆ ನಿರ್ಮಾಣಗೊಂಡು ಮುಂಬರುವ ದಿನಗಳಲ್ಲಿ ನಮ್ಮ ಕುಟುಂಬದವರೆಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆಯಿಂದ ಶೆಟ್ಟಿಹಳ್ಳಿ, ಕಡೇಚೂರು ಮತ್ತು ಬಾಡಿಯಾಳ ಗ್ರಾಮದ ರೈತರು ಭೂಮಿಯನ್ನು ನೀಡಿದ್ದೇವೆ. ಆದರೆ ಪ್ರಸ್ತುತ ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿ ಸ್ಥಾಪಿಸಿರುವ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ ಇಲ್ಲವೇ ನಿಮ್ಮ ಕಾರ್ಖಾನೆಯನ್ನು ಬಂದ್ ಮಾಡಿ’ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ರೈಲು ಬೋಗಿ ಕಾರ್ಖಾನೆಯ ಅಧಿಕಾರಿಗಳಿಗೆ ರೈತರು ತರಾಟೆಗೆ ತೆಗೆದುಕೊಂಡು, ‘ನಮ್ಮ ಈ ಸಮಸ್ಯೆಯನ್ನು ಯಾವಾಗ ಪರಿಹರಿಸುತ್ತಿರಿ, ಕಾರ್ಖಾನೆ ಸ್ಥಾಪನೆಯಾಗಿ ಒಂದು ದಶಕ ಕಳೆದರು ಯಾವೊಬ್ಬ ಭೂ ಸಂತ್ರಸ್ತರಿಗೆ ನೀವು ಉದ್ಯೋಗ ನೀಡಲು ಮೀನಮೇಷ ಏಣಿಸುತ್ತಿದ್ದಿರಿ’ ಎಂದು ಅಧಿಕಾರಿಗಳ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ರೈತರು ಮತ್ತು ಕಾರ್ಖಾನೆ ಅಧಿಕಾರಿಗಳ ಮಧ್ಯೆ ಸಂಧಾನ ಏರ್ಪಡಿಸಿದ ನಂತರ ರೈತರು ಮನವಿ ಪತ್ರ ಸಲ್ಲಿಸಿ ಹೋರಾಟವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದರು.

ಆದರೆ ಮುಂದಿನ 15 ದಿನಗಳಲ್ಲಿ ರೈಲ್ವೇ ಇಲಾಖೆಯಿಂದ ಯಾವುದೆ ಪ್ರತಿಕ್ರಿಯೆ ಬಾರದಿದ್ದರೆ, ರೈಲ್ವೇ ಬೋಗಿ ಕಾರ್ಖಾನೆಗೆ ಬೀಗ ಜಡಿದು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ರೈತ ಮುಖಂಡರಾದ ಸಿದ್ದಣ್ಣಗೌಡ ಕಡೇಚೂರು, ನಿರಂಜನರೆಡ್ಡಿ ಪಾಟೀಲ ಶೆಟ್ಟಿಹಳ್ಳಿ, ಶ್ರೀದೇವಿ ಪರ್ಲಾ, ಶಂಕರಲಿಂಗಪ್ಪ ಕಡೇಚೂರು, ವಿರೇಶ ಸಜ್ಜನ್, ಚಂದ್ರುಗೌಡ ಸೈದಾಪುರ, ಶರಣುಗೌಡ ಕ್ಯಾತ್ನಾಳ, ಸುರೇಶಗೌಡ ಮಾಲಿ ಪಾಟೀಲ, ಶಂಕರಗೌಡ, ಶ್ರೀಧರ ಪರ್ಲಾ, ಹುಸೇನಪ್ಪ ಕಡೇಚೂರು, ಕಾಶಿನಾಥ ಮಡಿವಾಳ್, ಹಣಮಂತ್ರಾಯ ಗುಡ್ಲೆ, ಬಸಪ್ಪ ಮಡಿವಾಳ, ಬೀರಪ್ಪ ತೆಗ್ಗಿನಮನೆ, ಭೀಮು ಗೂಡೆಬಲ್ಲೂರು, ಕಾಶಪ್ಪ, ನಿಜಲಿಂಗಪ್ಪ, ದಶರಥ ಮಂತ್ರಿ, ಜಗನಾಥ ಮಡಿವಾಳ, ಶರಣು ಮಂತ್ರಿ, ದಶರಥ ಉಪ್ಪಾರ್, ಮಹಾದೇವಪ್ಪ ಹೊನ್ನಕೇರಾ, ಮಾಳಪ್ಪ ಪಾಪಣ್ಣೋರ್, ಗುರು ಮಹೇಂದ್ರ, ರಾಜಪ್ಪ ಮಡಿವಾಳ್, ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.