ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಕ್ಕೇರಾ: ಪುರಸಭೆಯಾದರೂ ಅಭಿವೃದ್ದಿ ಕುಂಠಿತ 

ಮಹಾಂತೇಶ ಸಿ. ಹೊಗರಿ
Published 3 ಏಪ್ರಿಲ್ 2024, 5:22 IST
Last Updated 3 ಏಪ್ರಿಲ್ 2024, 5:22 IST
ಅಕ್ಷರ ಗಾತ್ರ

ಕಕ್ಕೇರಾ: ಪುರಸಭೆ ಮಳಿಗೆಗಳು ಉದ್ಘಾಟನೆಯಾಗಿ 40 ತಿಂಗಳುಗಳಾಗಿವೆ. ಹಾರಾಜು ಆಗಿ 4 ತಿಂಗಳಾದರೂ ಬಿಡ್‌ದಾರರು ಇನ್ನೂ ಪುರಸಭೆ ಹಣ ಪಾವತಿಸಿಲ್ಲ. ಅಧಿಕಾರಿಗಳು, ಸಿಬ್ಬಂದಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

2019-20ನೇ ಸಾಲಿನ ನಗರೋತ್ಥಾನ 3ನೇ ಹಂತ ಹಾಗೂ ಎಸ್‌ಎಫ್‌ಸಿ ಮತ್ತು 14ನೇ ಹಣಕಾಸು ಯೋಜನೆ ಅಡಿಯಲ್ಲಿ 8ನೇ ವಾರ್ಡ್‌ ವ್ಯಾಪ್ತಿಯ ವಾಲ್ಮೀಕಿ ವೃತ್ತದ ಬಳಿ ₹55ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ 18 ಮಳಿಗೆಗಳನ್ನು 2021ರ ಜನವರಿ 7ರಂದು ಆಗಿನ ಶಾಸಕ ರಾಜುಗೌಡ ಉದ್ಘಾಟನೆ ಮಾಡಿದ್ದರು. 

ಮರುದಿನವೇ ನಡೆದ ಸಾಮನ್ಯ ಸಭೆಯಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಅಂದಿನ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿತ್ತು. 2021ರ ಡಿಸೆಂಬರ್ ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ಎದುರಾದ ಪ್ರಯುಕ್ತ ಹರಾಜು ಪ್ರಕ್ರಿಯೆಗಳು ಜರುಗಿರಲಿಲ್ಲ. ಆದರೂ ಪುರಸಭೆ ಸದಸ್ಯ ರಾಜೂ ಹವಾಲ್ದಾರ್ ಈ ಹಿಂದೆ ಇದ್ದ ವ್ಯಾಪಾರಸ್ಥರಿಗೆ ಕೊಡುವುದು ಸೂಕ್ತ ಎಂದರೂ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ.

‘ಮುಖ್ಯಾಧಿಕಾರಿ ಪ್ರವೀಣಕುಮಾರ ಒಂದು ದಿನದ ಕೆಲಸಕ್ಕೆ ತಿಂಗಳು ಕಾಯಿಸುತ್ತಾರೆ. ಸಿಬ್ಬಂದಿಯಂತೂ ಕೆಲಸ ಮಾಡದೇ ಕಾಲಹರಣ ಮಾಡುತ್ತಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎನ್ನುವುದು ಸ್ಥಳೀಯರು, ಪುರಸಭೆ ಸದಸ್ಯರ ಆರೋಪ.

ಬೇಸಿಗೆ ಆರಂಭವಾದರೂ ಮುಖ್ಯಾಧಿಕಾರಿ ಯಾವ ಸಭೆ ಮಾಡಿರುವುದಿಲ್ಲ. ಅವರು 23 ವಾರ್ಡಗಳಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬೇಸಿಗೆಕಾಲದಲ್ಲಿ ಇದ್ದು, ಸಮಸ್ಯೆಯನ್ನು ಬೇಗ ಪರಿಹರಿಸಬೇಕೆಂದು ಸಾರ್ವಜನಿಕರು ಮನವಿ.

2023-24ನೇ ಸಾಲಿನ 15ನೇ ಹಣಕಾಸಿನ ಅಂದಾಜು 3 ಕೋಟಿ ಹಣ ಮರಳಿ ಸಕರ್ಾರ ಬೊಕ್ಕಸಕ್ಕೆ ಹೋಗಿದ್ದು, ಅಧಿಕಾರಿಗಳು, ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸದ, ನಿರ್ಲಕ್ಷ ತೋರಿದ ಪ್ರಯುಕ್ತ ಪಟ್ಟಣ ಅಭಿವೃದ್ದಿಗೆ ಬಂದ ಹಣ ಮರಳಿ ಹೋದ ಪ್ರಯುಕ್ತ ನೇರವಾಗಿ ಮುಖ್ಯಾಧಿಕಾರಿ, ಕಿರಿಯ ಅಭಿಯಂತರರು ಎಂದು ಪುರಸಭೆ ಸದಸ್ಯ ನಿಂಗಪ್ಪನಾಯ್ಕ್, ಪರಶುರಾಮ ಗೋವಿಂದರ್, ಸದ್ದಾಂಹುಸೇನ್, ದೇವಿಂದ್ರಪ್ಪ ದೇಸಾಯಿ, ಅಯ್ಯಾಳಪ್ಪ ಪೂಜಾರಿ, ಪರಮವ್ವ ಮಲಮುತ್ತಿ , ಶಿಲ್ಪಾ ರಾಠೋಡ್,ಲಕ್ಷ್ಮೀಬಾಯಿ ಪಾಂಡ್ರೀ, ಪರಮಣ್ಣ ಕಮತಗಿ, ಭೀಮಣ್ಣ ಚಿಂಚೋಡಿ ಆರೋಪಿಸಿದ್ದು, ಶೀಘ್ರವೇ ಇವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


ಪುರಸಭೆ ಕಾಯರ್ಾಲಯದ ಹಿಂಬದಿಯಲ್ಲಿ ತ್ಯಾಜ್ಯ ವಿಂಗಡಣೆ ಯಂತ್ರ ಅಂದಾಜು 50 ಲಕ್ಷಕ್ಕೂ ಹೆಚ್ಚಿನ ಯಂತ್ರಗಳು ಸುಮಾರು 2ವರ್ಷಗಳಿಂದ ತುಕ್ಕು ಹಿಡಿದು ಬಿದ್ದಿದ್ದು, ವಿವಿಧ ಸಂಘಟನೆಗಳು ಇದರ ಬಗ್ಗೆ ವಿಚಾರಿಸಿದರೂ ಎಚ್ಚೆತ್ತುಗೊಳ್ಳದ ಮುಖ್ಯಾಧಿಕಾರಿ, ಸಿಬ್ಬಂದಿಗಳನ್ನು ಸಂಪೂರ್ಣವಾಗಿ ಬೇರೆ ಕಡೆ ವಗರ್ಾಯಿಸಬೇಕೆಂದು ಮಹಷರ್ಿ ವಾಲ್ಮೀಕಿ ಸಂಘದ ಅಧ್ಯಕ್ಷ ಚಂದ್ರು ವಜ್ಜಲ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.


ಒಂದುವರೆ ವರ್ಷಗಳ ಹಿಂದೆ ಟೇಲರಿಂಗ್ ಅಜರ್ಿ ಕರೆಯಲಾಗಿದ್ದು, ಅವು ಏನಾದವು ? ಎಂಬ ನಿಗೂಡ ರಹಸ್ಯಯಾಗಿ ಉಳಿದಿದ್ದು, ಏನಾದರೂ ಮುಖ್ಯಾಧಿಕಾರಿಯನ್ನು ಕೇಳಿದರೆ ಮೇಲಿಂದ ಇನ್ನು ಮಾಹಿತಿ ಬಂದಿಲ್ಲ ಎಂದು ಸಬೂಬ ಹೇಳುವುದು ರೂಡಿಯಾಗಿದೆ ಎಂದು ಅಲೆಮಾರಿ ಸಂಘದ ಕಾರ್ಯದಶರ್ಿ ರಾಘವೇಂದ್ರ ಅಂಕುಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಶಾಖೆ, ಕಂದಾಯಶಾಖೆ, ಆರೋಗ್ಯಶಾಖೆ, ವಸತಿಶಾಖೆ ಸೇರಿದಂತೆ ವಿವಿಧ ದಾಖಲಾತಿ ಸರಿಯಾಗಿ ಸಿಗುತ್ತಿಲ್ಲ, ಸರಿಯಾಗಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ, ವಿವಿಧ ಹೊಟೇಲಗಳಲ್ಲಿ ಸ್ವಚ್ಚತೆ ಬಗ್ಗೆ ವಿಚಾರಿಸಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ.


ಪಟ್ಟಣದಲ್ಲಿ ವಿವಿಧ ಕಾಮಗಾರಿ ಜರುಗುತ್ತಿದ್ದು, ಕಾಮಗಾರಿ ಅಪೂರ್ಣವಾಗಿದ್ದು, ಕಾಮಗಾರಿ ವೀಕ್ಷಣೆ ಮಾಡದೇ, ಬಿಲ್ ಪಾವತಿ ಮಾಡಿ, ಕಮೀಷನ್ ಪಡೆಯುತ್ತಾರೆಂದು ಪುರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ಆರೋಪಿಸಿದ್ದಾರೆ. ಕೂಡಲೇ ರೇಣುಕಮ್ಮ ಕಿರಿಯ ಅಭಿಯಂತರನ್ನು ಅಮಾನತ್ತು ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಬೀದಿ ದ್ವೀಪಗಳು ವಿವಿಧೆಡೆ ಆರಂಭವಾಗಿನಿಂದಲೂ ಸಮಸ್ಯೆಗಳಿದ್ದು ಹಲವಾರು ಸಲ ಮನವಿ, ಹಾಗೂ ಕಂಬಗಳು ಬಿದ್ದಿದ್ದು ಅವುಗಳನ್ನು ತೆಗೆದುಕೊಂಡು ಹೋಗಿದ್ದು ಏನಾದವು ಎಂದು ತಿಳಿಯದಾಗಿದ್ದು, ವಿದ್ಯುತ್ ಬಲ್ಪ್ ಗುತ್ತಿಗೆದಾರರಿಂದ ಕಡಿಮೆ ಗುಣಮಟ್ಟ ಸಾಮಾಗ್ರಿಗಳನ್ನು ಖರೀದಿಸಿ, ಕಮೀಷನ್ ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ಪುರಸಭೆ ಸದಸ್ಯರಾದ ಅಮರೇಶ ದೊರೆ, ಸದ್ದಾಂಹುಸೇನ್, ಶ್ರೀದೇವಿ ಕುರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಕ್ಕೇರಾ ಪಟ್ಟಣದ ಪುರಸಭೆ
ಕಕ್ಕೇರಾ ಪಟ್ಟಣದ ಪುರಸಭೆ
30ಕೆಕೆಆರ್02: ಪುರಸಭೆ ಕಾಯರ್ಾಲಯದ ಹಿಂಬದಿಯಲ್ಲಿ ನೂತನ ತ್ಯಾಜ್ಯ ವಿಂಗಡಣೆ ಯಂತ್ರ ಉಪಯೋಗಿಸದ ಪ್ರಯುಕ್ತ ಹಾಳಾಗಿರುವುದು.
30ಕೆಕೆಆರ್02: ಪುರಸಭೆ ಕಾಯರ್ಾಲಯದ ಹಿಂಬದಿಯಲ್ಲಿ ನೂತನ ತ್ಯಾಜ್ಯ ವಿಂಗಡಣೆ ಯಂತ್ರ ಉಪಯೋಗಿಸದ ಪ್ರಯುಕ್ತ ಹಾಳಾಗಿರುವುದು.

ಪುರಸಭೆ ಮುಖ್ಯಾಧಿಕಾರಿ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸಲ್ಲ. ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಾರೆ. ಇವರ ನಡೆಯಿಂದ ಸಾರ್ವಜನಿಕರು ಬೇಸತ್ತಿದ್ದು ಅವರನ್ನು ವರ್ಗಾವಣೆ ಮಾಡಬೇಕು -ದೇವಿಂದ್ರಪ್ಪ ಬಳಿಚಕ್ರ ಸ್ಥಳೀಯ

ಅಭಿವೃದ್ದಿ ಬಗ್ಗೆ ಹಲವು ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕುಡಿಯುವ ನೀರು ವಿದ್ಯುತ್ ಬಲ್ಬ್‌ ಬ್ಲೀಚಿಂಗ್ ಪೌಡರ್ ಬಗ್ಗೆ ಹೇಳಿದರೂ ಗಮನಹರಿಸಿಲ್ಲ

-ಆಯುಬ್ ಅಹಿಂದ್ ಒಕ್ಕೂಟದ ಅಧ್ಯಕ್ಷ

ಪುರಸಭೆ ಮುಖ್ಯಾಧಿಕಾರಿ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸಲ್ಲ. 15ನೇ ಹಣಕಾಸು ಅನುದಾನ ಮರಳಿ ಹೋಗಿದ್ದರಿಂದ ಹಿನ್ನಡೆಯಾಗಿದ್ದು ಕೂಡಲೇ ಸಿಬ್ಬಂದಿಯನ್ನು ಬೇರೆ ವರ್ಗಾಯಿಸಬೇಕು. ಇಲ್ಲದಿದ್ದರೆ ಸದಸ್ಯರೆಲ್ಲರೂ ಹೋರಾಟ ಮಾಡಬೇಕಾಗುತ್ತದೆ

-ಪರಶುರಾಮ ಗೋವಿಂದರ್ ಪುರಸಭೆ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT